ಪ್ರಮಾಣ ವಚನದ ಬಳಿಕ ಮೊದಲಿಗೆ ಸಣ್ಣ ಕ್ಯಾಬಿನೆಟ್ ರಚನೆ ಮಾಡ್ತೇನೆ -ಬಸವರಾಜ ಬೊಮ್ಮಾಯಿ

ಪ್ರಮಾಣ ವಚನದ ಬಳಿಕ ಮೊದಲಿಗೆ ಸಣ್ಣ ಕ್ಯಾಬಿನೆಟ್ ರಚನೆ ಮಾಡ್ತೇನೆ -ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಸವರಾಜ ಬೊಮ್ಮಾಯಿ ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಸವರಾಜ ಬೊಮ್ಮಾಯಿ.. ಇಂದು ನಾನು ಒಬ್ಬನೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದು, ಇದಕ್ಕೂ ಮುನ್ನ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರ ಬಳಿ ಚರ್ಚೆ ನಡೆಸಿದ ಬಳಿಕ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಇದಾದ ಮೇಲೆ ಸಣ್ಣ ಕ್ಯಾಬಿನೇಟ್​ ರಚನೆ ಮಾಡಲಿದ್ದೇನೆ. ಇಂದು ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಲಿದ್ದೇನೆ. ರಾಜ್ಯದಲ್ಲಿ ಎದುರಾಗಿರುವ ನೆರೆ ಹಾಗೂ ಕೋವಿಡ್​ ಪರಿಸ್ಥಿತಿ ನಿರ್ವಹಣೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಶೀಘ್ರವೇ ಕ್ಯಾಬಿನೆಟ್​ ವಿಸ್ತರಣೆಯೂ ನಡೆಯಲಿದೆ. ಇವತ್ತು ಎಲ್ಲವನ್ನೂ ಚರ್ಚೆ ನಡೆಸಿ ನಿರ್ಧಾರ ಮಾಡಲಿದ್ದೇನೆ. ಸದ್ಯ ದೇವರ ದರ್ಶನ ಪಡೆದು ಕೆಕೆ ಗೆಸ್ಟ್​ ಹೌಸ್​​ಗೆ ತೆರಳಲಿದ್ದೇನೆ. ರಾಜ್ಯ ಪ್ರವಾಸ ಮಾಡಿ ಉತ್ತಮ ಆಡಳಿತ ನೀಡುವ ಬಗ್ಗೆ ಅಧಿಕಾರಗಳ ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಬಸವ’ರಾಜ’ ಪಟ್ಟಾಭಿಷೇಕ -11 ಗಂಟೆಗೆ ನೂತನ ಸಿಎಂ ಪ್ರಮಾಣ ವಚನಕ್ಕೆ ಭರ್ಜರಿ ಸಿದ್ಧತೆ

The post ಪ್ರಮಾಣ ವಚನದ ಬಳಿಕ ಮೊದಲಿಗೆ ಸಣ್ಣ ಕ್ಯಾಬಿನೆಟ್ ರಚನೆ ಮಾಡ್ತೇನೆ -ಬಸವರಾಜ ಬೊಮ್ಮಾಯಿ appeared first on News First Kannada.

Source: newsfirstlive.com

Source link