ಸಿಎಂ ಆದ ಬಳಿಕ ಬೊಮ್ಮಾಯಿ ಮೊದಲ ನಿರ್ಣಯ; ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ

ಸಿಎಂ ಆದ ಬಳಿಕ ಬೊಮ್ಮಾಯಿ ಮೊದಲ ನಿರ್ಣಯ; ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ

ಬೆಂಗಳೂರು: ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ರಾಜ್ಯದ ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದೇನೆ. ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮ್ಯಾಕ್ರೋ ಮ್ಯಾನೇಜ್​​ಮೆಂಟ್​​ ಅಲ್ಲ, ಮೈಕ್ರೋ ಮ್ಯಾನೇಜ್​​ಮೆಂಟ್​​ ಮಾಡಬೇಕು. ಇಲಾಖೆ ನಡುವೆಯೇ ಯಾವುದೇ ತಡವಿಲ್ಲದೇ ಕೆಲಸ ಆಗಬೇಕು, ಎಲ್ಲರೂ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. ಏನು ಮಾಡಿದರೂ ನಡೆಯುತ್ತೆ ಎಂಬ ಮನೋಭಾವ ಇನ್ನೂ ನಡೆಯೋದಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.

ಆರ್ಥಿಕ ವೆಚ್ಚ ಕಡಿಮೆ ಮಾಡಲು ಎಲ್ಲಾ ಇಲಾಖೆಗಳ ವೆಚ್ಚವನ್ನು ಕನಿಷ್ಠ 5 ರಷ್ಟಾದರೂ ಕಡಿಮೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಫೈಲ್​ ಕ್ಲಿಯರೆನ್ಸ್​ ತಡವಾಗುವುದನ್ನು ತಡೆಯಲು ವಿಶೇಷ ಯೋಜನೆ ಜಾರಿ ಮಾಡುತ್ತೇವೆ. 15 ದಿನಗಳಲ್ಲಿ ಹೊಸ ಯೋಜನೆ ಆರಂಭವಾಗಲಿದೆ. ಹೊಸ ದಿಸ್ಸೂಚಿಯಿಂದ ಆಡಳಿತದಲ್ಲಿ ದಕ್ಷತೆ ತರುವ, ಅಭಿವೃದ್ಧಿ ಕಾಮಗಾರಿಗೆ ವೇಗ ನೀಡುವ ಕಾರ್ಯ ಮಾಡುತ್ತೇವೆ. ಆಡಳಿತ ದೃಷ್ಠಿಯಿಂದಲೂ ಆರ್ಥಿಕ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇನೆ. ಈಗ ನಮಗೆ ಕೊರೊನಾ ಮತ್ತು ನೆರೆ ಸವಾಲು ಎದುರಿದಿದೆ. ಆರೋಗ್ಯ ಸಚಿವರೊಂದಿಗೆ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸುತ್ತೇವೆ.

ಮೊದಲ ಸಚಿವ ಸಭೆಯ ನಿರ್ಣಯಗಳು..

ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಲು.. ಹೊಸ ಶಿಷ್ಯ ವೇತನ ಜಾರಿ. ಇದಕ್ಕೆ 1 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ.

ಸಂದ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು 1,200 ರೂಪಾಯಿಗೆ ಹೆಚ್ಚಳ.. ಇದಕ್ಕೆ 862 ಕೋಟಿ ವೆಚ್ಚ ಆಗಲಿದೆ.. 3,898 ಮಂದಿಗೆ ಅನುಕೂಲ ಆಗಲಿದೆ.

ವಿಧವಾ ವೇತನವನ್ನು 800 ರೂಪಾಯಿಗೆ ಹೆಚ್ಚಳ..

ಅಂಗವಿಕಲರ ವೇತನವನ್ನು ಶೇ.45-75 ಅಂಗವಿಕರಿಗೆ 800 ವೇತನವನ್ನು ಹೆಚ್ಚಳ ಮಾಡಲಾಗುತ್ತಿದೆ..

The post ಸಿಎಂ ಆದ ಬಳಿಕ ಬೊಮ್ಮಾಯಿ ಮೊದಲ ನಿರ್ಣಯ; ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ appeared first on News First Kannada.

Source: newsfirstlive.com

Source link