ಚಕ್ರವರ್ತಿ ಚಂದ್ರಚೂಡ್‌ ‘ಔಟ್‌’ ಆಗಿದ್ದು ಹೇಗೆ..?

ಚಕ್ರವರ್ತಿ ಚಂದ್ರಚೂಡ್‌ ‘ಔಟ್‌’ ಆಗಿದ್ದು ಹೇಗೆ..?

ಬಿಗ್​ ಬಾಸ್​ ನೀಡುತ್ತಿರುವ ಟ್ವಿಸ್ಟ್​ಗೆ ಬಿಗ್​ ಮನೆಯ ಸದಸ್ಯರು ಸುಸ್ತೋ ಸುಸ್ತು. ಫಿನಾಲೆಗೆ ಕೇವಲ 13 ದಿನಗಳು ಉಳಿದಿದ್ದು, ಮಿಡ್​ ನೈಟ್​ ಎಲಿಮಿನೇಶನ್ ಟೆನ್ಷನ್​ ಬೇರೆ ಮನೆಯವರ ತಲೆಕೆಡಿಸುತ್ತಿದೆ. ಎಲಿಮಿನೇಟ್​ ಆದ್ರೂ ಪರವಾಗಿಲ್ಲ, ಆದ್ರೆ ನೆಮ್ಮದಿಯಾಗಿ ಮನೆಯವರಿಗೆಲ್ಲ ಬೈ ಹೇಳಿ, ಸುದೀಪ್​ ಅವರ ಜೊತೆ ಒಂದಿಷ್ಟು ಮಾತುಕತೆ ಮಾಡಿ ಹೋಗಿದ್ರೆ ಚೆನ್ನಾಗಿರೋದು ಅನ್ನೋದು ಬಿಗ್​ ಮನೆಯವ್ರ ಮನದಾಳ.

blank

ಆದ್ರೇ ಬಿಗ್​ ಬಾಸ್​ನಲ್ಲಿ ಲೆಕ್ಕಾಚಾರಗಳು ಯಾವುದೂ ವರ್ಕ್​ ಆಗಲ್ಲ. ನಾವ್ ಒಂದ್ ಅನ್ಕೊಂಡಿದ್ರೆ ಅಲ್ಲಿ ಆಗೋದೇ ಇನ್ನೊಂದು. ಮಿಡ್​ನೈಟ್​ ಎಲಿಮಿನೇಶನ್ ಆಗಿದ್ದು, ಚಕ್ರವರ್ತಿ ಚಂದ್ರಚೂಡ್​ ಮನೆಯಿಂದ ಹೊರನಡೆದಿದ್ದಾರೆ.

ಹೌದು, ವೈಲ್ಡ್​ ಕಾರ್ಡ್​ ಎಂಟ್ರಿಯಿಂದ ಬಂದಿದ್ದ ಇಬ್ಬರು ಸದಸ್ಯರು ಅಂದ್ರೆ ಪ್ರಿಯಾಂಕಾ ತಿಮ್ಮೇಶ್​, ಚಕ್ರವರ್ತಿ ಚಂದ್ರಚೂಡ್. ಇಬ್ಬರೂ ವಾರದ ಗ್ಯಾಪ್​ನಲ್ಲಿ ಔಟ್​ ಆಗಿದ್ದಾರೆ.

ಚಕ್ರವರ್ತಿ ಅವರು ಹೊರ ಬರಬೇಕು ಅನ್ನೋ ಕೂಗು ಸೋಶಿಯಲ್​ ಮಿಡಿಯಾದಲ್ಲಿ ಜೋರಾಗಿಯೇ ಇತ್ತು. ಅವರಿಗೆ ಮುಳ್ಳಾಗಿದ್ದು ಮಾತುಗಳು ಅನ್ನೋದು ಜನರ ಅಭಿಪ್ರಾಯ. ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲರಿಗೂ ಪಾಠ ಹೇಳ್ತಾ, ಪ್ರತಿಯೊಬ್ಬರಿಗೂ ಸಲಹೆಗಳನ್ನು ನೀಡುತ್ತಿದ್ದ ಚಕ್ರವರ್ತಿ, 43 ದಿನಗಳ ಗ್ಯಾಪ್​ನ ನಂತರ ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ದಿನವೇ ಮಂಜು, ದಿವ್ಯಾ ಸುರೇಶ ಅವರ ಬಗ್ಗೆ ಮಾತಾಡಿ ದೊಡ್ಡ ಕಾಂಟ್ರವರ್ಸಿಯನ್ನ ಮೈಮೇಲೆ ಎಳೆದುಕೊಂಡಿದ್ದರು.

blank

ಮನೆಯಲ್ಲಿ ಯಾವುದೇ ಗಲಾಟೆ ನಡೆದ್ರೂ ಅಲ್ಲಿ ಚಕ್ರವರ್ತಿ ಅವರ ಹೆಸರು ಕೇಳಿ ಬರುತ್ತಿತ್ತು. ಈ ಬಗ್ಗೆ ಪ್ರತಿ ವಾರ ಸುದೀಪ್​ ಪಂಚಾಯ್ತಿ ಮಾಡಿ ಎಲ್ಲವನ್ನು ತಣ್ಣಗಾಗಿಸುತ್ತಿದ್ದರು. ಅವರ 70 ಕ್ಕೂ ಹೆಚ್ಚು ದಿನಗಳ ಜರ್ನಿಗೆ ಪೆಟ್ಟು ಬಿದ್ದಿದ್ದೇ ಆ ಒಂದು ಸಿಂಬಲ್​ ಅನಿಸುತ್ತದೆ.
ಪ್ರಿಯಾಂಕಾ ಅವರು ಔಟ್​ ಆದಾಗ ಚಕ್ರವರ್ತಿ ಅವರನ್ನ ನಾಮಿನೇಟ್​ ಮಾಡಿದ್ರು, ಆಗ ಚಕ್ರವರ್ತಿ ಕ್ಯಾಮರಾಗೆ ಅಶ್ಲೀಲ ಸಿಂಬಲ್​ ತೋರಿಸಿದ್ರು. ಇದಕ್ಕೆ ಕಿಚ್ಚಾ ಸರಿಯಾಗಿಯೇ ಕ್ಲಾಸ್​ ತೆಗೆದುಕೊಂಡು ಚಕ್ರವರ್ತಿ ಅವರ ವರ್ತನೆ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದರು. ಇದ್ರ ಬಗ್ಗೆ ಕಳೆದ ಸಂಚಿಕೆಯಲ್ಲಿ ಚಕ್ರವರ್ತಿ ಜನತೆಯ ಕ್ಷಮೆ ಕೇಳಿದ್ರು. ಆದ್ರೆ ಅದಾಗಲೇ ತುಂಬಾ ದೊಡ್ಡ ಇಂಪಾಕ್ಟ್​ ಆಗಿತ್ತು.

blank

ಇನ್ನೂ ಚಕ್ರವರ್ತಿ ಅವರ ಇನ್ನೊಂದು ಸೈಡ್​ನಲ್ಲಿ ನೋಡೋದಾದ್ರೆ. ಅವರ ಬರವಣಿಗೆ ಬಗ್ಗೆ ಎಲ್ಲರೂ ಮೆಚ್ಚಿಕೊಂಡಿದ್ದು ಸುಳ್ಳಲ್ಲ. ಸ್ವತಃ ಸುದೀಪ್​ ಅವರೇ ಅವರ ಮಾತಿನ ಚಾಕಚಕ್ಯತೆ, ಭಾಷೆ, ಬರವಣಿಗೆಗೆ ಫ್ಯಾನ್​ ಅಂತಾ ಹೇಳಿ ಶಬಾಷ್​ಗಿರಿ ನೀಡಿದ್ದರು.

ಒಟ್ಟಿನಲ್ಲಿ ಎಲ್ಲರೂ ಉಹಿಸಿದಂತೆ ಚಕ್ರವರ್ತಿ ಆಚೆ ಬಂದಿದ್ದು, ಅವರ ಸದ್ದು ಗದ್ದಲವನ್ನು ಮನೆಯವರು ಮಿಸ್​ ಮಾಡ್ಕೊಳ್ಳದೇ ಇರೋಕೆ ಸಾಧ್ಯಾನೇ ಇಲ್ಲ. ಕೇವಲ 13 ದಿನಗಳ ಪ್ರಯಾಣ ಉಳಿದಿದ್ದು, ಈ ವಾರ ದಿವ್ಯಾ ಉರುಡುಗ ಅವರನ್ನ ಬಿಟ್ಟು ಮನೆಯ ಎಲ್ಲ ಸದಸ್ಯರು ನಾಮಿನೇಟ್​ ಆಗಿದ್ದಾರೆ. ಆಟ ಬಿಗಿಯಾಗಿದ್ದು, ಗೆಲುವಿನ ಗರಿ ಯಾರ ಮುಡಿಗೇರಲಿದೆ ಅನ್ನೋದನ್ನ ಕಾದು ನೋಡಬೇಕು.

The post ಚಕ್ರವರ್ತಿ ಚಂದ್ರಚೂಡ್‌ ‘ಔಟ್‌’ ಆಗಿದ್ದು ಹೇಗೆ..? appeared first on News First Kannada.

Source: newsfirstlive.com

Source link