ಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ : ಧೃವನಾರಾಯಣ್ ವ್ಯಂಗ್ಯ

ಮೈಸೂರು: ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ್ ಹರಿಹಾಯ್ದಿದ್ದಾರೆ.

ವಿಧಾನಸಭೆ ಚುನಾವಣೆ ಮುಗಿದು ಮೂರು ವರ್ಷವಾಯಿತು. ಲೋಕಸಭೆ ಚುನಾವಣೆ ಮುಗಿದು ಎರಡು ವರ್ಷಗಳಾಯಿತು. ಅಂದಿನಿಂದಲೂ ಸಂಸದ ಶ್ರೀನಿವಾಸ್ ಪ್ರಸಾದ್ ಒಂದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಡಿದ್ದೇ ಹಾಡೋ ಕಿಸುಬಾಯಿ ದಾಸಯ್ಯ ಎಂಬಂತೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದರು.

ಸಿದ್ದರಾಮಯ್ಯನವರನ್ನು ಸೋಲಿಸಿದ್ದೇ ಅವರ ಸಾಧನೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ಸೋತಿರುವುದು ಜೆಡಿಎಸ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧ ಅಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗೆ ಠೇವಣಿ ಕೂಡಾ ಸಿಕ್ಕಿಲ್ಲ. ಪ್ರಸಾದ್ ಸುಮ್ಮನೆ ಕುಳಿತು ಮಾತನಾಡುವುದಲ್ಲ. ಸಂಸದರಾಗಿ ಎರಡು ವರ್ಷಗಳ ಇವರ ಸಾಧನೆ ಏನು ಎಂಬುದನ್ನು ಮೊದಲು ತಿಳಿಸಬೇಕು ಎಂದು ಆಗ್ರಹಿಸಿದರು.

The post ಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ : ಧೃವನಾರಾಯಣ್ ವ್ಯಂಗ್ಯ appeared first on Public TV.

Source: publictv.in

Source link