ವರ್ತೂರು ಪ್ರಕಾಶ್ ಕಿಡ್ನಾಪ್, ಫೈನಾನ್ಶಿಯರ್ ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಬಿತ್ತು ಗುಂಡೇಟು

ವರ್ತೂರು ಪ್ರಕಾಶ್ ಕಿಡ್ನಾಪ್, ಫೈನಾನ್ಶಿಯರ್ ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಬಿತ್ತು ಗುಂಡೇಟು

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್​ ಅಪಹರಣ ಪ್ರಕರಣದ ಆರೋಪಿಗಳ ಕಾಲಿಗೆ ಬೆಂಗಳೂರು ಪೊಲೀಸರು ಗುಂಡಿಟ್ಟಿರುವ ಘಟನೆ ನಗರದ ಬೈಯ್ಯಪ್ಪನ ಹಳ್ಳಿ ಬಳಿ ನಡೆದಿದೆ.

ಆರೋಪಿಗಳಾಗಿರುವ ಕವಿರಾಜ್​​ ಹಾಗೂ ಅಮರೇಶ್​ ಕಾಲಿಗೆ ಗುಂಡೇಟು ಬಿದ್ದಿದ್ದು, ಇಂದಿರಾನಗರ ಇನ್ಸ್​​ಪೆಕ್ಟರ್​ ಹರೀಶ್ ಅವರು ಕವಿರಾಜ್ ಕಾಲಿಗೆ ಗುಂಡು ಹಾರಿಸಿದ್ದು, ಎಸಿಪಿ ಕುಮಾರ್ ರಿಂದ ಅಮರೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

blank

ವರ್ತೂರ್ ಪ್ರಕಾಶ್​ ಕಿಡ್ನಾಪ್​​ ಪ್ರಕರಣದಲ್ಲಿ ಕವಿರಾಜ್ ಹಾಗೂ ಅಮರೇಶ್ ಎ1 ಆರೋಪಿಗಳಾಗಿದ್ದರು. ಪ್ರಕರಣದಲ್ಲಿ ಕವಿರಾಜ್​ ಅಂಡ್​ ಟೀಂ ಜೈಲು ಸೇರಿತ್ತು. ಆದರೆ ಆ ಬಳಿಕ ಬಿಡುಗಡೆಯಾಗಿದ್ದರು. ಜೈಲಿನಿಂದ ಬಂದ ಮೇಲೆ ಇಂದಿರಾನಗರ ಉದ್ಯಮಿ ವಿಜಯ್​​ ಕುಮಾರ್​​ರನ್ನು ಕಿಡ್ನಾಪ್ ಮಾಡಿದ್ದ ಕವಿರಾಜ್, ಜುಲೈ 5ರಂದು ಆತನನ್ನು ಹೊಸೂರು ಬಳಿ ಕೊಲೆ ಮಾಡಿ ಪರಾರಿಯಾಗಿದ್ದರು.

ಆರೋಪಿಗಳು ಕೊಲೆ ಮಾಡಿದ ಬಳಿಕ ಬೈಯ್ಯಪ್ಪನಹಳ್ಳಿ ಬಳಿ ತಲೆ ಮರೆಸಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಆರೋಪಿಗಳ ಕಾಳಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

blank

ಜುಲೈ 05ರಂದು ಸ್ನೇಹಿತ ಅಂಬರೀಶ್ ಎಂಬಾತ ಉದ್ಯಮಿ ವಿಜಯ್​ರನ್ನು ಲ್ಯಾಂಡ್ ತೋರಿಸೋದಾಗಿ ಕರೆದುಕೊಂಡು ಹೋಗಿದ್ದ ವೇಳೆ ಆರೋಪಿಗಳು ಹೊಸಕೋಟೆ ಟೋಲ್ ಬಳಿ ಎರಡು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದರು. ಈ ವೇಳೆ 30 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟದ್ದರು ಎನ್ನಲಾಗಿತ್ತು. ಆದರೆ ಕಿಡ್ನಾಪ್ ವಿಚಾರ ಪೊಲೀಸರಿಗೆ ತಿಳಿಯುತ್ತಿದಂತೆ ಉದ್ಯಮಿಯನ್ನು ತಮಿಳುನಾಡಿನ ಹೊಸೂರು ಬಳಿ ಉದ್ಯಮಿಯನ್ನು ಕೊಲೆ ಮಾಡಿದ್ದರು ಎಂಬ ಆರೋಪವಿದೆ. ಈ ಹಿಂದೆಯೂ ಮಾಜಿ ಸಚಿವ ವರ್ತೂರು ಪ್ರಕಾಶ್ ರನ್ನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ 30 ಕೋಟಿಗೆ ಡಿಮ್ಯಾಂಡ್ ಮಾಡಿತ್ತು. ಈ ವೇಳೆ ವರ್ತೂರು ಪ್ರಕಾಶ್​ ಕಾರು ಚಾಲಕ 48 ಲಕ್ಷ ರೂಪಾಯಿಗಳನ್ನು ಆರೋಪಿಗಳಿಗೆ ನೀಡಿದ್ದ. ಆದರೆ ಮಾಜಿ ಸಚಿವ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಇದೀಗ ಫೈನಾನ್ಸಿಯರ್ ಕಿಡ್ನಾಪ್ ಮಾಡಿ ಕೊಲೆಗೈದಿದೆ ಎನ್ನಲಾಗಿದೆ.

blank
ಉದ್ಯಮಿ ವಿಜಯ್​​ ಕುಮಾರ್​​

The post ವರ್ತೂರು ಪ್ರಕಾಶ್ ಕಿಡ್ನಾಪ್, ಫೈನಾನ್ಶಿಯರ್ ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಬಿತ್ತು ಗುಂಡೇಟು appeared first on News First Kannada.

Source: newsfirstlive.com

Source link