ಮುಂದಿನ ಸಲ ನನ್ನನ್ನೂ ಪರಿಗಣಿಸಿ ಎಂದು ಕೇಳಿದ್ದೇಕೆ ವಿರಾಟ್​..?

ಮುಂದಿನ ಸಲ ನನ್ನನ್ನೂ ಪರಿಗಣಿಸಿ ಎಂದು ಕೇಳಿದ್ದೇಕೆ ವಿರಾಟ್​..?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್, ಆಲ್​ಸ್ಟಾರ್ಸ್ ಪುಟ್ಬಾಲ್ ಚಾರಿಟಿ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಹಾಗೂ ಶ್ರೇಯಸ್ ಅಯ್ಯರ್ ಅಭ್ಯಾಸದಲ್ಲಿ​ ಪಾಲ್ಗೊಂಡಿದ್ದರು. ಈ ವೇಳೆ ಧೋನಿ ಜೊತೆಗಿರುವ ಪೋಟೋಗಳನ್ನ ಶ್ರೇಯಸ್ ಅಯ್ಯರ್​, ತಮ್ಮ ಇನ್ಟ್ರಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. Ballin with these ballers ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ನಾವು ಮುಂದಿನ ಬಾರಿ ಪಟ್ಟಣದಲ್ಲೇ ಇದ್ದಾಗ ನನ್ನನ್ನು ಪರಿಗಣಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಅದ್ಹಾಗೆ ಈ ಚಾರಿಟಿ ಪುಟ್ಬಾಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ, ಶ್ರೇಯಸ್​ ಅಲ್ಲದೆ, ಬಾಲಿವುಡ್ ಸ್ಟಾರ್​ಗಳು ಭಾಗಿಯಾಗುತ್ತಿದ್ದಾರೆ.

The post ಮುಂದಿನ ಸಲ ನನ್ನನ್ನೂ ಪರಿಗಣಿಸಿ ಎಂದು ಕೇಳಿದ್ದೇಕೆ ವಿರಾಟ್​..? appeared first on News First Kannada.

Source: newsfirstlive.com

Source link