ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು

ಯಾದಗಿರಿ: ಕಳೆದ ಸೆಪ್ಟೆಂಬರ್ ನಲ್ಲಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲದ ಶ್ರೀ ಗಡೇ ದುರ್ಗಾದೇವಿಯ ದೇವಸ್ಥಾನಕ್ಕೆ ಬಂದು ಡಿಸಿಎಂ ಮಾಡು ತಾಯಿ ಅಂತ ಪತ್ರ ಬರೆದಿದ್ದ ಶ್ರೀ ರಾಮುಲು ಸುದ್ದಿಯಾಗಿದರು. ಇದೀಗ ಮತ್ತೆ ಡಿಸಿಎಂ ಪಟ್ಟಕ್ಕಾಗಿ ಶ್ರೀ ಗಡೇ ದುರ್ಗಾದೇವಿಯ ಮೊರೆ ಹೋಗಿದ್ದಾರೆ.

ಈಗ ರಾಜ್ಯಕ್ಕೆ ನೂತನ ಮುಖ್ಯಮಂತ್ರಿ ಘೋಷಣೆ ಬೆನ್ನಲ್ಲೇ ಉಪ ಮುಖ್ಯಮಂತ್ರಿಗಳ ರೇಸ್ ನಲ್ಲಿ ಶ್ರೀರಾಮುಲು ಹೆಸರು ಮುನ್ನಲೆಗೆ ಬಂದಿದೆ. ಡಿಸಿಎಂ ಪಟ್ಟಕ್ಕಾಗಿ ರಾಮುಲು ಮತ್ತೆ ಗಡೇ ದೇವಿಯ ಮೊರೆ ಹೋಗಿದ್ದಾರೆ. ಗಡೇ ದುರ್ಗಾದೇವಿ ಅರ್ಚಕ ಮರಿಸ್ವಾಮಿಯವರನ್ನು ತಮ್ಮ ನಿವಾಸಕ್ಕೆ ಕರೆಯಿಸಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದಾರೆ.

ಗೋನಾಲ ಗಡೇ ದುರ್ಗಾದೇವಿ ಪರಮ ಭಕ್ತರಾಗಿರುವ ಶ್ರೀರಾಮುಲು ಕೆಲವು ದಿನಗಳ ಹಿಂದೆ ಅರ್ಚಕರನ್ನು ಮನೆಗೆ ಕರೆಯಿಸಿ ಪೂಜೆ ಮಾಡಿಸಿ ಡಿಸಿಎಂ ಸ್ಥಾನಕ್ಕೆರುವ ಕನಸನ್ನು ನನಸು ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಇನ್ನೂ ಈ ದೇವಿಯ ಭಕ್ತನಾಗಿರುವ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷಪಟ್ಟ ಒಲಿದಿತ್ತು. ತಾಯಿ ಋಣ ತೀರಿಸಲು ಡಿಕೆಶಿ ಈ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದಾದ ಬಳಿಕ ಈಗ ರಾಮುಲು ಸರಿದಿ. ಡಿಕೆಶಿ ದಾರಿಯನ್ನೇ ಶ್ರೀರಾಮುಲು ಹಿಡಿದಿದ್ದಾರೆ. ಇದನ್ನೂ ಓದಿ: ನಿಜವಾದ ಗಡೇ ದುರ್ಗಾದೇವಿಯ ಡಿಕೆಶಿ ಭವಿಷ್ಯ- ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಪ್ಟೆಂಬರ್ 2020:
ಸಿಎಂ ಸ್ಥಾನಕ್ಕಾಗಿ ಗಡೇ ದುರ್ಗಾದೇವಿ ಮೊರೆ ಹೋಗಿರುವ ಸಚಿವ ಬಿ .ಶ್ರೀರಾಮುಲು, ಡಿಸಿಎಂ ಸ್ಥಾನ ನೀಡು ಎಂದು ಸೆಪ್ಟೆಂಬರ್ ನಲ್ಲಿಯೇ ಪತ್ರ ಬರೆದಿದ್ದರು. ಅಂದು ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಶ್ರೀರಾಮುಲು, ದೇವಿಯ ದರ್ಶನಕ್ಕೆಂದೆ ಒಂದು ದಿನ ಮುಂಚೆಯೇ ಜಿಲ್ಲೆಗೆ ತೆರಳಿದ್ದರಯ.. ನೇರವಾಗಿ ಗೋನಾಲಕ್ಕೆ ತೆರಳಿ ಗಡೇ ದುರ್ಗಾದೇವಿ ದರ್ಶನ ಪಡೆದುಕೊಂಡಿದ್ದರು. ಬಳಿಕ ದೇವಸ್ಥಾನದ ಪೂಜಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಂತೆ, ದೇವಿಯ ಗರ್ಭಗುಡಿಯೊಳಗೆ ತೆರಳಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದರು. ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕ ಮರಿಸ್ವಾಮಿಯವರನ್ನು ತಮ್ಮ ನಿವಾಸಕ್ಕೆ ಕರೆಸಿದ್ದು, ಅಲ್ಲಿ ಒಂದು ಹಂತದ ಮಾತುಕತೆ ಬಳಿಕ ದೇವಸ್ಥಾನಕ್ಕೆ ಬಂದಿದ್ದರು. ಇದನ್ನೂ ಓದಿ: ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

blank

ಈ ಹಿಂದೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಅಂದು ಸಹ ಡಿ.ಕೆ.ಶಿವಕುಮಾರ್ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಪತ್ರ ಬರೆದಿದ್ದರು ಎನ್ನಲಾಗಿದೆ. ಪತ್ರದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಲಭಿಸಿತು ಅನ್ನೋದು ಭಕ್ತರ ನಂಬಿಕೆ. ಇದನ್ನೂ ಓದಿ: ನನ್ನನ್ನು ಕರ್ನಾಟಕದ ಡಿಸಿಎಂ ಮಾಡು- ದೇವರಿಗೆ ಶ್ರೀರಾಮುಲು ಲೆಟರ್

The post ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು appeared first on Public TV.

Source: publictv.in

Source link