2ನೇ T20 ಪಂದ್ಯದಿಂದ ಧವನ್ ಔಟ್..? ಭುವನೇಶ್ವರ್​ ಕುಮಾರ್​ಗೆ ನಾಯಕ ಪಟ್ಟ..?

2ನೇ T20 ಪಂದ್ಯದಿಂದ ಧವನ್ ಔಟ್..? ಭುವನೇಶ್ವರ್​ ಕುಮಾರ್​ಗೆ ನಾಯಕ ಪಟ್ಟ..?

ಇಂದು ಸಂಜೆ ನಡೆಯಲಿರುವ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ, ಟೀಮ್​ ಇಂಡಿಯಾ ಪ್ಲೇಯಿಂಗ್​ -XIನಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಭಾರತದ ಆಲ್​ರೌಂಡರ್​ ಕೃನಾಲ್​ ಪಾಂಡ್ಯಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ನಿನ್ನೆ ನಡೆಯಬೇಕಿದ್ದ ಪಂದ್ಯವನ್ನ ಇಂದಿಗೆ ಮುಂದೂಡಲಾಗಿತ್ತು. ಕೃನಾಲ್ ಜೊತೆಗೆ 8 ಸದಸ್ಯರನ್ನ ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದ ಬಿಸಿಸಿಐ, ಆಟಗಾರರನ್ನ ಪ್ರತ್ಯೇಕವಾಸದಲ್ಲಿರಿಸಲಾಗಿದೆ ಎಂದು ತಿಳಿಸಿತ್ತು.

ಇದೀಗ ನಾಯಕ ಶಿಖರ್​ ಧವನ್​ ಕೂಡ ಐಸೋಲೇಷನ್​ಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಧವನ್​ ಜೊತೆಗೆ ಹಾರ್ದಿಕ್​ ಪಾಂಡ್ಯ, ಇಶಾನ್​ ಕಿಶನ್​, ಕೆ.ಗೌತಮ್​, ಪೃಥ್ವಿ ಶಾ, ಸೂರ್ಯ ಕುಮಾರ್ ಯಾದವ್​, ಮನೀಶ್​ ಪಾಂಡೆ, ಯುಜುವೇಂದ್ರ ಚಹಲ್​ ಕೂಡ ಐಸೋಲೆಶನ್​ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಅನುಭವಿ ಆಟಗಾರ ಭುವನೇಶ್ವರ್​ ಕುಮಾರ್,​ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

The post 2ನೇ T20 ಪಂದ್ಯದಿಂದ ಧವನ್ ಔಟ್..? ಭುವನೇಶ್ವರ್​ ಕುಮಾರ್​ಗೆ ನಾಯಕ ಪಟ್ಟ..? appeared first on News First Kannada.

Source: newsfirstlive.com

Source link