ವಲಸಿಗರು ನಮ್ಮ ಪಕ್ಷದವರು, ಸಾಮಾಜಿಕ ನ್ಯಾಯ ಪರಿಗಣಿಸಿ ಮಂತ್ರಿ ಸ್ಥಾನ : ಕಟೀಲ್

ಬೆಂಗಳೂರು: ವಲಸಿಗರು ಈಗ ನಮ್ಮ ಪಕ್ಷದವರು. ಯಾರಿಗೂ ಅನ್ಯಾಯ ಅಗದಂತೆ ಪಕ್ಷ ನಿರ್ಧಾರ ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಜಭವನದಲ್ಲಿ ಬಸವರಾಜ ಬೊಮ್ಮಾಯಿ ಅವರ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಯಾರ್ ಮಂತ್ರಿ ಆಗಬೇಕು ಎನ್ನುವುದನ್ನು ಸಿಎಂ ನಿರ್ಧಾರ ಮಾಡುತ್ತಾರೆ. ಸಾಮಾಜಿಕ ನ್ಯಾಯ, ಭೌಗೋಳಿಕ ಎಲ್ಲವನ್ನು ನೋಡಿ ಮಂತ್ರಿ ಸ್ಥಾನ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ನಮ್ಮಲ್ಲಿ ಗೊಂದಲ ಯಾವುದೇ ಇಲ್ಲ. ಗೊಂದಲ ಇಲ್ಲದೇ ಹೊಸ ನಾಯಕತ್ವ ಆಯ್ಕೆಯಾಗಿದೆ. ಬೊಮ್ಮಾಯಿ ಅವರಿಗೆ ಎಲ್ಲಾ ಕ್ಷೇತ್ರದಲ್ಲೂ ಅನುಭವವಿದೆ. ಸಚಿವ ಸಂಪುಟ ಪಟ್ಟಿ ಸಿಎಂ ಪರಮೋಚ್ಚ ಅಧಿಕಾರವಾಗಿದ್ದು ಅವರು ನೋಡಿಕೊಳ್ಳಲಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ : ಯಾರಿಗೆ ಕೊಕ್ ನೀಡ್ತಾರೆ ಗೊತ್ತಿಲ್ಲ, ನಾನ್ ಮಾತ್ರ ಸಂಪುಟದಲ್ಲಿ ಇರ್ತೀನಿ: ಎಂಟಿಬಿ ನಾಗರಾಜ್

The post ವಲಸಿಗರು ನಮ್ಮ ಪಕ್ಷದವರು, ಸಾಮಾಜಿಕ ನ್ಯಾಯ ಪರಿಗಣಿಸಿ ಮಂತ್ರಿ ಸ್ಥಾನ : ಕಟೀಲ್ appeared first on Public TV.

Source: publictv.in

Source link