ಬಿಗ್​ಬಾಸ್ ಮನೆಯಲ್ಲಿ ಡಿಫರೆಂಟ್​ ಟಾಸ್ಕ್​ಗಳ ಟ್ವಿಸ್ಟ್.. ಕಂಟೆಸ್ಟೆಂಟ್​​ಗಳು ಸುಸ್ತೋ ಸುಸ್ತು

ಬಿಗ್​ಬಾಸ್ ಮನೆಯಲ್ಲಿ ಡಿಫರೆಂಟ್​ ಟಾಸ್ಕ್​ಗಳ ಟ್ವಿಸ್ಟ್.. ಕಂಟೆಸ್ಟೆಂಟ್​​ಗಳು ಸುಸ್ತೋ ಸುಸ್ತು

ಬಿಗ್​ ಬಾಸ್​ ನೀಡುತ್ತಿರುವ ಟ್ವಿಸ್ಟ್​ಗೆ ಬಿಗ್​ ಮನೆಯ ಸದಸ್ಯರು ಸುಸ್ತೋ ಸುಸ್ತು. ಫಿನಾಲೆಗೆ ಕೇವಲ 14 ದಿನಗಳು ಮಾತ್ರವೆ ಉಳಿದಿದೆ. ಈ ಸಂದರ್ಭದಲ್ಲಿ ಪ್ರತಿ ಕ್ಷಣ ಹೊಸತನ ಸಿಗ್ತಿದೆ. ವಿಭಿನ್ನವಾದ ಟಾಸ್ಕ್​ಗಳ ಜೊತೆಗೆ ಸದಸ್ಯರ ಪೀಕಲಾಟ, ಒದ್ದಾಟ ನೋಡೋದೆ ಚಂದ.

ಈಗಾಗಲೇ ಬಿಗ್​ ಮನೆಗೆ ಟೆಲಿಫೋನ್​ ಗೆಳಯನ ಆಗಮನದ ಬಗ್ಗೆ ಹೇಳಿದ್ವಿ. ಈಗ ಮಾನವ ಸರಪಳಿ ಬಗ್ಗೆ ಹೇಳ್ತಿದ್ದೀವಿ. ವಾಹಿನಿ ಪ್ರೋಮೋ ಒಂದನ್ನ ರೀಲಿಸ್​ ಮಾಡಿದ್ದು, ಇದ್ರಲ್ಲಿ 9 ಜನ ಸದಸ್ಯರು ಒಬ್ಬರ ಕೈ ಒಬ್ಬರು ಹಿಡಿದುಕೊಂಡೇ ಇರಬೇಕು. ಅಂದ್ರೆ ಚೈನ್​ ಸಿಸ್ಟಮ್​ ತರಹ.

blank

 

ಬಿಗ್​ ಬಾಸ್ ನೀಡುವ ಟಾಸ್ಕ್​ಗಳೇ ಹಾಗೆ.. ತುಂಬಾ ಡಿಫರೆಂಟ್​. ಈಗ ಬಿಗ್​ ಮನೆಯ ಸದಸ್ಯರು ಸರಪಳಿ ರೀತಿ ಕೈ ಹಿಡಿದು ಎಲ್ಲಾ ಕೆಲಸಗಳನ್ನು ಮಾಡಬೇಕು. ಬಿಗ್​ ಬಾಸ್​ ಅವರ ಮುಂದಿನ ಆದೇಶದವರೆಗೂ ಈ ಟಾಸ್ಕ್​ ಮುಂದುವರೆಯಲಿದೆ.

ಇನ್ನೂ ನೋಡೋಕೆ ತುಂಬಾ ಫನ್ನಿಯಾಗಿ ಕಾಣಿಸುತ್ತಿರುವ ಈ ಟಾಸ್ಕ್​ ಇನ್ನೂ ಏನೇನು ಟ್ವಿಸ್ಟ್​ಗಳನ್ನ ಹೊಂದಿದೆಯೋ, ಯಾವ ಟಾಸ್ಕ್​ ಇರಲಿದೆ ಎಂದು ಕಾದು ನೋಡಬೇಕು. ಒಟ್ನಲ್ಲಿ ಫಾನ್ಸ್​ಗಂತೂ ಮನರಂಜನೆಯ ಹಬ್ಬ ಸಿಗ್ತಿರೋದಂತೂ ಸುಳ್ಳಲ್ಲ.

The post ಬಿಗ್​ಬಾಸ್ ಮನೆಯಲ್ಲಿ ಡಿಫರೆಂಟ್​ ಟಾಸ್ಕ್​ಗಳ ಟ್ವಿಸ್ಟ್.. ಕಂಟೆಸ್ಟೆಂಟ್​​ಗಳು ಸುಸ್ತೋ ಸುಸ್ತು appeared first on News First Kannada.

Source: newsfirstlive.com

Source link