2 ವರ್ಷ ಬೆಂಚ್​ ಕಾದಿರುವ ಕನ್ನಡಿಗ.. ಇಂಗ್ಲೆಂಡ್​ ಸರಣಿಯಲ್ಲಿ ರಾಹುಲ್​ ಆಡೋದು ಪಕ್ಕಾ?

2 ವರ್ಷ ಬೆಂಚ್​ ಕಾದಿರುವ ಕನ್ನಡಿಗ.. ಇಂಗ್ಲೆಂಡ್​ ಸರಣಿಯಲ್ಲಿ ರಾಹುಲ್​ ಆಡೋದು ಪಕ್ಕಾ?

ತಪ್ಪು ಮಾಡೋದು ಮನುಷ್ಯನ ಸಹಜ ಗುಣ. ಆದ್ರೆ ಆ ತಪ್ಪುಗಳನ್ನ ತಿದ್ದಿ ನಡೆಯೋದೇ ಕಷ್ಟದ ವಿಚಾರ. ಆದ್ರೆ, ಟೀಮ್​ ಇಂಡಿಯಾದ ಈ ಆಟಗಾರ ಮಾಡಿದ ತಪ್ಪುಗಳಿಂದ ಪಾಠ ಕಲೀತಿದ್ದಾನಂತೆ. ತಪ್ಪುಗಳನ್ನ ತಿದ್ದಿಕೊಂಡಿರುವ ಈತ ಈಗ ಕಮ್​ಬ್ಯಾಕ್​ ಮಾಡೋ ನಿರೀಕ್ಷೆಯಲ್ಲಿದ್ದಾನೆ.

ಅದ್ಯಾಕೋ ಕೆ.ಎಲ್​​.ರಾಹುಲ್​​ ನಸೀಬು ಸರಿ ಇಲ್ಲ ಎಂದು ಕಾಣುತ್ತೆ. ವೈಫಲ್ಯದ ಸುಳಿಗೆ ಸಿಲುಕಿಕೊಂಡಿರುವ ಕನ್ನಡಿಗ​, ಅದರಿಂದ ಹೊರಬರಲು ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಫಾರ್ಮ್​ ಕಂಡುಕೊಂಡರೂ ಟಾಪ್​ ಆ್ಯಂಡ್​ ಮಿಡಲ್​ ಆರ್ಡರ್​​​ನಲ್ಲಿ ಉಂಟಾಗಿರುವ ಕಾಂಪಿಟೇಷನ್​ ಸ್ಥಾನ ಮರೀಚಿಕೆ ಅನ್ನೋ ಹಾಗೇ ಮಾಡಿದೆ. ಆದ್ರೆ, ಇಂಗ್ಲೆಂಡ್​ ಪ್ರವಾಸದಲ್ಲಿ ಕಮ್​ಬ್ಯಾಕ್​ ಮಾಡೇ ಮಾಡ್ತಿನಿ ಅನ್ನೋದು ರಾಹುಲ್​, ಆತ್ಮವಿಶ್ವಾಸದ ಮಾತಾಗಿದೆ.

blank

ಕೆ.ಎಲ್​.ರಾಹುಲ್​ ಕೊನೆಯ ಟೆಸ್ಟ್​ ಆಡಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್ ಮೊದಲ ಆವೃತ್ತಿಯ ಆರಂಭದ ಸರಣಿಯಲ್ಲಿ. ಅಂದ್ರೆ, 2019 ಆಗಸ್ಟ್​​ನಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ. ಅದಾಗಿ ಎರಡು ವರ್ಷಗಳ ಕಾಲ ಬೆಂಚ್ ಕಾದಿದ್ದ ರಾಹುಲ್​, ಇದೀಗ ಇಂಗ್ಲೆಂಡ್​ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಯಾಕಂದ್ರೆ ಸುದೀರ್ಘ ಈ ಎರಡು ವರ್ಷಗಳ ಅವಧಿಯಲ್ಲಿ ತಾನು ಮಾಡಿದ ತಪ್ಪುಗಳನ್ನ ಈಗ ರಾಹುಲ್​​ ತಿದ್ದಿಕೊಂಡಿದ್ದಾರಂತೆ.

‘2019ರ ನಂತರ ತಂಡದಿಂದ ಕೈಬಿಟ್ಟಾಗ ಕೋಚ್​​ ಬಳಿ ಚರ್ಚಿಸಿದ್ದೆ. ಆಗವರು ನನ್ನ ತಪ್ಪುಗಳನ್ನು ಮುಂದಿಟ್ಟು ತಿದ್ದಿಕೊಳ್ಳಲು ಸಲಹೆ ನೀಡಿದ್ದರು. ಬಳಿಕ ತಪ್ಪುಗಳನ್ನ ತಿದ್ದಿಕೊಳ್ಳಲು ಸಾಕಷ್ಟು ವಿಡಿಯೋಗಳನ್ನ ನೋಡಿದೆ. ಆ ಮೂಲಕ ಅವುಗಳನ್ನು ಸರಿಪಡಿಸಿಕೊಂಡೆ. ಇದೀಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಸ್ವತಂತ್ರವಾಗಿ ಬ್ಯಾಟ್​ ಬೀಸುತ್ತೇನೆ. ನನ್ನ ಆಟವನ್ನ ಎಂಜಾಯ್​ ಮಾಡುತ್ತೇನೆ. ಸದ್ಯ ಟೆಸ್ಟ್ ಆಡಿ ಸಾಕಷ್ಟು ಸಮಯವಾಗಿದ್ದು, ಅವಕಾಶಕ್ಕಾಗಿ ಶಾಂತವಾಗಿ ಕಾಯುತ್ತಿದ್ದೇನೆ’’

blank

ಟೆಸ್ಟ್​ನಲ್ಲಿ ರಾಹುಲ್​ ಪ್ರದರ್ಶನ

  • ಪಂದ್ಯ 36
  • ರನ್​ 2006
  • 50/100 11/05
  • ಸರಾಸರಿ 34.59

ವೆಸ್ಟ್​ ಇಂಡೀಸ್​ ವಿರುದ್ಧ ಕೊನೆಯ ಟೆಸ್ಟ್​ ಪಂದ್ಯವನ್ನಾಡಿದ್ದ ರಾಹುಲ್​ ಅದಕ್ಕೂ ಕೆಲ ಇನ್ನಿಂಗ್ಸ್​​ಗಳ ಹಿಂದಿನಿಂದ ವೈಫಲ್ಯ ಅನುಭವಿಸಿದ್ರು. ಪರಿಣಾಮ ತಂಡದಿಂದ ಡ್ರಾಪ್​ ಆದ ರಾಹುಲ್​ ನಂತರ ಎದುರಿಸಿದ್ದು ಪೈಪೋಟಿಯನ್ನ. ಆರಂಭಿಕನ ಸ್ಥಾನಕ್ಕೆ ಪೃಥ್ವಿ, ಮಯಾಂಕ್​, ಗಿಲ್​, ರೋಹಿತ್​ ಆದ್ರೆ, ಮಿಡಲ್​ ಆರ್ಡರ್​ನಲ್ಲಿ ಪಂತ್​, ಹನುಮ ವಿಹಾರಿ ಸ್ಥಾನವನ್ನ ಕಿತ್ತುಕೊಂಡರು. ಪರಿಣಾಮ ತಂಡಕ್ಕೆ ಆಯ್ಕೆಯಾದ್ರೂ, 2 ವರ್ಷ ಬೆಂಚ್​ಗೆ ಸೀಮಿತವಾಗಬೇಕಾಯ್ತು.

ಇದೀಗ ತಪ್ಪುಗಳನ್ನ ತಿದ್ದಿಕೊಂಡೆ ಅಂದಿರುವ ರಾಹುಲ್​ ಅದನ್ನ ಅಭ್ಯಾಸ ಪಂದ್ಯದಲ್ಲಿ ನಿರೂಪಿಸಿದ್ದಾರೆ ಕೂಡ. ಫ್ರಾಕ್ಟಿಸ್​ ಮ್ಯಾಚ್​ನ ಶತಕ ರಾಹುಲ್​ಗೆ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​ ನೀಡುತ್ತಾ..? ಕಾದು ನೋಡಬೇಕಿದೆ.

The post 2 ವರ್ಷ ಬೆಂಚ್​ ಕಾದಿರುವ ಕನ್ನಡಿಗ.. ಇಂಗ್ಲೆಂಡ್​ ಸರಣಿಯಲ್ಲಿ ರಾಹುಲ್​ ಆಡೋದು ಪಕ್ಕಾ? appeared first on News First Kannada.

Source: newsfirstlive.com

Source link