ಮಿಡಲ್​ ಆರ್ಡರ್​ನಲ್ಲಿ ಗೊಂದಲ ಮೂಡಿಸಿದ ರಹಾನೆ ಕಂಬ್ಯಾಕ್: ಯಾರಿಗೆ ಸಿಗುತ್ತೆ ಕೊಕ್

ಮಿಡಲ್​ ಆರ್ಡರ್​ನಲ್ಲಿ ಗೊಂದಲ ಮೂಡಿಸಿದ ರಹಾನೆ ಕಂಬ್ಯಾಕ್: ಯಾರಿಗೆ ಸಿಗುತ್ತೆ ಕೊಕ್

ಇಂಜುರಿ ಕಾರಣದಿಂದಲೇ ಸುದ್ದಿಯಲ್ಲಿದ್ದ ಇಂಗ್ಲೆಂಡ್​ನಲ್ಲಿರೋ ಟೀಮ್​ ಇಂಡಿಯಾ ಕ್ಯಾಂಪ್​ನಿಂದ ಗುಡ್​ನ್ಯೂಸ್​​ ಒಂದು ಬಂದಿದೆ. ಆ ಗುಡ್​ನ್ಯೂಸ್​ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಹಾಗಾದರೆ ಗುಡ್​ನ್ಯೂಸ್​ ಏನು.? ಅದರಿಂದ ಹುಟ್ಟಿರುವ ಪ್ರಶ್ನೆಗಳ್ಯಾವುವು.? ಇಲ್ಲಿದೆ ನೋಡಿ ಕಂಪ್ಲೀಟ್​​ ಡಿಟೇಲ್ಸ್​.​

ಇಂಗ್ಲೆಂಡ್​ ಕೌಂಟಿ ಇಲೆವೆನ್​ ವಿರುದ್ಧದ ಅಭ್ಯಾಸದ ಪಂದ್ಯದಲ್ಲಿ ಟೀಮ್​ ಇಂಡಿಯಾ ಕಣಕ್ಕಿಳಿದಾಗ, ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ನಾಯಕ ವಿರಾಟ್​ ಕೊಹ್ಲಿ, ಅಜಿಂಕ್ಯಾ ರಹಾನೆ ಕಣಕ್ಕಿಳಿಯದಿರೋದು, ಹಲವು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿತ್ತು,. ಆ ಬಳಿಕ ಇಂಜುರಿ ಸಮಸ್ಯೆಯಿಂದ ಈ ಇಬ್ಬರು ಕಣಕ್ಕಿಳಿದಿಲ್ಲ ಅನ್ನೋ ಸುದ್ದಿ ಹೊರ ಬಿದ್ದಿದ್ದು, ಆತಂಕ ಹುಟ್ಟುಹಾಕಿತ್ತು.

blank

ಅದಾದ ಎರಡು ದಿನಗಳ ಬಳಿಕ ಕೊಹ್ಲಿ ನೆಟ್ಸ್​ನಲ್ಲಿ ಬೆವರಿಳಿಸಿದ್ದು ಸಮಾಧಾನ ತಂದಿತ್ತಾದರೂ, ರಹಾನೆ ಇಂಜುರಿ ಬಗ್ಗೆ ಯಾವುದೇ ಅಪ್​ಡೇಟ್ಸ್​ ಸಿಕ್ಕಿರಲಿಲ್ಲ. ಇದೀಗ ಇಂಗ್ಲೆಂಡ್​ನಿಂದ ಗುಡ್​​ನ್ಯೂಸ್​​ ಹೊರ ಬಿದ್ದಿದೆ. ಹ್ಯಾಮ್​ಸ್ಟಿಂಗ್​ ಇಂಜುರಿಯಿಂದ ಬಳಲುತ್ತಿದ್ದ ವೈಸ್​ ಕ್ಯಾಪ್ಟನ್​ ಅಜಿಂಕ್ಯಾ ರಹಾನೆ, ಇದೀಗ ಅಭ್ಯಾಸವನ್ನ ಆರಂಭಿಸಿದ್ದಾರೆ.

ಇದನ್ನೂ ಓದಿ: ಉಪ-ನಾಯಕ ಅಜಿಂಕ್ಯಾ ರಹಾನೆ ಫಿಟ್- ಕ್ಯಾಪ್ಟನ್ ಕೊಹ್ಲಿ ಈಗ ಫುಲ್ ರಿಲ್ಯಾಕ್ಸ್..!

ನೆಟ್ಸ್​​ನಲ್ಲಿ ಕೆಲ ಕಾಲ ಬೆವರು ಹರಿಸಿರುವ ರಹಾನೆ, ಪಂದ್ಯವನ್ನಾಡೋವಷ್ಟು ಫಿಟ್​ ಆಗಿದ್ದಾರೆ ಅನ್ನೋದು ಮೂಲಗಳ ಮಾಹಿತಿಯಾಗಿದೆ.
ಸ್ವತಃ ರಹಾನೆಗೂ ಬಿಗ್​ ರಿಲೀಫ್​ ನೀಡಿದ ಇಂಜುರಿ..! ರಹಾನೆ ಫಿಟ್​​ ಆ್ಯಂಡ್​​ ಫೈನ್​ ಅನ್ನೋದು ಟೀಮ್​ ಇಂಡಿಯಾ ಕ್ಯಾಂಪ್​ಗೆ ಮಾತ್ರವಲ್ಲ..!! ಸ್ವತಃ ರಹಾನೆ ಪಾಲಿಗೂ ಗುಡ್​ನ್ಯೂಸ್​​ ಆಗಿದೆ. ಕಳೆದ 12 ಇನ್ನಿಂಗ್ಸ್​​ಗಳಲ್ಲಿ ಬಿಗ್​​ಸ್ಕೋರ್​​ ಕಲೆ ಹಾಕುವಲ್ಲಿ ರಹಾನೆ ವಿಫಲರಾಗಿದ್ದಾರೆ. ಹೀಗಾಗಿ ಆಂಗ್ಲರ ವಿರುದ್ಧದ ಟೆಸ್ಟ್​ ಸರಣಿ, ಮುಂಬೈಕರ್​ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿ ಮಾರ್ಪಟ್ಟಿದೆ.

 

blank

ಇಲ್ಲಿ ಸಾಮರ್ಥ್ಯವನ್ನ ಹೊರ ಹಾಕಿದ್ರೆ ಮಾತ್ರ, ಸ್ಥಾನ ಭದ್ರವಾಗಲಿದೆ. ರಹಾನೆ ಫಿಟ್​, ಗೊಂದಲಕ್ಕೆ ಸಿಲುಕಿದ ಮ್ಯಾನೇಜ್​ಮೆಂಟ್​..!
ಇದೆಲ್ಲದರ ಜೊತೆಗೆ ರಹಾನೆ ಕಮ್​ಬ್ಯಾಕ್​​, ಮ್ಯಾನೇಜ್​ಮೆಂಟ್​ನ್ನು ಗೊಂದಲಕ್ಕೆ ಸಿಲುಕಿಸಿದೆ. ರಹಾನೆ ಇಂಜುರಿಯಿಂದಾಗಿ ಅಭ್ಯಾಸ ಪಂದ್ಯದಲ್ಲಿ ಮಿಡಲ್​ ಆರ್ಡರ್​ನಲ್ಲಿ ಕಣಕ್ಕಿಳಿದ ರಾಹುಲ್,​ ಶತಕ ಸಿಡಿಸಿ ಭರವಸೆ ಮೂಡಿಸಿದ್ದಾರೆ.

ಹೀಗಾಗಿ ಮಿಡಲ್​ ಆರ್ಡರ್​ಗೆ ಸರ್ಜರಿ ಮಾಡೋದೆ ಆದ್ರೆ, ಪ್ಲೇಯಿಂಗ್​ ಇಲೆವೆನ್​ನಿಂದ ಯಾರಿಗೆ ಕೊಕ್​ ನೀಡಬೇಕು ಅನ್ನೋದು, ಕ್ಯಾಪ್ಟನ್​ ಕೊಹ್ಲಿ- ಕೋಚ್​ ರವಿ ಶಾಸ್ತ್ರಿ ತಲೆನೋವಿಗೆ ಕಾರಣವಾಗಿದೆ.

The post ಮಿಡಲ್​ ಆರ್ಡರ್​ನಲ್ಲಿ ಗೊಂದಲ ಮೂಡಿಸಿದ ರಹಾನೆ ಕಂಬ್ಯಾಕ್: ಯಾರಿಗೆ ಸಿಗುತ್ತೆ ಕೊಕ್ appeared first on News First Kannada.

Source: newsfirstlive.com

Source link