ಇಂಗ್ಲೆಂಡ್ ಸರಣಿಗೆ ಪಡಿಕ್ಕಲ್ ಪರಿಗಣಿಸದಕ್ಕೆ ಕಾರಣವೇನು? ಮುಂಬೈ ಲಾಬಿಗೆ ಮಣಿಯಿತಾ BCCI?

ಇಂಗ್ಲೆಂಡ್ ಸರಣಿಗೆ ಪಡಿಕ್ಕಲ್ ಪರಿಗಣಿಸದಕ್ಕೆ ಕಾರಣವೇನು? ಮುಂಬೈ ಲಾಬಿಗೆ ಮಣಿಯಿತಾ BCCI?

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿಯಿದೆ. ಇದಕ್ಕಾಗಿ ಟೀಮ್ ಇಂಡಿಯಾ, ಭರ್ಜರಿ ತಯಾರಿ ನಡೆಸಿಕೊಳ್ತಿದೆ. ಸರಣಿಗೂ ಮುನ್ನ ಟೀಮ್ ಮ್ಯಾನೇಜ್​ಮೆಂಟ್​ ಇಂಜುರಿ ರಿಪ್ಲೇಸ್​​​ಮೆಂಟ್​ ಸಮಸ್ಯೆಯನ್ನ ಬಗೆಹರಿಸಿಕೊಂಡಿದೆ. ಆದ್ರೆ ಈ ಬೆನ್ನಲ್ಲೇ ಹೊಸದೊಂದು ಚರ್ಚೆಗೆ ನಾಂದಿಯಾಡಿದೆ.

ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಬಿಸಿಸಿಐ, ಇಂಜುರಿ ರಿಪ್ಲೇಸ್​ಮೆಂಟ್​ಗಾಗಿ ಮೂವರು ಆಟಗಾರರಿಗೆ ಬುಲಾವ್ ನೀಡಿದೆ. ಲಂಕಾ ಸರಣಿಯಲ್ಲಿ ಬ್ಯುಸಿಯಾಗಿರೋ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಆಂಗ್ಲರ ನಾಡಿಗೆ ತೆರಳುತ್ತಿದ್ದಾರೆ. ಆದ್ರೆ ಕರ್ನಾಟಕ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್​ ಆಯ್ಕೆಯಾಗದಿರೋದಕ್ಕೆ, ಚರ್ಚೆಗೆ ಕಾರಣವಾಗಿದೆ.

blank

ಹೌದು..! ಶುಭಮನ್​ ಗಿಲ್ ಇಂಜುರಿ ಬೆನ್ನಲ್ಲೇ ಇಂಗ್ಲೆಂಡ್​ ಫ್ಲೈಟ್​​ ಏರಲು ಮೊದಲ ಲಿಸ್ಟ್​ನಲ್ಲಿ ಇದ್ದವರು ಪೃಥ್ವಿ ಶಾ, ದೇವದತ್​ ಪಡಿಕ್ಕಲ್.. ನಂತರದ ಬೆಳವಣಿಗೆಳಲ್ಲಿ ಸೂರ್ಯಕುಮಾರ್​​ಗೆ ಬುಲಾವ್ ನೀಡಲಾಯ್ತು. ಆದ್ರೆ ಪಡಿಕ್ಕಲ್ ರನ್ನ ತಿರಸ್ಕರಿಸಲು ಕಾರಣ, ದೇಶಿ ಕ್ರಿಕೆಟ್​ನಲ್ಲಿ ಆಡಿದ ಅನುಭವ ಸಾಲದು ಎಂಬುವುದು. ಹೀಗಾಗಿಯೇ ಬಿಸಿಸಿಐ ಮತ್ತೊಂದು ರೆಡ್ ಬಾಲ್ ಟೂರ್ನಿ ಆಡಿದ ಬಳಿಕವಷ್ಟೆ, ಟೆಸ್ಟ್​ ಕ್ರಿಕೆಟ್​ಗೆ ಪರಿಗಣಿಸುತ್ತೇವೆ ಅಂತಿದೆ. ಈ ವಿಚಾರ ಈಗ ಚರ್ಚೆಯ ಕೇಂದ್ರ ಬಿಂದುವನ್ನಾಗಿಸಿ ಬಿಟ್ಟಿದೆ.

ದೇಶಿ ಕ್ರಿಕೆಟ್​ನಲ್ಲಿ ಸೂರ್ಯಗಿಂತ ಬೆಸ್ಟ್ ಪರ್ಫಾಮರ್ ಪಡಿಕ್ಕಲ್..!
ಕಳೆದ್ಮೂರು ವರ್ಷಗಳಿಂದ ದೇಶಿ ಕ್ರಿಕೆಟ್​ನಲ್ಲಿ ರನ್ ಹೊಳೆ ಹರಿಸ್ತಿರುವ ಆಟಗಾರ ಪಡಿಕ್ಕಲ್. ಸೈಯದ್ ಮುಷ್ತಾಕ್ ಆಲಿ, ವಿಜಯ್ ಹಜಾರೆ, ರಣಜಿ ಟ್ರೋಫಿ. ಹೀಗೆ ಎಲ್ಲಾ ದೇಶಿ ಟೂರ್ನಿಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್​ ನೀಡಿ ರನ್ ಮಷಿನ್ ಎನಿಸಿಕೊಂಡಿದ್ದಾರೆ. ಆದ್ರೆ ಈಗ ಲಂಕಾ ಪ್ರವಾಸದಲ್ಲಿ ಅಬ್ಬರಿಸ್ತಿರುವ ಸೂರ್ಯಕುಮಾರ್, ದೇಶಿ ಕ್ರಿಕೆಟ್​ನಲ್ಲಿ ಕಳೆದೊಂದು ದಶಕದಿಂದ ಆಡುತ್ತಿದ್ದಾರೆ.

ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಸೂರ್ಯ, ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಇಂಥಹದ್ರಲ್ಲಿ ಸೂರ್ಯಕುಮಾರ್​ನ ಹೇಗೆ ಪರಿಗಣಿಸಿದ್ರಿ..? ಒಬ್ಬಬ್ಬ ಆಟಗಾರನಿಗೆ ಒಂದೊಂದು ಮಾನದಂಡನಾ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ. ಕೆಲ ಕ್ರಿಕೆಟ್ ಅಭಿಮಾನಿಗಳು ಇದು ಮುಂಬೈ ಲಾಭಿ ಅಂತಾನೂ ಟೀಕಿಸ್ತಿದ್ದಾರೆ. ದೇವದತ್​ ಪಡಿಕ್ಕಲ್, ಇಂಗ್ಲೆಂಡ್ ಟೂರ್​​ ಆಯ್ಕೆಗೆ ಅರ್ಹ ಆಟಗಾರ ಅನ್ನೋದನ್ನ, ಅವರ ಟ್ಯಾಲೆಂಟ್ ಮತ್ತು ರೆಕಾರ್ಡ್ಸ್​ ಹೇಳುತ್ತವೆ.

The post ಇಂಗ್ಲೆಂಡ್ ಸರಣಿಗೆ ಪಡಿಕ್ಕಲ್ ಪರಿಗಣಿಸದಕ್ಕೆ ಕಾರಣವೇನು? ಮುಂಬೈ ಲಾಬಿಗೆ ಮಣಿಯಿತಾ BCCI? appeared first on News First Kannada.

Source: newsfirstlive.com

Source link