ಮಹಿಳಾ ಹಾಕಿ- ಗ್ರೇಟ್​​ ಬ್ರಿಟನ್ ವಿರುದ್ಧ ಭಾರತ ವನಿತೆಯರಿಗೆ ಹೀನಾಯ ಸೋಲು

ಮಹಿಳಾ ಹಾಕಿ- ಗ್ರೇಟ್​​ ಬ್ರಿಟನ್ ವಿರುದ್ಧ ಭಾರತ ವನಿತೆಯರಿಗೆ ಹೀನಾಯ ಸೋಲು

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಮಹಿಳಾ ಹಾಕಿ ತಂಡ ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿದೆ. ಗ್ರೂಪ್ ‘ಎ’ ಮೂರನೇ ಪಂದ್ಯದಲ್ಲಿ ಬಲಿಷ್ಠ ಗ್ರೇಟ್ ಬ್ರಿಟನ್ ಎದುರು ಸೆಣಸಾಡಿದ ಭಾರತ ವನಿತೆಯರ ತಂಡ, 1-4 ಗೋಲುಗಳ ಅಂತರದಿಂದ ಹೀನಾಯ ಸೋಲಿಗೆ ಶರಣಾಗಿದೆ. ಗ್ರೇಟ್ ಬ್ರಿಟನ್ ಪರ 2ನೇ ಹಾಗೂ 19ನೇ ನಿಮಿಷದಲ್ಲಿ ಹನ್ನ ಮಾರ್ಟಿನ್ ಗೋಲು ದಾಖಲಿಸಿ, ತಂಡಕ್ಕೆ ಮುನ್ನಡೆ ಒದಗಿಸಿಕೊಟ್ರು. ನಂತರ 23ನೇ ನಿಮಿಷದಲ್ಲಿ ಭಾರತದ ಶರ್ಮಿಳಾ ದೇವಿ ಗೋಲು ಬಾರಿಸಿ ಪೈಪೋಟಿ ನೀಡಿದರಾದ್ರೂ, 41ನೇ ನಿಮಿಷದಲ್ಲಿ ಎದುರಾಳಿ ತಂಡದ ಲಿಲ್ಲಿ ಓಸ್ಲೆ, 57ನೇ ನಿಮಿಷದಲ್ಲಿ ಗ್ರೇಸ್ ಬಾಲ್ಸ್‌ಡನ್ ಬ್ಯಾಕ್ ಟು ಬ್ಯಾಕ್ ಗೋಲು ಬಾರಿಸೋ ಮೂಲಕ, ಭಾರತ ವನಿತೆಯರ ಸೋಲಿಗೆ ಕಾರಣರಾದರು. 1-4 ಅಂತರದಿಂದ ಸೋಲಿನ ಮುಖಭಂಗ ಅನುಭವಿಸಿದ ಭಾರತದ ಕ್ವಾರ್ಟರ್​ ಫೈನಲ್​ ಹಾದಿ ಬಹುತೇಕ ಮುಂಚಿದಂತಾಗಿದೆ. ಇನ್ನು ಮುಂದಿನ ಪಂದ್ಯದಲ್ಲಿ ಭಾರತ, ಐರ್ಲೆಂಡ್ ವಿರುದ್ಧ ಸೆಣಸಲಿದೆ.

The post ಮಹಿಳಾ ಹಾಕಿ- ಗ್ರೇಟ್​​ ಬ್ರಿಟನ್ ವಿರುದ್ಧ ಭಾರತ ವನಿತೆಯರಿಗೆ ಹೀನಾಯ ಸೋಲು appeared first on News First Kannada.

Source: newsfirstlive.com

Source link