ಅಭಿಮಾನಿ ಆತ್ಮಹತ್ಯೆ; ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಎಸ್​​ವೈ

ಅಭಿಮಾನಿ ಆತ್ಮಹತ್ಯೆ; ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಎಸ್​​ವೈ

ಚಾಮರಾಜನಗರ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ ಮನನೊಂದ ಬಿಎಸ್​ವೈ ಅಭಿಮಾನಿ ರವಿ ನೇಣಿಗೆ ಶರಣಾಗಿ ಸಾವನ್ನಪ್ಪಿದ್ರು.  ಇದೀಗ, ಮೃತ ರವಿಯವರ ತಾಯಿ ಬಳಿ ಮಾಜಿ ಸಿಎಂ ಬಿಎಸ್​ವೈ ಫೋನ್​ ಮೂಲಕ ಧೈರ್ಯ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರವಿಯವರ ತಾಯಿ ಬಳಿ ಮಾತನಾಡಿದ ಬಿಎಸ್ವೈ​, ಇನ್ನೂ, ಮೂರು‌ ದಿನಗಳಲ್ಲಿ ನೇರವಾಗಿ ನಿಮ್ಮ‌ ಮನೆಗೆ ಬರತ್ತೇನೆ ಅಂತ ಧೈರ್ಯ ತುಂಬಿದ್ದಾರೆ. ಅಲ್ಲದೇ, ಮೃತ ರವಿಯವರ ಅಂತಿಮ ನಮನ‌ ಸಲ್ಲಿಸಲು ಬಿ‌ಎಸ್ವೈ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ಆಗಮಿಸಿದ್ರು. ಈ ವೇಳೆ ಅವ್ರ ಫೋನ್​ನಿಂದಲೇ ಮೃತ ರವಿಯವರ ತಾಯಿ ಬಿಎಸ್​ವೈ ಬಳಿ ಮಾತನಾಡಿದ್ರು.

blank

The post ಅಭಿಮಾನಿ ಆತ್ಮಹತ್ಯೆ; ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಎಸ್​​ವೈ appeared first on News First Kannada.

Source: newsfirstlive.com

Source link