ಬ್ಯಾಡ್ಮಿಂಟನ್- ಪಿ.ವಿ.ಸಿಂಧುಗೆ ಭರ್ಜರಿ ಗೆಲುವು- ನಾಕೌಟ್ ಹಂತಕ್ಕೆ ಪ್ರವೇಶ

ಬ್ಯಾಡ್ಮಿಂಟನ್- ಪಿ.ವಿ.ಸಿಂಧುಗೆ ಭರ್ಜರಿ ಗೆಲುವು- ನಾಕೌಟ್ ಹಂತಕ್ಕೆ ಪ್ರವೇಶ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧೂ, ತಮ್ಮ ನಾಗಲೋಟ ಮುಂದುವರಿಸಿದ್ದಾರೆ. ಮಹಿಳಾ ಸಿಂಗಲ್ಸ್​​ ‘ಜೆ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಪಿ.ವಿ.ಸಿಂಧೂ, ಇಂದು ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಆಟಗಾರ್ತಿ ಚೆಯುಂಗ್‌ ಗಾನ್‌ ಯಿ ವಿರುದ್ಧ ಗೆದ್ದು ಬೀಗಿದ್ದಾರೆ. ಪಂದ್ಯದ ಮೊದಲ ಸುತ್ತಿನಲ್ಲಿ ನಿರಾಸಾಧಾಯಕ 21-9 ಅಂತರದಿಂದ ಗೆದ್ದು ಮುನ್ನಡೆ ಸಾಧಿಸಿದ ಸಿಂಧೂಗೆ, 2ನೇ ಸೆಟ್​ನಲ್ಲಿ ಎದುರಾಳಿ ಚೆಯುಂಗ್‌ ಗಾನ್‌ ಪ್ರಬಲ ಪೈಪೋಟಿ ನೀಡಿದರು. ಇದರ ಹೊರತಾಗಿಯೂ 21-16 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದ ಪಿ.ವಿ.ಸಿಂಧೂ, ನಾಕೌಟ್​ ಸ್ಟೇಕ್​​ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

 

 

 

 

 

 

The post ಬ್ಯಾಡ್ಮಿಂಟನ್- ಪಿ.ವಿ.ಸಿಂಧುಗೆ ಭರ್ಜರಿ ಗೆಲುವು- ನಾಕೌಟ್ ಹಂತಕ್ಕೆ ಪ್ರವೇಶ appeared first on News First Kannada.

Source: newsfirstlive.com

Source link