ಸಿಎಂ ಅನ್ನೋದಕ್ಕಿಂತ ಎಲ್ಲರಲ್ಲೂ ಒಬ್ಬ ಎಂದು ಕೆಲಸ ಮಾಡ್ತೇನೆ -ಸಿಎಂ ಬೊಮ್ಮಾಯಿ

ಸಿಎಂ ಅನ್ನೋದಕ್ಕಿಂತ ಎಲ್ಲರಲ್ಲೂ ಒಬ್ಬ ಎಂದು ಕೆಲಸ ಮಾಡ್ತೇನೆ -ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಜನತೆಗೆ ಕೃತಜ್ಞನಾಗಿದ್ದೇನೆ. ಮೋದಿ ಹಾಗೂ ಬಿಎಸ್​​ವೈ ಮೇಲೆ ರಾಜ್ಯದ ಜನರು ಅಪಾರ ಪ್ರಮಾಣ ನಂಬಿಕೆ ಇಟ್ಟಿದ್ದಾರೆ. ರಾಜ್ಯದ ಜನತೆ ಕೋವಿಡ್​ ಮತ್ತು ಇತರ ಆರೋಗ್ಯ ಸವಾಲುಗಳನ್ನು, ಪ್ರವಾಹವನ್ನು ಎದುರಿಸಿದ್ದಾರೆ. ಇಂತಹ ಜನರ ನೆರವಿಗೆ ನಮ್ಮ ಸರ್ಕಾರ ನಿಲ್ಲುತ್ತದೆ. ದಕ್ಷ ಆಡಳಿತವನ್ನು ನೀಡುತ್ತೇವೆ. ಸಮಾಜಯದ ಕೊನೆಯ ವ್ಯಕ್ತಿಯನ್ನು ತಲುಪುವ ಕಾರ್ಯ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

blank

ಪ್ರಮಾಣ ವಚನ ಸ್ವೀಕಾರ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈಗ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡುತ್ತೇನೆ. ಈಗಿನ ಹಣಕಾಸು ಸ್ಥಿತಿಯನ್ನು ನೋಡಿಕೊಂಡು ಕೆಲವು ನಿರ್ಧಾರಗಳನ್ನು ಮಾಡುತ್ತೇನೆ. ನನ್ನ ಎದುರು ಹಲವು ಸವಾಲುಗಳು ಇದೆ. ಈ ಸವಾಲುಗಳನ್ನು ನಮ್ಮ ಸಹೋದ್ಯೋಗಿಗಳೊಂದಿಗೆ ಕಟ್ಟು ನಿಟ್ಟಾಗಿ ಎದುರಿಸುತ್ತೇವೆ. ನಾನು ಮುಖ್ಯಮಂತ್ರಿ ಅನ್ನೋದಕ್ಕಿಂತ ಎಲ್ಲರಲ್ಲೂ ಒಬ್ಬ ಎಂದು ಕೆಲಸ ಮಾಡುತ್ತೇನೆ. ಮುಂದಿನ ಎರಡು ವರ್ಷ ಯಾವುದೇ ಗೊಂದಲಕ್ಕೆ ಅವಕಾಶ ನೀಡೋದಿಲ್ಲ ಎಂದು ಸಿಎಂ ಭರವಸೆ ನೀಡಿದರು.

ಇದನ್ನೂ ಓದಿ: ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ

The post ಸಿಎಂ ಅನ್ನೋದಕ್ಕಿಂತ ಎಲ್ಲರಲ್ಲೂ ಒಬ್ಬ ಎಂದು ಕೆಲಸ ಮಾಡ್ತೇನೆ -ಸಿಎಂ ಬೊಮ್ಮಾಯಿ appeared first on News First Kannada.

Source: newsfirstlive.com

Source link