ಆಷಾಢ ಮುಗಿಯೋ ಮುನ್ನ ಕ್ಯಾಬಿನೆಟ್​ ವಿಸ್ತರಣೆ- ಬೊಮ್ಮಾಯಿ ಭರವಸೆ

ಆಷಾಢ ಮುಗಿಯೋ ಮುನ್ನ ಕ್ಯಾಬಿನೆಟ್​ ವಿಸ್ತರಣೆ- ಬೊಮ್ಮಾಯಿ ಭರವಸೆ

ಬೆಂಗಳೂರು: ಕ್ಯಾಬಿನೆಟ್ ವಿಸ್ತರಣೆಗೆ ಬಹಳ ಸಮಯ ತೆಗೆದುಕೊಳ್ಳುವುದಿಲ್ಲ. ಅದಷ್ಟು ಬೇಗ ಕ್ಯಾಬಿನೆಟ್ ರಚನೆ ಮಾಡುತ್ತೇನೆ ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿಂಗಲ್​​ ಮ್ಯಾನ್​ ಕ್ಯಾಬಿನೆಟ್ ಸಭೆ ನಡೆಸುತ್ತೇನೆ. ಆ ಬಳಿಕ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕ್ಯಾಬಿನೇಟ್​ ರಚನೆಗೆ ಹೆಚ್ಚು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ರಾಜ್ಯದಲ್ಲಿ ಕೊರೊನಾ ಮತ್ತು ಪ್ರವಾಹ ಪರಿಸ್ಥಿತಿ ಇದೆ. ಆದ್ದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳೊದಿಲ್ಲ.. ಆಷಾಢ ಮಾಸ ಎಂದು ವೈಟ್​ ಮಾಡೋದಿಲ್ಲ ಎಂದರು. ಎಲ್ಲಾ  ಸಚಿವರನ್ನು ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ, ಇದು ಸಚಿವ ಸಂಪುಟ ಪುನರ್ ರಚನೆ ಕಾರ್ಯ ನಡೆಯುತ್ತದೆ. ಇವತ್ತು ಸಂಪುಟ ರಚನೆ ಬಗ್ಗೆ ಯಾವುದೇ ಚರ್ಚೆ ಬೇಡ ಎಂದು ಹಿರಿಯ ನಾಯಕರು ಹೇಳಿದ್ದಾರೆ. ದೆಹಲಿಗೆ ಭೇಟಿ ನೀಡುವ ಬಗ್ಗೆಯೂ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇನೆ ಎಂದರು.

The post ಆಷಾಢ ಮುಗಿಯೋ ಮುನ್ನ ಕ್ಯಾಬಿನೆಟ್​ ವಿಸ್ತರಣೆ- ಬೊಮ್ಮಾಯಿ ಭರವಸೆ appeared first on News First Kannada.

Source: newsfirstlive.com

Source link