ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ವರ್ಷಗಳ ಸಮಸ್ಯೆಗೆ ಅಸಲಿ ಕಾರಣ ಏನು..?

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ವರ್ಷಗಳ ಸಮಸ್ಯೆಗೆ ಅಸಲಿ ಕಾರಣ ಏನು..?

ದೇಶ ಒಂದೆ ಆದರೂ ನೆರೆ ರಾಜ್ಯಗಳ ನಡುವೆ ಘರ್ಷಣೆಗಳು ಸಹಜವಾಗಿ ಇದ್ದೆ ಇರುತ್ತದೆ. ಅದು ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಸರ್ವೇ ಸಾಮಾನ್ಯ. ಕರ್ನಾಟಕ ತಮಿಳುನಾಡು ನಡುವೆ, ಬೆಳಗಾವಿಯ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಇಂತಹ ಗಲಾಟೆಗಳು ನಾವು ನೋಡಿದ್ದೆವೆ. ಆದ್ರೆ ಅಸ್ಸಾಂ ಹಾಗೂ ಮಿಜೋರಾಂ ನಡುವಿನ ಘರ್ಷಣೆ ತೀವ್ರಗತಿಗೆ ತಲುಪಿದೆ. ಇದು ನೆನ್ನೆ ಮೊನ್ನೆಯದಲ್ಲ ಹಲವು ವರ್ಷಗಳಿಂದ ಈ ಗಲಾಟೆಗೆ ಕೊನೆಯೇ ಕಾಣ್ತಾ ಇಲ್ಲ. ಮಾತಿನ ಜಗ್ಗಾಟದಿಂದ ಶುರುವಾಗಿ ಗುಂಡಿನ ದಾಳಿಯವರೆಗೂ ಗಡಿಯಲ್ಲಿ ಗಲಾಟೆಗಳು ನಡೆತಾ ಇದೆ.

ಇದೆಲ್ಲ ಶುರುವಾಗಿದ್ದು ಒಂದು ಮಾತಿನಿಂದ. ಮಾತು ಚರ್ಚೆಯಾಗಿ, ಚರ್ಚೆ ಗದ್ದಲವಾಗಿ, ಗದ್ದಲ ಕೊನೆಗೆ ಹಲವರ ಸಾವಿಗೂ ಕಾರಣವಾಗಿ ಬಿಡ್ತು . ಇದು ನಮ್ಮ ದೇಶದ ಉತ್ತರದ ರಾಜ್ಯಗಳಾದ ಅಸ್ಸಾಂ ಹಾಗೂ ಮಿಜೋರಾಂ ನಡುವಿನ ಗಡಿ ಸಂಬಂಧದ ಘರ್ಷಣೆ. ಇದು ನಮಗೆ ಸೇರಿದ್ದು, ನಮಗೆ ಸೇರಿದ್ದು ಎಂದು ಕಿತ್ತಾಟ, ಚೀರಾಟ, ಒಬ್ಬರ ಮೇಲೊಬ್ಬರು ಕೆಸರೆರಚಾಟ ಎಲ್ಲಿಗೆವರೆಗೂ ಕರೆದುಕೊಂಡು ಹೋಗಿದೆ ನೋಡಿ. ಜನರ ರಕ್ಷಣೆ ಹಾಗೂ ದೇಶ ಸೇವೆಯ ಕೆಲಸ ಮಾಡಬೇಕಾದ ಎರಡು ರಾಜ್ಯದ ಪೊಲೀಸರು ತಮಗೆ ಕೊಟ್ಟ ಶಸ್ತ್ರಗಳಿಂದ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದರಿಂದ 6 ಜನ ಪೊಲೀಸರು ಪ್ರಾಣವನ್ನೆ ಕಳೆದುಕೊಂಡಿದ್ದಾರೆ.

ಎರಡು ರಾಜ್ಯಗಳ ನಡುವೆ ಭುಗಿಲೆದ್ದ ಘರ್ಷಣೆ, ಮುಖ್ಯಮಂತ್ರಿಗಳ ನಿರಂತರ ಟ್ವಿಟರ್ ವಾರ್.

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಈ ಹಿಂಸಾಚಾರ ಭುಗಿಲೆದ್ದಿದ್ದು, ಸೋಮವಾರ ಉಭಯ ರಾಜ್ಯಗಳ ಜನರ ನಡುವೆ ಘರ್ಷಣೆಗಳು ಸಂಭವಿಸಿರುವ ದೃಶ್ಯಗಳು ಎಲ್ಲೆಲ್ಲೂ ಕಾಣಿಸಿತ್ತು. ಎರಡು ರಾಜ್ಯದ ಜನರ ಕೈಗಳಲ್ಲಿ ಬಗೆ ಬಗೆಯ ಶಸ್ತ್ರಾಸ್ತ್ರಗಳು ಕಾಣಸುತ್ತಿತ್ತು. ಎಲ್ಲೆಲ್ಲೂ ಕಲ್ಲು ತೂರಾಟ, ಒಬ್ಬರ ಮೇಲೋಬ್ಬರ ನಿಂದನೆ, ಕಿಚ್ಚಿಬ್ಬೆಸುವಂತ ಮಾತುಗಳು, ಗಲಾಟೆಗೆ ಅಂತ್ಯವೇ ಇಲ್ಲದಂತೆ ತೋರುತ್ತಿದೆ. ಇತ್ತ ರಾಜ್ಯದ ಜನರು ಹೀಗೆಲ್ಲ ಬೀದಿಗಿಳಿದು ಹೋರಾಡುತ್ತಿದ್ದಾರೆ. ಕೈಯಲ್ಲಿ ಮಚ್ಚನ್ನು ಹಿಡಿದು ಕೆಲಸದಲ್ಲಿ ತೊಡಗಿದ ಅನ್ಯ ರಾಜ್ಯದವರ ಮೇಲೆ ಬೀಸುತ್ತಿರುವುದು. ಇಲ್ಲಿ ಅಧಿಕಾರಿಗಳನ್ನು ಲೆಕ್ಕಿಸುತ್ತಿಲ್ಲ. ಅತ್ತ ಎರಡು ರಾಜ್ಯದ ಮುಖ್ಯಮಂತ್ರಿಗಳು ಟ್ವೀಟ್ ಗಳ ಮೂಲಕ ಒಬ್ಬರನ್ನೊಬ್ಬರು ದೂಷಿಸುತ್ತಿದ್ದಾರೆ. ಇನ್ನೊಂದೆಡೆ ರಾಜ್ಯದ ಪೊಲೀಸ್ ಗಳು ಸಹ ಜನರ ತಾಳಕ್ಕೆ ಕುಣಿದು, ಕಲ್ಲು ತೂರಾಟ, ಮಾತಿನ ನಿಂದನೆಗಳನ್ನು ತಡೆಯುವ ಬದಲು ಬೆನ್ನು ತಟ್ಟುತ್ತಿದ್ದಾರೆ.

ಜಾಗ ಖಾಲಿ ಮಾಡಿ ಎಂದಿದ್ದಕ್ಕೆ, ಮೈಮೇಲೆ ಬಿದ್ದ ಮಿಜೋರಾಂ ಪಡೆ

ಈ ಒಂದು ದೊಡ್ಡ ಗಲಾಟೆಗೆ, ಎರಡು ರಾಜ್ಯಗಳ ನಡುವಿನ ಭಯಾನಕ ಘರ್ಷಣೆಗೆ ಮೂಲ ಕಾರಣ. ಅಸ್ಸಾಂ ಹಾಗೂ ಮಿಜೋರಾಂ ನಡುವೆ ಗಡಿ ಘರ್ಷಣೆ. ಇದು ಹಳೆ ವಿಚಾರವೇ. ಅದು ಹೇಗೋ ತಣ್ಣಗಾಗಿ ನಡೆದುಕೊಂಡು ಹೋಗ್ತಾ ಇರುತ್ತೆ. ಆದ್ರೆ ಹೀಗೆ ಏನಾದರು ಒಂದು ವಿವಾದಗಳು ಶುರುವಾಗಿ ಕೊನೆಗಾಣದ ಕೆಟ್ಟ ಕನಸಿನಂತೆ ಕಾಡಿಬಿಡುತ್ತೆ.

ಅಸ್ಸಾಂ ಗಡಿ ಪ್ರದೇಶವನ್ನು ದಾಟಿ ಮಿಜೋರಾಮಿ ಪೊಲೀಸ್ ಗಳ ದಂಡು ಕ್ಯಾಂಪ್ ಮಾಡಿಕೊಂಡು ನೆಲೆಸಿದೆ. ಈಗಾಗಲೇ ಹಲವು ಅನಾಹುತಗಳು ಇದೇ ವಿಚಾರಕ್ಕೆ ನಡೆದಿದ್ದರು, ಅಲ್ಲಿ ಘರ್ಷಣೆಯನ್ನು ಎಬ್ಬಿಸಲೆಂದೇ ಕ್ಯಾಂಪ್ ಮಾಡಿರುವುದು ಯಾಕೆ ಎನ್ನುವ ಸಹಜ ಪ್ರಶ್ನೆ ಮುಂದಾಗಬಹುದು. ಕೊನೆಗೆ ಆ ಜಾಗವನ್ನು ತೆರುವುಗೊಳಿಸಿ ಎಂದು ಅಸ್ಸಾಂ ಪೊಲೀಸರು ಮಿಜೋರಾಮಿಗಳಿಗೆ ಆಜ್ಞಾಪಿಸಿದಾಗ, ಮಿಜೋರಾಮಿಗಳು ಅಸ್ಸಾಂ ಪೊಲೀಸರ ಮೇಲೆ ಬಿದ್ದು ಮಾತಿನ ಚಕಮಕಿ ಶುರುವಾಗಿದೆ.

ಮಾತಿಗೆ ಮಾತು, ದಾಳಿಗೆ ಪ್ರತಿದಾಳಿ ಕೊನೆಗೊಂಡಿದ್ದು ಗುಂಡಿನಲ್ಲಿ, ಗುಂಡಿನ ದಾಳಿ ಬಳಿಕ ಸಂಭ್ರಮಿಸಿದ ಮಿಜೋರಾಂ ಪೊಲೀಸ್

ಸಣ್ಣ ಗಡಿ ಘರ್ಷಣೆಯಿಂದ ಶುರುವಾದ ಈ ಜಗಳ ಎಲ್ಲಿ ತನಕ ಹೊಯ್ತು ನೋಡಿ. ಮಚ್ಚು ಕೋಲುಗಳನ್ನು ಹೊತ್ತು, ಹಲ್ಲು ಮಸೆಯುತ್ತಿದ್ದ ಎರಡು ರಾಜ್ಯದವರು ಸುಮ್ಮನಾಗಲೇ ಇಲ್ಲ. ಮಾತಿಗೆ ಮಾತು ಸೇರಿಸಿ, ದಾಳಿಗೆ ದಾಳಿ ಎಸಗಿದ್ದರು. ಕೊನೆಗೆ ಮಿಜೋರಾಂ ಪೊಲೀಸರು ನೇರವಾಗಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಬುಲೆಟ್ಸ್ ಗಳ ಸದ್ದು ಕೇಳುತ್ತಿದ್ದಂತೆ, ಅಸ್ಸಾಂ ಜನರೆಲ್ಲ ಅಲ್ಲಿ ಇಲ್ಲಿ ಅವಿತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರದಾಡಿದ್ದಾರೆ, ಎಲ್ಲರ ಮುಖದಲ್ಲೂ ಆ ಒಂದು ಭಯ ಎದ್ದು ಕಾಣಿಸುತ್ತಿತ್ತು. ಈ ಗುಂಡಿನ ದಾಳಿಯಲ್ಲಿ 9 ಅಸ್ಸಾಂ ಪೊಲೀಸರು ಆಸ್ಪತ್ರೆ ಸೇರಿದರೆ, 5 ಜನ ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.

ಎಲ್ಲದಿಕ್ಕಿಂತ ನೋವಿನ ಸಂಗತಿ ಅಂದ್ರೆ ಈ ರೀತಿ ಗುಂಡಿನ ದಾಳಿ ನಡೆದ ಬಳಿಕ ಮಿಜೋರಾಮಿ ಪೊಲೀಸರು ಹಾಗೂ ಅಲ್ಲಿನ ಜನರು ಕೈ-ಕೈ ಮಿಲಾಯಿಸಿಕೊಂಡು ಸಂಭ್ರಮಿಸಿರೋದು. ಮಿಜೋರಾಮಿ ಪೊಲೀಸ್ ಜೈ ಎನ್ನುವ ಕೂಗಿಗಾಗಿ, ಸಹೋದರರಂತೆ ಇರ ಬೇಕಾದ ಎರಡು ರಾಜ್ಯದ ಪೊಲೀಸರು ಈ ಮಟ್ಟಕ್ಕೆ ತಲುಪಿಬಿಟ್ಟಿದ್ದಾರೆ. ಅಸ್ಸಾಂ ರಾಜ್ಯಕ್ಕೆ ಮುಂಚಿನಿಂದಲೂ ಕಾಡುವ ಏಕೈಕ ಸಮಸ್ಯೆ ಎಂದರೆ ಅದು ಗಡಿ ಸಮಸ್ಯೆ. ಅಸ್ಸಾಂ ತನ್ನ ಗಡಿಯನ್ನು ಭೂತಾನ್ ಹಾಗೂ ಬಾಂಗ್ಲಾ ದೇಶಕ್ಕೆ ಹಂಚಿಕೆ ನೀಡುವುದಲ್ಲದೆ, ಭಾರತದ ಏಳು ರಾಜ್ಯಗಳಗೂ ಗಡಿಯಾಗಿದೆ.

ಅಸ್ಸಾಂ ಸುತ್ತುವರೆದ ಗಡಿ ರಾಜ್ಯಗಳು

ನಾಗಲ್ಯಾಂಡ್                512.1  ಕಿ.ಮೀ
ಅರುಣಾಚಲ್ ಪ್ರದೇಶ   804.1   ಕಿ.ಮೀ
ಮಣಿಪುರ್                   204.1   ಕಿ.ಮೀ
ಮಿಜೋರಾಂ               164.6    ಕಿ.ಮೀ
ತ್ರಿಪುರ                         46.3     ಕಿ. ಮೀ
ಮೇಗಾಲಯ                884.9   ಕಿ.ಮೀ
ಪಶ್ಚಿಮ ಬಂಗಾಲ          127      ಕಿ. ಮೀ

ಅಸ್ಸಾಂ ರಾಜ್ಯದ ಜೊತೆಗೆ ನಾಗಲ್ಯಾಂಡ್ 512 ಕಿಲೋ ಮೀಟರ್ ಗಡಿ ಪ್ರದೇಶವನ್ನು ಹಂಚಿಕೊಂಡಿದೆ, ಅರುಣಾಚಲ್ ಪ್ರದೇಶದ ಜೊತೆಗೆ 804 ಕಿಲೋ ಮೀಟರ್ ಗಡಿ ಪ್ರದೇಶವನ್ನು ಅಸ್ಸಾಂ ಹೊಂದಿದೆ. ಮಣಿಪುರದ ಜೊತೆಗೆ 204 ಕಿಲೋ ಮೀಟರ್ ಪ್ರದೇಶ ಇದ್ದರೆ ಮಿಜೋರಾಂ ಜೊತೆಗೆ 164 ಕಿಲೋ ಮೀಟರ್ ಗಳ ಗಡಿ ಸಂಭಂದವಿದೆ. ಅಲ್ಲದೆ ತ್ರಿಪುರ ಹಾಗೂ ಮೇಗಾಲಯದೊಂದಿಗೆ 46 ಕಿಲೋ ಮೀಟರ್ ಹಾಗೂ 884 ಕಿಲೋ ಮೀಟರ್ ಗಳ ಗಡಿ ಭಾಗವಾಗಿದೆ. ಜೊತೆಗೆ ಪಶ್ಚಿಮ ಬಂಗಾಳದ ಜೊತೆ ಕೂಡ 127 ಕಿಲೋ ಮೀಟರ್ ಗಳ ಗಡಿ ಭಾಗವನ್ನು ಹಂಚಿಕೊಂಡಿದೆ ಅಸ್ಸಾಂ.

ಪದೆ ಪದೆ ವಿವಾದ, ಹಾಗೂ ತೊಂದರೆಯನ್ನು ಸೃಷ್ಟಿಸುವ ಗಡಿ ಪ್ರದೇಶ ಅಂದ್ರೆ ಅದು ಅಸ್ಸಾಂ ಮಿಜೋರಾಂ. ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್​, ಕೊಲಾಸಿಬ್​ ಮತ್ತು ಮಾಮಿತ್​ಗಳು, ಅಸ್ಸಾಂನ ಕ್ಯಾಚರ್​, ಹಲಕಂಡಿ ಮತ್ತು ಕರಿಮಗಂಜ್​ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರ ರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಕಳೆದ ಜೂನ್ 2020ರಲ್ಲಿ ಅಸ್ಸಾಂ ನ ಒಂದು ಸರ್ಕಾರಿ ಶಾಲೆ ಮಿಜೋರಾಂ ಪ್ರದೇಶದಲ್ಲಿದೆ ಎಂದು ಶಾಲೆಗೆ ಗ್ರೆನೇಡ್ ಸಿಡಿಸಿ ಬಿಟ್ಟಿದ್ದರು ಮಿಜೋಗಳು. ಮಿಜೋ ದುಷ್ಕರ್ಮಿಗಳು ಸುಟ್ಟುಹಾಕಿದ ಪ್ರಾಥಮಿಕ ಶಾಲೆಯನ್ನು ಪುನರ್ನಿರ್ಮಿಸಲು ಹೋದಾಗಲು ಗಲಭೆ ನಡೆದಿತ್ತು.

ಇದು ಹೀಗೆ ಮುಂದುವರೆಯುತ್ತಲೆ ಇರುತ್ತದೆ, ಇದಕ್ಕೆ ಕೊನೆ ಇಲ್ಲ ಎನ್ನುವ ಈ ಹೊತ್ತಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತೀರ್ಮಾನಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ರಾಜ್ಯದ ಮುಖ್ಯಮಂತ್ರಿಗಳನ್ನು ಶಿಲ್ಲಾಂಗ್‌ನಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಆದರೆ ಇದಾದ ಎರಡು ದಿನಗಳ ನಂತರ ಈ ಒಂದು ಘಟನೆ ನಡೆದಿರೋದು ನಿಜಕ್ಕೂ ಬೇಸರ ಮೂಡಿಸುತ್ತದೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಾಗಿ ಮುಖ್ಯಮಂತ್ರಿಗಳ ಭರವಸೆ.. ಟ್ವೀಟ್ ಗಳ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದ ಮಂತ್ರಿಗಳು

ಇಬ್ಬರೂ ಮುಖ್ಯಮಂತ್ರಿಗಳು ಟ್ವೀಟರ್​ ಮೂಲಕ ಘಟನೆಯ ಬಗ್ಗೆ ಸಾಕಷ್ಟು ಆಕ್ರೋಶವನ್ನು ಹೊರಹಾಕಿದ್ದರು. ಮಿಜೋರಾಂ ಮುಖ್ಯಮಂತ್ರಿ ಅವರು ಗೃಹ ಸಚಿವ ಅಮಿತ್​ ಶಾ ಅವರ ಹಸ್ತಕ್ಷೇಪವನ್ನು ಕೋರಿದ್ದರಿಂದ ಇಬ್ಬರು ಮುಖ್ಯಮಂತ್ರಿಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಇದು ಕಾರಣವಾಗಿತ್ತು. ವಿಡಿಯೋ ಒಂದನ್ನು ಟ್ವೀಟ್​ ಮಾಡಿರುವ ಮಿಜೋರಾಂ ಮುಖ್ಯಮಂತ್ರಿ ಒರಮ್‌ಥಂಗಾ, ಮುಗ್ಧ ದಂಪತಿ ಕಾರಿನಲ್ಲಿ ಅವರ ಪಾಡಿಗೆ ಕಚಾರ್ ಮೂಲಕ ಮಿಜೋರಾಂಗೆ ವಾಪಸ್​ ಆಗುವಾಗ.

ಅವರ ಮೇಲೆ ಗೂಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಂಥ ಹಿಂಸೆಯನ್ನು ನೀವೆಲ್ಲ ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಈ ವಿಡಿಯೋದಲ್ಲಿ ಇರುವ ದಂಪತಿಗಳು ಮಿಜೋರಾಂ ಗೆ ತೆರಳುವವರು, ಅಸ್ಸಾಂ ಜನರ ಜೊತೆಗೆ ಪೊಲೀಸರು ಸೇರಿ ಇಷ್ಟು ಕ್ರೌರ್ಯ ಎಸಗಿದ್ದಾರೆ ಅನ್ನೋದು ವರದಿ. ಇದಕ್ಕೆ ಪ್ರತಿ ಟ್ವೀಟ್ ಆಗಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಮರು ಪ್ರತಿಕ್ರಿಯಿಸಿರುವುದು ಅಲ್ಲಿನ ಪೊಲೀಸರನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ಹೇಳಿದ್ದಾರೆ.

ಹೀಗೆ ಒಬ್ಬರಿಗೊಬ್ಬರು, ಮಾತಿನಲ್ಲೆ ಕತ್ತಿ ಮಸೆಯುತ್ತಿದ್ದಾರೆ. ಇಲ್ಲಿ ಯಾರು ತಮ್ಮ ರಾಜ್ಯಕ್ಕೆ ಸೇರಿದ ಭೂಮಿಯನ್ನು ಬಿಡಲು ಸಿದ್ದವಿಲ್ಲ. ಆದರೆ ಮಾತಿಗೆ ಮಾತು ಸೇರಿ, ಅಂತ್ಯವಿಲ್ಲದ ಹೋರಾಟಗಳು ನಡೆಯುತ್ತಲೆ ಇದೆ. ಇವರ ಈ ಗದ್ದಲದಲ್ಲಿ 6ಜನ ಅಮಾಯಕ ಪೊಲೀಸರು ಬಲಿಯಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿಗಳು ಅಂತಿಮನಮನ ಸಲ್ಲಿದ್ದು ಆಯ್ತು.

ಆದ್ರೆ ಇದನ್ನು ನಿಲ್ಲಿಸಲೇ ಬೇಕು ಅಂದ್ರೆ ಸುಪ್ರಿಂ ಕೋರ್ಟ್ ಮಧ್ಯ ಪ್ರವೇಶೀಸಬೇಕು. ಇಲ್ಲದಿದ್ದರೆ ಎರಡು ರಾಜ್ಯಗಳು ರಕ್ತದ ಹೊಳೆಯಲ್ಲಿ ತೇಲಾಡ ಬೇಕಾಗುತ್ತದೆ. ಇದು ಹೀಗೆ ಮುಂದುವರೆಯುತ್ತದೆ. ಯಾರಿಗೂ ತಮ್ಮ ಗಡಿ ಪ್ರದೇಶವನ್ನು ಬಿಟ್ಟು ಮುಂದಾಗುವ ಯೋಚನೆಯೂ ಇಲ್ಲ. ಆದರೆ ದಾಳಿಗೆ ಪ್ರತಿ ದಾಳಿ ಎಷ್ಟು ಸರಿ ? ಒಬ್ಬರನ್ನೊಬ್ಬರು ಕೊಲೆ ಮಾಡುವ ಮಟ್ಟಿಗೆ ಇಳಿದರೆ ಏನು ಗತಿ ? ಮುಂದೇನಾಗುತ್ತೆ ದೇವರೇ ಬಲ್ಲ.

The post ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ವರ್ಷಗಳ ಸಮಸ್ಯೆಗೆ ಅಸಲಿ ಕಾರಣ ಏನು..? appeared first on News First Kannada.

Source: newsfirstlive.com

Source link