ಮೆಗಾಸ್ಟಾರ್ ‘ಆಚಾರ್ಯ’ ಸಿನಿಮಾಗಾಗಿ ಕೋಟಿ ಕೋಟಿ ವೆಚ್ಚದ ಅದ್ಧೂರಿ ಸೆಟ್​!

ಮೆಗಾಸ್ಟಾರ್ ‘ಆಚಾರ್ಯ’ ಸಿನಿಮಾಗಾಗಿ ಕೋಟಿ ಕೋಟಿ ವೆಚ್ಚದ ಅದ್ಧೂರಿ ಸೆಟ್​!

ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ ‘ಖೈದಿ 150’ ಸಿನಿಮಾದ ಮೂಲಕ ಮತ್ತೆ ಸಿನಿ ರಂಗಕ್ಕೆ ಗ್ರ್ಯಾಂಡ್​ ರೀ ಎಂಟ್ರಿ ಕೊಟ್ಟಾಯ್ತು. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿರುವ ಚಿರಂಜೀವಿ, ಅವರ ಮುಂದಿನ ಸಿನಿಮಾಗಾಗಿ ಒಂದು ಅದ್ದೂರಿ ಸೆಟ್​ ಹಾಕಿದ್ದಾರಂತೆ. ಚಿರಂಜೀವಿ ಅವರ ಮುಂದಿನ ಸಿನಿಮಾ ಯಾವುದು? ಯಾವ ಚಿತ್ರಕ್ಕಾಗಿ ಅದ್ದೂರಿ ಸೆಟ್​ ಹಾಕಿದ್ದಾರೆ? ಆ ಸೆಟ್​ನ ವಿಶೇಷತೆ ಏನು ಅನ್ನೋದನ್ನ ತಿಳಿಸ್ತಿವಿ ಈ ಸ್ಟೋರಿಯಲ್ಲಿ.

blank

ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ‘ಖೈದಿ 150’ ಸಿನಿಮಾದ ಮೂಲಕ ಮತ್ತೆ ಸಿನಿ ಜೀವನಕ್ಕೆ ಗ್ರ್ಯಾಂಡ್​ ರೀ ಎಂಟ್ರಿ ಕೊಟ್ಟು, ನಂತರ ‘ಸೈರಾ ನರಸಿಂಹಾ ರೆಡ್ಡಿ’ ಸಿನಿಮಾದಂತಹ ಐತಿಹಾಸಿಕ ಸಿನಿಮಾದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದರು.. ಸದ್ಯ ಚಿರಂಜೀವಿ ಅವರ ಬಹು ನಿರೀಕ್ಷಿತ ‘ಆಚಾರ್ಯ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

ಸದ್ಯ ‘ಆಚಾರ್ಯ’ ಸಿನಿಮಾ ತಂಡದಿಂದ ಹೊರ ಬಿದ್ದಿರೋ ಕುತೂಹಲಕಾರಿ ವಿಷಯ ಏನಂದ್ರೆ ‘ಆಚಾರ್ಯ’ ಸಿನಿಮಾದ ಚಿತ್ರತಂಡ ಒಂದು ಸೆಟ್​ ನಿರ್ಮಾಣ ಮಾಡಿದೆ. ಆ ಸೆಟ್​ಗಾಗಿ ಬರೋಬ್ಬರಿ 23 ಕೋಟಿ ಹಣವನ್ನು ಖರ್ಚು ಮಾಡಿದೆಯಂತೆ….

blank

ಹೇಳಿ ಕೇಳಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಕೊರಾಟಲ ಶಿವ. ಕೊರಟಾಲ ಶಿವಾ ಸಿನಿಮಾಗಳಲ್ಲಿ ಅದ್ದೂರಿಗೆ, ಆಡಂಭರಕ್ಕೆ ಕೊರತೆಗಳಿರೋದಿಲ್ಲ. ಅದರಲ್ಲೂ ಇದು ಮೆಗಾಸ್ಟಾರ್​ ಚಿರಂಜೀವಿ ಸಿನಿಮಾ ಆಗಿರೋದ್ರಿಂದ ಕೊರಟಾಲ ಶಿವ ಕೂಡ ಹೆಚ್ಚೇ ತಲೆ ಕೊಡವಿಕೊಂಡಿದ್ದಾರೆ.

blank

ಈ ಕಾರಣಕ್ಕಾಗಿಯೇ ಆ ಒಂದು ಸೆಟ್​ಗಾಗಿ 23 ಕೋಟಿ ಹಣ ಖರ್ಚು ಮಾಡಿ ಅದ್ದೂರಿ ಸೆಟ್​ ನಿರ್ಮಾಣ ಮಾಡಿದ್ದಾರೆ ಕೊರಟಾಲ ಶಿವ.
ಈ ಸಿನಿಮಾದಲ್ಲಿ 23 ಕೋಟಿ ಹಣವನ್ನು ಖರ್ಚು ಮಾಡಿ ಈ ಅದ್ದೂರಿ ಸೆಟ್​ ​ ಹಾಕಲು ಮತ್ತೊಂದು ಕಾರಣ ಎಂದರೆ, ‘ಆಚಾರ್ಯ’ ಸಿನಿಮಾದ ಬಹುತೇಕ ಶೂಟಿಂಗ್​ ಈ ಸೆಟ್​ನಲ್ಲೇ ನಡೆಯಲಿದೆಯಂತೆ.

blank

ಹಾಗಾಗಿ ನಿರ್ದೇಶಕ ಕೊರಟಾಲ ಶಿವ ಈ ಸೆಟ್​ಗಾಗಿ ಸಖತ್ ತಲೆ ಕೆಡಿಸಿಕೊಂಡಿದ್ದಾರೆ…ಇನ್ನು ಈ ಅದ್ದೂರಿ ಸೆಟ್​ನ್ನ ನಿರ್ಮಾಣ ಮಾಡಿದ ಆರ್ಟ್​ ಡೈರೆಕ್ಟರ್​ ಕೆಲಸಕ್ಕೆ ಮನಸೋತ ಚಿರಂಜೀವಿ ತಮ್ಮ ಮುಂದಿನ ಸಿನಿಮಾಗೂ ಅವಕಾಶವನ್ನು ನೀಡಿದ್ದಾರೆ…

ಆಚಾರ್ಯ ಸಿನಿಮಾದ ನಂತರ ಮಲಯಾಳಂನ ಮೋಹನ್​ ಲಾಲ್ ನಟನೆಯ ‘ಲೂಸಿಫರ್’​ ಚಿತ್ರದ ರಿಮೇಕ್​ನಲ್ಲಿ ಬ್ಯುಸಿಯಾಗಲಿರೋ ಚಿರಂಜೀವಿ, ‘ಆಚಾರ್ಯ’ ಸಿನಿಮಾದ ಸೆಟ್​ ಹಾಕಿದ್ದ ಆರ್ಟ್​ ಡೈರೆಕ್ಟರ್​ಗೆ ತಾವೆ ಖುದ್ದಾಗಿ ಈ ಚಿತ್ರದಲ್ಲಿ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದ್ದಾರಂತೆ.

blank

‘ಅಚಾರ್ಯ’ ಸಿನಿಮಾದಲ್ಲಿ ಚಿರಂಜೀವಿ ಜೊತೆ, ರಾಮ್​ ಚರಣ್​, ಪೂಜಾ ಹೆಗ್ಡೆ, ಕಾಜಲ್​ ಅಗರ್​ವಾಲ್​, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರ ಯವಾಗ ಬಿಡುಗಡೆ ಆಗುತ್ತದೆ ಎಂದು ಮೆಗಸ್ಟಾರ್​ ಹಾಗೂ, ಮೆಗಾ ಪವರ್ ಸ್ಟಾರ್​ ಅಭಿಮಾನಿಗಳು, ಈ ಅದ್ದೂರಿ ಸೆಟ್​ ವಿಚಾರ ಕೇಳಿ ಸಿನಿಮಾ ನೋಡಲು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ.

blank

The post ಮೆಗಾಸ್ಟಾರ್ ‘ಆಚಾರ್ಯ’ ಸಿನಿಮಾಗಾಗಿ ಕೋಟಿ ಕೋಟಿ ವೆಚ್ಚದ ಅದ್ಧೂರಿ ಸೆಟ್​! appeared first on News First Kannada.

Source: newsfirstlive.com

Source link