ಆಗಸ್ಟ್​ನಿಂದ ಮಕ್ಕಳಿಗೆ ಕೊರೊನಾ ಲಸಿಕೆ ನಿರೀಕ್ಷೆ -ಕೇಂದ್ರ ಆರೋಗ್ಯ ಸಚಿವ

ಆಗಸ್ಟ್​ನಿಂದ ಮಕ್ಕಳಿಗೆ ಕೊರೊನಾ ಲಸಿಕೆ ನಿರೀಕ್ಷೆ -ಕೇಂದ್ರ ಆರೋಗ್ಯ ಸಚಿವ

ನವದೆಹಲಿ: ಆಗಸ್ಟ್‌ನಿಂದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ನಿರೀಕ್ಷೆಯಿದೆ ಅಂತಾ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡೆೋವಿಯಾ ಹೇಳಿದ್ದಾರೆ.

ಮಕ್ಕಳ ಮೇಲೆ ಭಾರತ್ ಬಯೋಟೆಕ್‌ ಸಿದ್ಧಪಡಿಸಿದ, ಕೋವಾಕ್ಸಿನ್ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆ ಇದೆ ಎಂದು ಕಳೆದ ವಾರ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದರು. ಪ್ರಸ್ತುತ ದೆಹಲಿ ಏಮ್ಸ್‌ನಲ್ಲಿ 2 ರಿಂದ 6 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಗಳು ನಡೆಯುತ್ತಿವೆ.

blank

ಮಕ್ಕಳ ಮೇಲೆ ‘ಕೋವೊವ್ಯಾಕ್ಸ್‌’​ ಟ್ರಯಲ್​ಗೆ ಅನುಮತಿ
2 ರಿಂದ 17 ವರ್ಷ ವಯೋಮಾನದವರ ಮೇಲೆ ಕೋವಿಡ್‌ ಲಸಿಕೆ ‘ಕೋವೊವ್ಯಾಕ್ಸ್‌’ನ 2 ಮತ್ತು 3ನೇ ಹಂತದ ಟ್ರಯಲ್‌ಗಳನ್ನು ನಡೆಸಲು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾಗೆ ಅನುಮತಿ ನೀಡುವಂತೆ ಡಿಸಿಜಿಐ ಶಿಫಾರಸು ಮಾಡಿದೆ.

ಅಮೆರಿಕ ಮೂಲದ ನೋವಾವ್ಯಾಕ್ಸ್‌ ಕಂಪನಿ ‘ಕೋವೊವ್ಯಾಕ್ಸ್‌’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಈ ಲಸಿಕೆಯ ಉತ್ಪಾದನೆಗೆ ಎಸ್‌ಐಐಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಕಂಪನಿ ಪರವಾನಗಿ ನೀಡಿದೆ. ‘ಕೆಲವು ಷರತ್ತುಗಳೊಂದಿಗೆ ಟ್ರಯಲ್‌ ನಡೆಸಲು ಅನುಮತಿ ನೀಡುವಂತೆ ಡಿಸಿಜಿಐ ಕೇಂದ್ರ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.

The post ಆಗಸ್ಟ್​ನಿಂದ ಮಕ್ಕಳಿಗೆ ಕೊರೊನಾ ಲಸಿಕೆ ನಿರೀಕ್ಷೆ -ಕೇಂದ್ರ ಆರೋಗ್ಯ ಸಚಿವ appeared first on News First Kannada.

Source: newsfirstlive.com

Source link