ಜೆಡಿಯು ಪ್ರಧಾನ ಕಾರ್ಯದರ್ಶಿಯಿಂದ ರಾಜ್ಯದ ಸಿಎಂವರೆಗೆ; ಬೊಮ್ಮಾಯಿ ರಾಜಕಾರಣದ ಹಿನ್ನೋಟ

ಜೆಡಿಯು ಪ್ರಧಾನ ಕಾರ್ಯದರ್ಶಿಯಿಂದ ರಾಜ್ಯದ ಸಿಎಂವರೆಗೆ; ಬೊಮ್ಮಾಯಿ ರಾಜಕಾರಣದ ಹಿನ್ನೋಟ

ಬೆಂಗಳೂರು: ಕೊನೆಗೂ ರಾಜ್ಯದ ನೂತನ ಸಾರಥಿಯನ್ನ ಬಿಜೆಪಿ ಹೈಕಮಾಂಡ್​ ಆಯ್ಕೆ ಮಾಡಿದೆ. ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಬೊಮ್ಮಾಯಿ ವೈಯಕ್ತಿಕ ಹಿನ್ನೆಲೆ ನೋಡೋದಾದ್ರೆ, ರಾಜ್ಯ ಕಂಡ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರರಾಗಿದ್ದಾರೆ. ಎಸ್.ಆರ್.ಬೊಮ್ಮಾಯಿ-ಗಂಗಮ್ಮ ಬೊಮ್ಮಾಯಿ ದಂಪತಿಗೆ 28 ಜನವರಿ 1960 ರಂದು ಬಸವರಾಜ್ ಬೊಮ್ಮಾಯಿ ಜನಿಸುತ್ತಾರೆ. ಹುಬ್ಬಳ್ಳಿಯ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವೀಧರರಾಗಿದ್ದಾರೆ.

blank

ಬೊಮ್ಮಾಯಿ ರಾಜಕೀಯ ಅನುಭವ

  • 1995ರಲ್ಲಿ ರಾಜ್ಯ ಜನತಾ ದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
  • 1996ರಿಂದ 1997ರವರೆಗೆ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್​​ಗೆ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ
  • 1997 ಮತ್ತು 2003ರಲ್ಲಿ ಎರಡು ಬಾರಿ ರಾಜ್ಯ ವಿಧಾನ ಪರಿಷತ್‌ಗೆ ಆಯ್ಕೆ
  • 2008ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆ
  • 2008ರಿಂದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ 5 ವರ್ಷ ಜವಾಬ್ದಾರಿ ನಿರ್ವಹಣೆ
  • 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ 2ನೇ ಬಾರಿಗೆ ಬಿಜೆಪಿಯಿಂದ ಆಯ್ಕೆ
  • 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆ
  • 2019ರ ಆಗಸ್ಟ್ 20ರಿಂದ ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಣೆ‌
  • ಕಳೆದ 6 ತಿಂಗಳಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ‌ ಅನುಭವ

blank

The post ಜೆಡಿಯು ಪ್ರಧಾನ ಕಾರ್ಯದರ್ಶಿಯಿಂದ ರಾಜ್ಯದ ಸಿಎಂವರೆಗೆ; ಬೊಮ್ಮಾಯಿ ರಾಜಕಾರಣದ ಹಿನ್ನೋಟ appeared first on News First Kannada.

Source: newsfirstlive.com

Source link