ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಕೊರೊನಾತಂಕ -ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋದ್ಯಾರು?

ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಕೊರೊನಾತಂಕ -ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋದ್ಯಾರು?

ಭಾರತ – ಶ್ರೀಲಂಕಾ ನಡುವಿನ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಕಾಡಿದ್ದ ಕೊರೊನಾ, ಇದೀಗ ಟಿ-20 ಸರಣಿಯ ಮೇಲೂ ವಕ್ರದೃಷ್ಟಿ ಬೀರಿದೆ. ಈ ಪರಿಣಾಮ ನಿನ್ನೆ ನಡೆಯಬೇಕಿದ್ದ ಪಂದ್ಯ, ಇಂದಿಗೆ ಪೋಸ್ಟ್​ಪೋನ್​ ಆಗಿದೆ. ನಿನ್ನೆ ನಡೆದ ಡೆವಲಪ್​ಮೆಂಟ್​​ಗಳ ರಿಪೋರ್ಟ್​ ಇಲ್ಲಿದೆ ನೋಡಿ..

ಭಾರತ – ಶ್ರಿಲಂಕಾ ನಡುವಿನ ಏಕದಿನ ಸರಣಿಗೂ ಮುನ್ನವೇ ಲಂಕಾ ಆಟಗಾರರಲ್ಲಿ ಕಾಣಿಸಿಕೊಂಡಿದ್ದ ಕೊರೊನಾ, ವೇಳಾಪಟ್ಟಿ ಬದಲಾವಣೆಗೆ ಕಾರಣವಾಗಿತ್ತು. ಇದೀಗ ಪ್ರವಾಸದಲ್ಲಿ ವೇಳಾಪಟ್ಟಿ 2ನೇ ಬಾರಿ ಬದಲಾಗಿದೆ. ಆದರೀಗ ಕೊರೊನಾ ಸೋಂಕು ಕಾಣಿಸಿಕೊಂಡಿರೋದು ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ.

blank

ನಿನ್ನೆ ನಡೆಸಲಾದ ಱಪಿಡ್​​ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾ ಆಲ್​ರೌಂಡರ್​​ ಕೃನಾಲ್​ ಪಾಂಡ್ಯಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತು. ಕೃನಾಲ್​ಗೆ ಸೋಂಕು ತಗುಲಿದ್ದು, ಖಚಿತವಾದ ಬೆನ್ನಲ್ಲೇ ನಿನ್ನೆ ನಡೆಯಬೇಕಿದ್ದ ಪಂದ್ಯವನ್ನ ಇಂದಿಗೆ ಮುಂದೂಡಿಕೆ ಮಾಡಿ ಆದೇಶಿಸಲಾಯ್ತು. ಇದರ ಜೊತೆಗೆ ಕೃನಾಲ್​ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಸದಸ್ಯರನ್ನೂ ವಿಶೇಷ ಐಸೋಲೇಷನ್​ಗೆ ಒಳಪಡಿಸಲಾಯ್ತು. ಜೊತೆಗೆ ಉಳಿದ ಸದಸ್ಯರನ್ನೂ ಪ್ರತ್ಯೇಕಿಸಲಾಯ್ತು.

ನಿನ್ನೆ ನಡೆದ ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಪಂದ್ಯ ನಡೆಸಲು ಬಿಸಿಸಿಐ ಹಾಗೂ ಲಂಕಾ ಬೋರ್ಡ್​​ಗಳು ಜಂಟಿಯಾಗಿ ನಿರ್ಧರಿಸಿವೆ. ಆದ್ರೆ, ಅದು ಸಾಧ್ಯಾನಾ ಎಂಬ ಚರ್ಚೆ ಕ್ರಿಕೆಟ್​​ ವಲಯದಲ್ಲಿದೆ. ಈಗಾಗಲೇ ಒಬ್ಬ ಆಟಗಾರನ ರಿಪೊರ್ಟ್​ ಪಾಸಿಟಿವ್​ ಬಂದಿದೆ.

blank

ಉಳಿದಂತೆ 8 ಸದಸ್ಯರನ್ನ ಪ್ರಾಥಮಿಕ ಸಂಪರ್ಕಿತರು ಎಂದು ಅಧಿಕೃತವಾಗಿಯೇ ಹೇಳಲಾಗಿದೆ. ಹೀಗಿರುವಾಗ ಪಂದ್ಯದ ಆಯೋಜನೆ ಸಾಧ್ಯವಾ ಅನ್ನೋ ಪ್ರಶ್ನೆ ಚರ್ಚೆಯಲ್ಲಿದೆ. ಒಟ್ಟಿನಲ್ಲಿ ಕೃನಾಲ್​ ಪಾಂಡ್ಯ ಇಂದಿನ ಪಂದ್ಯಕ್ಕೆ ಅಲಭ್ಯ ಅನ್ನೋದು ಕನ್​ಫರ್ಮ್​ ಆಗಿದೆ. ಆದ್ರೆ, ಫ್ರೈಮರಿ ಕಾಂಟ್ಯಾಕ್ಟ್​​ ಎಂದು ಗುರುತಿಸಿರುವವರ 8 ಆಟಗಾರರ ಪೈಕಿ ಎಷ್ಟು ಆಟಗಾರರು ಆಡ್ತಾರೆ ಅನ್ನೋದು ತಿಳಿದು ಬಂದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋದ್ಯಾರು ಅನ್ನೋ ಕುತೂಹಲಭರಿತ ಪ್ರಶ್ನೆಯೂ ಅಭಿಮಾನಿಗಳ ವಲಯದಲ್ಲಿದೆ.

 

The post ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಕೊರೊನಾತಂಕ -ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋದ್ಯಾರು? appeared first on News First Kannada.

Source: newsfirstlive.com

Source link