ಫಿಲ್ಮ್ ಸಿಟಿ ನಿರ್ಮಿಸೋಕೆ ಸಜ್ಜಾದ ನಿರ್ಮಾಪಕ ಉಮಾಪತಿ.. ಎಲ್ಲಿ..?

ಫಿಲ್ಮ್ ಸಿಟಿ ನಿರ್ಮಿಸೋಕೆ ಸಜ್ಜಾದ ನಿರ್ಮಾಪಕ ಉಮಾಪತಿ.. ಎಲ್ಲಿ..?

ಸಿನಿಮಾ ರಂಗದಲ್ಲಿ ಸಾಧನೆ ಮಾಡಬೇಕು, ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನ ಕೊಡಬೇಕು ಅಂದುಕೊಂಡು ಚಿತ್ರರಂಗಕ್ಕೆ ಬಂದವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್​​ ಗೌಡ.. ಆದ್ರೆ ಕೆಲ ದಿನಗಳ ಹಿಂದೆ ಅವರ ಸಿನಿಮಾಗಳಿಗಿಂತ ಕಾಂಟ್ರವರ್ಸಿಗಳಲ್ಲೇ ಅವರ ಹೆಸರು ಮೇಳೈಸಿದ್ದು ಹೆಚ್ಚಾಗಿ ಬಿಡ್ತು.. ಈ ಸಂದರ್ಭದಲ್ಲಿ ಉಮಾಪತಿ ಅವರಿಗೊಂದು ದೊಡ್ಡ ಸಿನಿ ಕನಸಿದೆ.. ಅದು ಸಿನಿಮಾ ನಿರ್ಮಾಣಕ್ಕೂ ದೊಡ್ಡದು..? ಇಷ್ಟಾದ್ರೂ ಆ ಕನಸನ್ನ ಬಿಟ್ಟಿಲ್ಲ, ಬಿಡೋದು ಇಲ್ವಂತೆ..? ಹಾಗಾದ್ರೆ ರಾಬರ್ಟ್ ನಿರ್ಮಾಪಕನ ಆ ಕನಸೇನು..? ಈ ಸ್ಟೋರಿ ನೋಡಿ.

ಸಿನಿಮಾ ರಂಗದಲ್ಲಿ ಕಲಾವಿದರಾಗಲು ಕಲೆ ಬೇಕು, ಆ ಕಲೆಯ ಜೊತೆ ಒಂದ್ ಹಿಡಿ ಲಕ್ಕು ಇರಬೇಕು..ಆದ್ರೆ ಸಿನಿಮಾ ರಂಗದಲ್ಲಿ ನಿರ್ಮಾಪಕನಾಗೋದಕ್ಕೆ ಗಟ್ಟಿ ಗುಂಡ್ಗೆ ಇರಬೇಕು, ವಿಶಾಲ ಹೃದಯವೂ ಬೇಕು, ವ್ಯವಹಾರ ಜ್ಞಾನವೂ ಇರಲೇ ಬೇಕು.. ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ನಿರ್ಮಾಪಕನಾಗೋ ಎಲ್ಲಾ ಅರ್ಹತೆಯೂ ಇದೆ.. ಗಟ್ಟಿ ಗುಂಡ್ಗೆನೂ ಇದೆ.. ಒಳ್ಳೆಯ ಹೃದಯವೂ ಇದೆ.. ವ್ಯವಹಾರ ಜ್ಞಾನವೂ ಇದೆ.. ಈಗ್ಯಾಕೆ ಈ ವಿಷಯ ಅಂತ ಕೇಳೋರಿಗೆ ನಮ್ಮ ಹತ್ರ ಪಕ್ಕಾ ಉತ್ತರವೂ ಇದೆ..

ಸಿನಿಮಾ ಮೇಲಿನ ಹುಚ್ಚಿನಿಂದ ಸಿನಿಮಾ ನಿರ್ಮಾಪಕನಾಗೋ ಕಿಚ್ಚಿನಿಂದ ಸಿನಿಮಾ ರಂಗಕ್ಕೆ ಬಂದವರು ಉಮಾಪತಿ ಶ್ರೀನಿವಾಸ್.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾದ ಮೂಲಕ ಗಾಂಧಿನಗರಕ್ಕೆ ಬಲಗಾಲಿಟ್ಟ ಉಮಾಪತಿ ಮೊದಲ ಸಿನಿಮಾದಲ್ಲೇ ಜಾಕ್ ಪಾಟ್ ಹೊಡೆದ್ರು..

blank

ನಟ ದರ್ಶನ್ ಅವರಿಗೊಂದು ಸಿನಿಮಾ ಮಾಡಬೇಕು ಅನ್ನೋ ಮಹಾದಾಸೆಯಿಂದ ಅದ್ಧೂರಿ ಬಜೆಟ್​​ನಲ್ಲಿ ರಾಬರ್ಟ್ ಸಿನಿಮಾವನ್ನ ನಿರ್ಮಾಣ ಮಾಡಿ ಗೆದ್ದರು.. ‘ರಾಬರ್ಟ್​’​​ ಸಿನಿಮಾದ ಜೊತೆ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ‘‘ಒಂದಲ್ಲಾ ಎರಡಲ್ಲಾ‘‘ ಸಿನಿಮಾವನ್ನ ಸ್ಯಾಂಡಲ್​ವುಡ್​​​ಗೆ ಅರ್ಪಿಸಿದ್ರು..

ಸದ್ಯ ಈಗ ‘ಮದಗಜ’ ಹಾಗೂ ‘ಉಪಾಧ್ಯಕ್ಷ’ ಸಿನಿಮಾಗಳನ್ನ ನಿರ್ಮಾಣ ಮಾಡ್ತಿರೋ ಉಮಾಪತಿ ದೊಡ್ಡದೊಂದು ಕನಸನ್ನ ಹೊತ್ತಿದ್ದಾರೆ.. ಬರಿ ಬಿಗ್ ಬಜೆಟ್​​ನ ಸಿನಿಮಾ ಮಾಡಿದ್ರೆ ದೊಡ್ಡದನ್ನಿಸುತ್ತಿದ್ದಿಲ್ಲ.. ಕನ್ನಡ ಚಿತ್ರರಂಗಕ್ಕೆ ಒಳ್ಳೆದಾಗೋ ಕಾರ್ಯವೊಂದಕ್ಕೆ ಉಮಾಪತಿ ಯೋಚಿಸಿದ್ದಾರೆ ಯೋಜಿಸಿದ್ದಾರೆ..

ಕೆಲ ದಿನಗಳ ಹಿಂದೆ ತನ್ನ ಹೆಸರಿಗೆ ಬಂದ ಆರೋಪದಿಂದ ಕೊಂಚ ಬೇಸರವಾಗಿದ್ದರು ಉಮಾಪತಿ.. ಆದ್ರೆ ಆದ ನೋವನೆಲ್ಲ ಮರೆತು ತನ್ನ ಡ್ರೀಮ್ ಪ್ರಾಜೆಕ್ಟ್​​ಗಾಗಿ ಹೆಜ್ಜೆ ಇಡುತ್ತಿದ್ದಾರೆ ಹೆಬ್ಬುಲಿ ಪ್ರೊಡ್ಯೂಸರ್​.. ಹಾಗಾದ್ರೆ ಉಮಾಪತಿ ಶ್ರೀನಿವಾಸ್ ಅವರ ಆ ಡ್ರೀಮ್ ಪ್ರಾಜೆಕ್ಟ್ ಯಾವುದು..? ಅನ್ನೊ ಪ್ರಶ್ನೆಗೆ ಉತ್ತರ ಫಿಲ್ಮ್ ಸಿಟಿ..

ರಾಮೋಜಿರಾವ್ ಫಿಲ್ಮ್ ಸಿಟಿ ಇಡೀ ದೇಶದ ಚಿತ್ರರಂಗಕ್ಕೆ ಮಾದರಿ.. ಕಟ್ಟಿದ್ರೆ ಇಂತದೊಂದು ಫಿಲ್ಮ್ ಸಿಟಿಯನ್ನ ಕಟ್ಟಬೇಕು ಎಂದವರೆಹೆಚ್ಚು.. ದೊಡ್ಡ ದೊಡ್ಡ ಫಿಲ್ಮ್ ನಿರ್ಮಾಣಕ್ಕೆ ರಾಮೋಜಿರಾವ್ ಫಿಲ್ಮ್ ಸಿಟಿಯೇ ಅಚ್ಚು ಮೆಚ್ಚು.. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ಫಿಲ್ಮ್ ಸಿಟಿ ಕಟ್ಟೋ ಕನಸಿದೆಯಂತೆ. ರಾಮೋಜಿರಾವ್ ಫಿಲ್ಮ್ ಸಿಟಿಯಷ್ಟು ದೊಡ್ಡದಾದ ಸ್ಟುಡಿಯೋ ಕಟ್ಟಲಾಗದೆ ಇದ್ದರು ತಕ್ಕ ಮಟ್ಟಿಗಾದ್ರು ಸ್ಟುಡಿಯೋವೊಂದನ್ನ ಕಟ್ಟುವ ಆಸೆ ಇದೆಯಂತೆ..

ಬರಿ ಆಸೆ ಕನಸು ಮಾತ್ರ ಇಟ್ಕೊಂಡಿಲ್ಲ ಉಮಾಪತಿ.. ಒಂದೆಜ್ಜೆ ಮುಂದೆ ಹೋಗಿ ಸೂಕ್ತ ಸ್ಥಳವನ್ನ ನಿಗದಿ ಮಾಡಿದ್ದಾರೆ.. ಕನಕಪುರ ರಸ್ತೆಯ ಮಲವಾಡಿ ಹಳ್ಳಿಯ ಬಳಿ 30 ಎಕ್ಕರೆ ಜಾಗದಲ್ಲಿ ಸುಸಜ್ಜಿತ ಸ್ಟುಡಿಯೋವೊಂದನ್ನ ಕಟ್ಟಲು ಪ್ಲಾನ್ ರೂಪಿಸಿದ್ದಾರಂತೆ ಉಮಾಪತಿ..
ಕೆಲ ದಿನಗಳ ಹಿಂದೆ ತನ್ನ ಹೆಸರಿಗೆ ಬಂದ ಆರೋಪದಿಂದ ಕೊಂಚ ಬೇಸರವಾಗಿದ್ದರು ಉಮಾಪತಿ.. ಆದ್ರೆ ಈಗ ಆದ ನೋವನ್ನ ಮರೆತು ಒಂದು ಅದೇ ಸ್ಮೈಲ್​​​​ನಲ್ಲಿ ತಮ್ಮ ಸಿನಿ ಕನಸಿನ ಕೆಲಸಕ್ಕೆ ಮುಂದಾಗಿದ್ದಾರೆ ರಾಬರ್ಟ್ ನಿರ್ಮಾಪಕ.. ಆದಷ್ಟು ಬೇಗ ಉಮಾಪತಿ ಶ್ರೀನಿವಾಸ್ ಅವರ ಕನಸು ನನಸಾಗಲಿ, ಕನ್ನಡ ಚಿತ್ರರಂಗಕ್ಕೆ ಒಳ್ಳೆದಾಗ್ಲಿ..

The post ಫಿಲ್ಮ್ ಸಿಟಿ ನಿರ್ಮಿಸೋಕೆ ಸಜ್ಜಾದ ನಿರ್ಮಾಪಕ ಉಮಾಪತಿ.. ಎಲ್ಲಿ..? appeared first on News First Kannada.

Source: newsfirstlive.com

Source link