ಪೆಗಸಸ್ ಗೂಢಚರ್ಯೆ: ಕೇಂದ್ರದ ವಿರುದ್ಧ ಒಂದಾದ ವಿಪಕ್ಷಗಳ ನಾಯಕರು.. ಹೋರಾಟಕ್ಕೆ ತಯಾರಿ

ಪೆಗಸಸ್ ಗೂಢಚರ್ಯೆ: ಕೇಂದ್ರದ ವಿರುದ್ಧ ಒಂದಾದ ವಿಪಕ್ಷಗಳ ನಾಯಕರು.. ಹೋರಾಟಕ್ಕೆ ತಯಾರಿ

ನವದೆಹಲಿ: ಪೆಗಸಸ್ ಗೂಢಚರ್ಯೆ ಕೆಲಸ ಕೇಂದ್ರ ಸರ್ಕಾರದಿಂದಲೇ ನಡೆದಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳ ನಾಯಕರು ಒಟ್ಟಾಗಿ ಇಂದು ಮಹತ್ವದ ಸಭೆಯೊಂದನ್ನ ನಡೆಸಿದ್ದು ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಈ ವಿಚಾರವನ್ನು ಚರ್ಚಿಸಲು ಅವಕಾಶ ನೀಡಿಲ್ಲ ಎಂದು ಆರೋಪಿಸಿವೆ.

ಸಭೆಯ ನಂತರ ವಿಪಕ್ಷ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ.. ಪಾರ್ಲಿಮೆಂಟ್​ನಲ್ಲಿ ನಾವು ಗೊಂದಲ ಮೂಡಿಸುತ್ತಿದ್ದೇವೆ ಎಂಬಂತೆ ಬಿಂಬಿಸಲಾಗ್ತಾ ಇದೆ.. ನಾವು ಗೊಂದಲ ಮೂಡಿಸುತ್ತಿಲ್ಲ.. ನಾವು ನಮ್ಮ ಕೆಲಸಗಳನ್ನ ಪೂರ್ಣಗೊಳಿಸುತ್ತಿದ್ದೇವೆ. ಪೆಗಸಸ್ ಆಯುಧವನ್ನ ಭಾರತದ ವಿರುದ್ಧ ಪ್ರಯೋಗಿಸಲಾಗಿದೆ.. ಇದನ್ನ ದೇಶದ್ರೋಹಿಗಳು ಮತ್ತು ಭಯೋತ್ಪಾದಕರ ವಿರುದ್ಧ ಬಳಸಬೇಕಿತ್ತು.

ದೇಶದ ಯುವಕರಿಗೆ ಒಂದು ಮಾತು ಹೇಳುತ್ತೇನೆ.. ನಿಮ್ಮ ಫೋನ್​ಗಳಿಗೆ ನರೇಂದ್ರ ಮೋದಿ ಆಯುಧವೊಂದನ್ನ ಕಳುಹಿಸಿದ್ದಾರೆ. ಈ ಆಯುಧವನ್ನ ನನ್ನ ವಿರುದ್ಧ, ಸುಪ್ರೀಂಕೋರ್ಟ್, ಹಲವು ನಾಯಕರು, ಪತ್ರಕರ್ತರು ಮತ್ತು ಹೋರಾಟಗಾರರ ವಿರುದ್ಧ ಬಳಸಲಾಗಿದೆ. ಹಾಗಾದ್ರೆ ಯಾಕೆ ಈ ವಿಷಯ ಪಾರ್ಲಿಮೆಂಟ್​​ನಲ್ಲಿ ಚರ್ಚೆಯಾಗಬಾರದು..?

ನಾವು ಒಂದು ಪ್ರಶ್ನೆ ಕೇಳಲು ಬಯಸುತ್ತೇವೆ.. ಭಾರತ ಸರ್ಕಾರ ಪೆಗಸಸ್​ನ್ನು ಖರೀದಿಸಿದೆಯೇ..? ಹೌದು ಅಥವಾ ಇಲ್ಲ ಎಂದು ಹೇಳಿ.. ಭಾರತ ಸರ್ಕಾರ ತನ್ನ ಜನರ ವಿರುದ್ಧವೇ ಈ ಆಯುಧವನ್ನು ಪ್ರಯೋಗಿಸಿದೆಯೇ..? ನಮಗೆ ಈಗಾಗಲೇ ಪಾರ್ಲಿಮೆಂಟ್​ನಲ್ಲಿ ಈ ವಿಷಯವನ್ನ ಸರ್ಕಾರ ಚರ್ಚಿಸುವುದಿಲ್ಲ ಎಂದು ಗೊತ್ತಾಗಿದೆ ಎಂದಿದ್ದಾರೆ.

ಈ ವೇಳೆ ವಿಪಕ್ಷಗಳ ನಾಯಕರೂ ಸಹ ಮಾತನಾಡಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲಲಿದ್ದೇವೆ ಎಂದು ಹೇಳಿದ್ದಾರೆ.

The post ಪೆಗಸಸ್ ಗೂಢಚರ್ಯೆ: ಕೇಂದ್ರದ ವಿರುದ್ಧ ಒಂದಾದ ವಿಪಕ್ಷಗಳ ನಾಯಕರು.. ಹೋರಾಟಕ್ಕೆ ತಯಾರಿ appeared first on News First Kannada.

Source: newsfirstlive.com

Source link