ನಾವು 17 ಜನ ಎಲ್ಲರೂ ಖುಷಿಯಾಗಿದ್ದೀವಿ, ನಮಗೆ ಏನೂ ಆತಂಕ ಇಲ್ಲ: ಬಿ.ಸಿ. ಪಾಟೀಲ್​

ನಾವು 17 ಜನ ಎಲ್ಲರೂ ಖುಷಿಯಾಗಿದ್ದೀವಿ, ನಮಗೆ ಏನೂ ಆತಂಕ ಇಲ್ಲ: ಬಿ.ಸಿ. ಪಾಟೀಲ್​

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿರುವ ಕುರಿತು ಮಾಜಿ ಸಚಿವ ಬಿ.ಸಿ.ಪಾಟೀಲ್​ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಬದಲಾಗಿದ್ದಾರೆ ಹೊರತು ಬೇರೆ ಏನೂ ಬದಲಾಗಿಲ್ಲ, ಯಡಿಯೂರಪ್ಪ ನವರ ಮಾರ್ಗದರ್ಶನದಲ್ಲಿ ಹೊಸ ಸಿಎಂ ಆಯ್ಕೆಯಾಗಿದೆ ನಾವು 17 ಜನ ಎಲ್ಲರೂ ಖುಷಿಯಾಗಿದ್ದೀವಿ, ನಮಗೆ ಏನೂ ಆತಂಕ ಇಲ್ಲ ಎಂದಿದ್ದಾರೆ.

ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿದ ಅವರು  ನಾವು ಬೆಂಗಳೂರು ನಂಬಿಕೊಂಡು ಪಾರ್ಟಿಗೆ ಬಂದವರು, ದೆಹಲಿ ನೋಡಿಕೊಂಡು ಅಲ್ಲ, ದೆಹಲಿ ವರಿಷ್ಠರ ಮಾರ್ಗದರ್ಶನದಲ್ಲಿ ಎಲ್ಲವೂ ಒಳ್ಳೆಯದು ಆಗಲಿದೆ ಎಂದಿದ್ದಾರೆ.

ಇನ್ನು ಕ್ಯಾಬಿನೇಟ್ ಗೆ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿ ಸಿಎಂ, ಬಿಎಸ್ ವೈ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ತಾರೆ. ಯಡಿಯೂರಪ್ಪ ಪಕ್ಷದಲ್ಲೇ ಇದ್ದಾರೆ ಅವರೆನು ಪಾರ್ಟಿ ಬಿಟ್ಟು ಹೋಗಿದ್ದಾರಾ?  ಎಂದಿ ಪ್ರಶ್ನಿಸಿದ ಅವರು ಎಲ್ಲರಿಗೂ ಒಳ್ಳೆದಾಗಲಿದೆ,  ನಾವು ದೆಹಲಿಗಂತೂ ಹೋಗೋದಿಲ್ಲ ನಮಗೆ ಆತಂಕ ಏನೂ ಇಲ್ಲ ಎಂದಿದ್ದಾರೆ.

The post ನಾವು 17 ಜನ ಎಲ್ಲರೂ ಖುಷಿಯಾಗಿದ್ದೀವಿ, ನಮಗೆ ಏನೂ ಆತಂಕ ಇಲ್ಲ: ಬಿ.ಸಿ. ಪಾಟೀಲ್​ appeared first on News First Kannada.

Source: newsfirstlive.com

Source link