ಕರ್ನಾಟಕ ಇತಿಹಾಸದಲ್ಲೇ ನನ್ನ ಆಡಳಿತ ಜನಪರವಾಗಿರಲಿದೆ- ಸಿಎಂ ಬೊಮ್ಮಾಯಿ

ಕರ್ನಾಟಕ ಇತಿಹಾಸದಲ್ಲೇ ನನ್ನ ಆಡಳಿತ ಜನಪರವಾಗಿರಲಿದೆ- ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ ಬೊಮ್ಮಾಯಿ ಕರ್ನಾಟಕ ಇತಿಹಾಸದಲ್ಲೇ ನನ್ನ ಆಡಳಿತ ಜನಪರವಾಗಿರಲಿದೆ ಎಂದಿದ್ದಾರೆ.

ಪದಗ್ರಹಣ ಮಾಡಿದ ಮೊದಲ ದಿನವೇ ಹಲವು ಕಾರ್ಯಕ್ರಮಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು. ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಲು.. ಹೊಸ ಶಿಷ್ಯ ವೇತನ ಜಾರಿ. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1000 ರೂ. ದಿಂದ 1200 ರೂ.ಗೆ ಹೆಚ್ಚಳ. ವಿಧವಾ ವೇತನ 600 ರೂ. ಬದಲು 800 ರೂ.ಗೆ ಏರಿಕೆ.. ಶೇ.45-75 ಅಂಗವಿಕಲರ ವೇತನ ಯೋಜನೆಯಡಿಯಲ್ಲಿ 600 ರೂ. ಬದಲು 800 ರೂ.ಗೆ ಏರಿಕೆ ಹೀಗೆ ಹಲವು ಯೋಜನೆಗಳನ್ನು ಘೋಷಿಸಿದರು.

ನಾಳೆ ಕಾರವಾರ ಪ್ರವಾಸ ನಡೆಸಿ ನೆರೆಪರಿಸ್ಥಿತಿ ವೀಕ್ಷಿಸಲಾಗುವುದು. ಅಲ್ಲದೇ ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡುತ್ತಲೇ ದೆಹಲಿಗೆ ತೆರಳಲಿದ್ದೇನೆ ಎಂದು ಹೇಳಿದ್ರು. ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ.. ಒಂದಂತೂ ಹೇಳುತ್ತೇನೆ.. ನನ್ನ ಆಡಳಿತ ಕರ್ನಾಟಕ ಇತಿಹಾಸದಲ್ಲೇ ಜನಪರ ಸರ್ಕಾರವಾಗಿರಲಿದೆ ಎಂದು ಹೇಳಿದ್ರು.

The post ಕರ್ನಾಟಕ ಇತಿಹಾಸದಲ್ಲೇ ನನ್ನ ಆಡಳಿತ ಜನಪರವಾಗಿರಲಿದೆ- ಸಿಎಂ ಬೊಮ್ಮಾಯಿ appeared first on News First Kannada.

Source: newsfirstlive.com

Source link