ಕಲರ್​ಫುಲ್ ರಾಜ್ಯ ರಾಜಕಾರಣ; ಕಳೆದ 3 ವರ್ಷಗಳಲ್ಲಿ 4 ಮುಖ್ಯಮಂತ್ರಿಗಳ ಪ್ರಮಾಣವಚನ

ಕಲರ್​ಫುಲ್ ರಾಜ್ಯ ರಾಜಕಾರಣ; ಕಳೆದ 3 ವರ್ಷಗಳಲ್ಲಿ 4 ಮುಖ್ಯಮಂತ್ರಿಗಳ ಪ್ರಮಾಣವಚನ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಇಂದು ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನ ಇದೀಗ ಬಸವರಾಜ ಬೊಮ್ಮಾಯಿ ಅಲಂಕರಿಸಿದ್ದಾರೆ. ಇನ್ನು ಕಳೆದ ಕೆಲವರ್ಷಗಳ ರಾಜ್ಯ ರಾಜಕಾರಣವನ್ನ ತಿರುಗಿ ನೋಡೋದಾದ್ರೆ ಕಳೆದ 3 ವರ್ಷಗಳಲ್ಲಿ 4 ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ.

2018 ರ ಮೇ 17 ರಂದು ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ

2018 ಮೇ 13 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿ ಸಂಪೂರ್ಣಗೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕಂಡರೂ ಸಹ ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರ ನಡೆಸಲು ತಯಾರಿ ನಡೆಸುತ್ತಿದ್ದು ಈ ಮಧ್ಯೆಯೇ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಸ್ವೀಕರಿಸಿರುವಂತೆ ರಾಜಭವನದಿಂದ ಆಹ್ವಾನ ಬಂತು. 2018 ರ ಮೇ 17 ರಂದು ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು ಆದರೆ ಎರಡೇ ದಿನಗಳಲ್ಲಿ ಬಿಎಸ್​ವೈ ರಾಜೀನಾಮೆ ನೀಡಬೇಕಾಯ್ತು..

2018 ರ ಮೇ 23 ರಂದು ಹೆಚ್​.ಡಿ. ಕುಮಾರಸ್ವಾಮಿ ಪ್ರಮಾಣವಚನ

ನಂತರ ಕಾಂಗ್ರೆಸ್ ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದುಬಂತು.. 2018 ರ ಮೇ 23 ರಂದು ಹೆಚ್​.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷದ ಆಡಳಿತವನ್ನೂ ಪೂರೈಸಿದರು.. ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಮೈತ್ರಿ ಪಕ್ಷದ 17 ಶಾಸಕರು ಬಿಜೆಪಿಗೆ ಹಾರಿದರು.. ಮೈತ್ರಿ ಪಕ್ಷ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಯ್ತು..

2019 ರ ಜುಲೈ 26 ರಂದು ಮತ್ತೆ  ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ

ಈ ಹಿನ್ನೆಲೆ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ 2019 ರ ಜುಲೈ 26 ರಂದು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎರಡು ವರ್ಷಗಳ ಆಡಳಿತದಲ್ಲಿ ಬಿಎಸ್​ವೈ ಸರ್ಕಾರದಲ್ಲಿ ಹಲವು ಬೆಳವಣಿಗೆಗಳಾದವು.. ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ಬಂತು.. ಹೈಕಮಾಂಡ್​ನಿಂದ ಸಂದೇಶ ಬಂದ ಹಿನ್ನೆಲೆ ಬಿಎಸ್​ವೈ ಸರ್ಕಾರ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಅಂದ್ರೆ 2021 ರ ಜುಲೈ 26 ರಂದು ರಾಜೀನಾಮೆ ಘೋಷಿಸಿದರು.

2021ರ ಜುಲೈ 28 ಬಸವರಾಜ ಬೊಮ್ಮಾಯಿ ಪ್ರಮಾಣವಚನ

ಇದಾದ ನಂತರ ಇದೀಗ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಮುಂದಿನ ಮೂರು ವರ್ಷಗಳಲ್ಲಿ ಮತ್ತೆ ವಿಧಾನಸಭಾ ಚುನಾವಣೆ ಎದುರಾಗಲಿದೆ.

The post ಕಲರ್​ಫುಲ್ ರಾಜ್ಯ ರಾಜಕಾರಣ; ಕಳೆದ 3 ವರ್ಷಗಳಲ್ಲಿ 4 ಮುಖ್ಯಮಂತ್ರಿಗಳ ಪ್ರಮಾಣವಚನ appeared first on News First Kannada.

Source: newsfirstlive.com

Source link