ಕ್ರಿಕೆಟ್​ಗೆ ಅಲ್ಲ…! ಈಕೆಯ ಬಾಳಲ್ಲೂ ‘ದೇವರು’ ಸಚಿನ್ ತೆಂಡುಲ್ಕರ್..!

ಕ್ರಿಕೆಟ್​ಗೆ ಅಲ್ಲ…! ಈಕೆಯ ಬಾಳಲ್ಲೂ ‘ದೇವರು’ ಸಚಿನ್ ತೆಂಡುಲ್ಕರ್..!

ಸಚಿನ್ ತೆಂಡುಲ್ಕರ್, ಗಾಡ್​ ಆಫ್ ಕ್ರಿಕೆಟ್.. ಭಾರತೀಯ ಕ್ರಿಕೆಟ್​ ಪ್ರೇಮಿಗಳ ನೆಚ್ಚಿನ ಆರಾಧ್ಯ ದೈವರಾಗಿದ್ದಾರೆ.. ಆದ್ರೆ ಸಚಿನ ತಾನು ಬರೀ ಕ್ರಿಕೆಟ್ ಹಾಗೂ ಕ್ರಿಕೆಟ್​ ಪ್ರೇಮಿಗಳ ಆರಾಧ್ಯ ದೈವ ಮಾತ್ರವಲ್ಲ ಎಂಬುವುದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ. ಸಂಕಷ್ಟದಲ್ಲಿ ಸಿಲುಕಿರುವ ಹಲವರಿಗೆ ಸದಾ ನೆರವಾಗುವ ಸಚಿನ್ ಈಗ, 19 ವರ್ಷದ ಬಾಲಕಿ ದೀಪ್ತಿ ಎಂಬ ಬಾಳಲ್ಲಿ ಮಾತ್ರವಲ್ಲದೆ, ಹಲವು ವಿದ್ಯಾರ್ಥಿಗಳ ಪಾಲಿಗೂ ದೈವರಾಗಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದೀಪ್ತಿ, ಓದಿನಲ್ಲಿ ಸಾದಾ ಮುಂದಿದ್ದಳು. ಕೊರೊನಾ ಲಾಕ್​ಡೌನ್ ನಡುವೆ ಆನ್​ಲೈನ್​ ಕ್ಲಾಸ್​ನಲ್ಲೇ ವಿದ್ಯಾರ್ಥಿ ದೀಪ್ತಿ, ಉತ್ತಮ ಸ್ಕೋರ್ ಮಾಡಿದ್ದಳು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ತಮ್ಮ ಊರಿನಲ್ಲಿ ಸರಿಯಾದ ನೆಟ್​ವರ್ಕ್​ ಸಿಗದ ಕಾರಣ, ಕಿಲೋ ಮೀಟರ್​ಗಟ್ಟಲೆ ನಡೆದುಕೊಂಡು ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಕಠಿಣ ಪರಿಶ್ರಮಕ್ಕೆ ತಕ್ಕ ಅಂಕ ಪಡೆದಿದ್ದ ಈಕೆ, ನೀಟ್ ಪರೀಕ್ಷೆಯಲ್ಲೂ ಉತ್ತಮ ಱಂಕ್ ಗಳಿಸುವುದರೊಂದಿಗೆ ಅಂಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಗಿಟ್ಟಿಸಿದ್ದಳು. ಆದ್ರೆ ಕಾಲೇಜು ಶುಲ್ಕ, ಇತರೆ ಖರ್ಚುಗಳಿಗೆ ವ್ಯಯಿಸುವಷ್ಟು ಹಣ ಇಲ್ಲದೆ ಸಂಕಷ್ಟದಲ್ಲಿದ್ದಳು. ಹೀಗಾಗಿ ಡಾಕ್ಟರ್ ಓದುವ ಕನಸು ನಂಬಿಕೆಯೇ ಕಳೆದುಕೊಂಡಿದ್ದಳು. ಈ ವೇಳೆ ಸಚಿನ್ ತೆಂಡುಲ್ಕರ್​​, ವಿದ್ಯಾರ್ಥಿಯ ಕನಸು ಸಕಾರಾಗೊಳಿಸಲು ನೆರವಾಗಿದ್ದಾರೆ. ಆ ಮೂಲಕ ವಿದ್ಯಾರ್ಥಿಯ ಬಾಳಲ್ಲಿ ಬೆಳಕಾಗಿದ್ದಾರೆ. ಸಚಿನ ತೆಂಡುಲ್ಕರ್​​ರ ಈ ಮಾನವೀಯತೆಯ ಗುಣಕ್ಕೆ, ದೀಪ್ತಿ ಕೃತಜ್ಞತೆ ಸಲ್ಲಿಸಿದ್ದಾಳೆ.

The post ಕ್ರಿಕೆಟ್​ಗೆ ಅಲ್ಲ…! ಈಕೆಯ ಬಾಳಲ್ಲೂ ‘ದೇವರು’ ಸಚಿನ್ ತೆಂಡುಲ್ಕರ್..! appeared first on News First Kannada.

Source: newsfirstlive.com

Source link