ಉಪ-ನಾಯಕ ಅಜಿಂಕ್ಯಾ ರಹಾನೆ ಫಿಟ್- ಕ್ಯಾಪ್ಟನ್ ಕೊಹ್ಲಿ ಈಗ ಫುಲ್ ರಿಲ್ಯಾಕ್ಸ್..!​

ಉಪ-ನಾಯಕ ಅಜಿಂಕ್ಯಾ ರಹಾನೆ ಫಿಟ್- ಕ್ಯಾಪ್ಟನ್ ಕೊಹ್ಲಿ ಈಗ ಫುಲ್ ರಿಲ್ಯಾಕ್ಸ್..!​

ಇಂಗ್ಲೆಂಡ್ ಟೆಸ್ಟ್ ಆರಂಭಕ್ಕೂ ಆತಂಕದಲ್ಲಿದ್ದ ಟೀಮ್ ಇಂಡಿಯಾಕ್ಕೆ, ಗುಡ್​ನ್ಯೂಸ್​​ ಸಿಕ್ಕಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಬಳಿಕ ಹ್ಯಾಮ್​ಸ್ಟ್ರಿಂಗ್​ ಇಂಜುರಿಯಿಂದ ಬಳಲುತ್ತಿದ್ದ ವೈಸ್​ ಕ್ಯಾಪ್ಟನ್​ ಅಜಿಂಕ್ಯಾ ರಹಾನೆ, ಟೆಸ್ಟ್ ಸರಣಿ ಆರಂಭಕ್ಕೆ 8 ದಿನಗಳು ಇರುವಂತೆ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಆಟಗಾರರ ಜೊತೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ರಹಾನೆ, ನೆಟ್ಸ್​​ನಲ್ಲಿ ಕೆಲ ಕಾಲ ಬೆವರು ಹರಿಸಿ ಸರಣಿಗೆ ಫಿಟ್ ಆಗಿರುವ ಸಂದೇಶ ರವಾನಿಸಿದ್ದಾರೆ.

ಇನ್ನು ಉಪ ನಾಯಕ ರಹಾನೆ ಇಂಜುರಿ ಚಿಂತೆಯಲ್ಲಿದ್ದ ಟೀಮ್ ಮ್ಯಾನೇಜ್​ಮೆಂಟ್​ ಕೂಡ, ನಿಟ್ಟುಸಿರು ಬಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 5ರಿಂದ ಆರಂಭವಾಗಲಿದ್ದು, ಸದ್ಯ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಪೂರ್ವತಯಾರಿ ನಡೆಸ್ತಿದೆ.

 

The post ಉಪ-ನಾಯಕ ಅಜಿಂಕ್ಯಾ ರಹಾನೆ ಫಿಟ್- ಕ್ಯಾಪ್ಟನ್ ಕೊಹ್ಲಿ ಈಗ ಫುಲ್ ರಿಲ್ಯಾಕ್ಸ್..!​ appeared first on News First Kannada.

Source: newsfirstlive.com

Source link