‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ’ -ಬೊಮ್ಮಾಯಿ ಕುಟುಂಬಸ್ಥರ ಡ್ಯಾನ್ಸ್ ವಿಡಿಯೋ ವೈರಲ್

‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ’ -ಬೊಮ್ಮಾಯಿ ಕುಟುಂಬಸ್ಥರ ಡ್ಯಾನ್ಸ್ ವಿಡಿಯೋ ವೈರಲ್

ಬೆಂಗಳೂರು: ಬಿಎಸ್​ವೈ ರಾಜೀನಾಮೆ ಬಳಿಕ ಸಿಎಂ ರೇಸ್​ನಲ್ಲಿ ಕೊನೇ ಕ್ಷಣದಲ್ಲಿ ಮುಂಚೂಣಿಗೆ ಬಂದು ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಗದ್ದುಗೆ ತನ್ನದಾಗಿಸಿಕೊಂಡಿದ್ದಾರೆ. ಮೂಲ ಬಿಜೆಪಿ ನಾಯಕ ಅಲ್ಲದಿದ್ದರೂ ಸಾದರ ಲಿಂಗಾಯತ ಸಮುದಾಯದ ಬೊಮ್ಮಾಯಿಗೆ ಸಿಎಂ ಕುರ್ಚಿ ಒಲಿದು ಬಂದಿದೆ.

ಬಸವರಾಜ್ ಬೊಮ್ಮಾಯಿ ಅವರನ್ನು ನಿಯೋಜಿತ ಸಿಎಂ ಎಂದು ಘೋಷಣೆ ಮಾಡಿದ ಬೆನ್ನಲ್ಲೇ, ನಿನ್ನೆ ಬೊಮ್ಮಾಯಿ ನಿವಾಸದಲ್ಲಿ ಕುಟುಂಬಸ್ಥರಿಂದ ನೀನೆ ರಾಜಕುಮಾರ ಸಾಂಗ್ ಹೇಳಿ ಸಂಭ್ರಮ ಮಾಡಿದ್ದಾರೆ. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡಿಗೆ ಕುಟುಂಬಸ್ಥರು ಡಾನ್ಸ್​ ಮಾಡಿದ್ದು, ಬೊಮ್ಮಾಯಿ ಅವರ ಪತ್ನಿ, ಮಗಳು ಸೇರಿದಂತೆ ಇತರೆ ಕುಟುಂಬಸ್ಥರು ಸಂತಸದಿಂದ ಇರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ.

blank

 

ಇನ್ನು ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಈಗಾಗಲೇ ರಾಜಭವನಕ್ಕೆ ಆಗಮಿಸಿದ್ದಾರೆ. ಇನ್ನು ಹುಬ್ಬಳ್ಳಿಯ ನಿವಾಸದಲ್ಲಿರುವ ಬೊಮ್ಮಾಯಿ ಕುಟುಂಬ ಸದಸ್ಯರು, ಆತ್ಮೀಯರು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದು, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

The post ‘ಬೊಂಬೆ ಹೇಳುತೈತೆ ನೀನೇ ರಾಜಕುಮಾರ’ -ಬೊಮ್ಮಾಯಿ ಕುಟುಂಬಸ್ಥರ ಡ್ಯಾನ್ಸ್ ವಿಡಿಯೋ ವೈರಲ್ appeared first on News First Kannada.

Source: newsfirstlive.com

Source link