‘ಬಿಎಸ್​ವೈ ಅವರ ಕೊಡುಗೆಗಳನ್ನ ವರ್ಣಿಸಲು ಪದಗಳೇ ಇಲ್ಲ’- ಹಾಡಿಹೊಗಳಿದ ಮೋದಿ

‘ಬಿಎಸ್​ವೈ ಅವರ ಕೊಡುಗೆಗಳನ್ನ ವರ್ಣಿಸಲು ಪದಗಳೇ ಇಲ್ಲ’- ಹಾಡಿಹೊಗಳಿದ ಮೋದಿ

ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ಹೇಳಿದ್ದಾರೆ. ಇದರ ಜೊತೆಜೊತೆಗೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನ ಪ್ರಧಾನಿ ಮೋದಿ ಹಾಡಿಹೊಗಳಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ಅಭಿವೃದ್ಧಿಗೆ ಮತ್ತು ಬಿಜೆಪಿ ಪಾರ್ಟಿಗೆ ನೀಡಿದ ಕೊಡಗೆಗೆ ನ್ಯಾಯ ಒದಗಿಸುವಲ್ಲಿ ಪದಗಳೂ ಸೋಲುತ್ತವೆ. ದಶಕಗಳ ಕಾಲ ಯಡಿಯೂರಪ್ಪ ಅವರು ಶ್ರಮಿಸಿದ್ದಾರೆ.. ಕರ್ನಾಟಕದ ಮೂಲೆಮೂಲೆಯನ್ನೂ ಸುತ್ತಿ ಜನರ ಮಾತಿಗೆ ಧ್ವನಿಗೂಡಿಸಿದ್ದಾರೆ. ಅವರ ಸಾಮಾಜಿಕ ಕಲ್ಯಾಣಕ್ಕಾಗಿ ಇದ್ದ ಅವರ ಬದ್ಧತೆ ಮೆಚ್ಚುಗೆಗೆ ಅರ್ಹವಾದುದು ಎಂದು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪ್ರಧಾನಿ ಮೋದಿ ಹೊಗಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಿಎಸ್​ವೈ ನಿಮ್ಮ ಮಾತುಗಳಿಗೆ ಧನ್ಯವಾದ ಎಂದಿದ್ದಾರೆ.

ಇನ್ನು ನೂತನ ಸಿಎಂಗೆ ಶುಭಾಶಯ ತಿಳಿಸಿರುವ ಅವರು.. ಬೊಮ್ಮಾಯಿಯವರು ಶ್ರೀಮಂತ ಆಡಳಿತದ ಅನುಭವ ಹೊಂದಿದ್ದಾರೆ.. ನಮ್ಮ ಸರ್ಕಾರ ರಾಜ್ಯದಲ್ಲಿ ಮಾಡಿದ ಅಸಾಧಾರಣ ಕಾರ್ಯಗಳನ್ನು ಮುಂದುವರೆಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

The post ‘ಬಿಎಸ್​ವೈ ಅವರ ಕೊಡುಗೆಗಳನ್ನ ವರ್ಣಿಸಲು ಪದಗಳೇ ಇಲ್ಲ’- ಹಾಡಿಹೊಗಳಿದ ಮೋದಿ appeared first on News First Kannada.

Source: newsfirstlive.com

Source link