ನೂತನ ಸಿಎಂಗೆ ಸಂಪುಟ ರಚನೆ ಸವಾಲು; ಶೀಘ್ರವೇ ದೆಹಲಿಗೆ ತೆರಳಲಿದ್ದಾರಂತೆ ಬೊಮ್ಮಾಯಿ

ನೂತನ ಸಿಎಂಗೆ ಸಂಪುಟ ರಚನೆ ಸವಾಲು; ಶೀಘ್ರವೇ ದೆಹಲಿಗೆ ತೆರಳಲಿದ್ದಾರಂತೆ ಬೊಮ್ಮಾಯಿ

ಬೆಂಗಳೂರು: ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋತ್ ಪ್ರಮಾಣವಚನ ಭೋದಿಸಿದ್ದಾರೆ.

ಪ್ರಮಾಣ ವಚನದ ನಂತರ ಸಚಿವ ಸಂಪುಟ ರಚನೆಯತ್ತ ಗಮನ ಹರಿಸಿದ ನೂತನ ಸಿಎಂ ಸಂಪುಟ ರಚನೆಯ ಅನುಮತಿ ಕೇಳಲು ದೆಹಲಿಗೆ ತೆರಳಲಿದ್ದಾರೆ.

ಇನ್ನು ಹೈಕಮಾಂಡ್​ ನಾಯಕರನ್ನು ಭೇಟಿಯಾಗಲು ಸಮಯಾವಕಾಶ ಕೋರಿದ ನೂತನ ಸಿಎಂ.. ಶೀಘ್ರವೇ ದೆಹಲಿಗೆ ತೆರಳಲಿದ್ದೇನೆ..  ಪ್ರಧಾನಿ ಮೋದಿಯವರ ಸಮಯ ಕೇಳಿದ್ದೇನೆ.. ಅವರು ಸಮಯ ನೀಡಿದರೆ ದೆಹಲಿಗೆ ತೆರಳಲಿದ್ದೇನೆ ಎಂದಿದ್ದಾರೆ. ಈ ಹಿನ್ನೆಲೆ ಸಚಿವ ಸಂಪುಟಕ್ಕೆ ಯಾರು ಇನ್, ಯಾರು ಔಟ್​ ಎಂಬ ಲೆಕ್ಕಾಚಾರಗಳು ಜೋರಾಗುತ್ತಿವೆ.

The post ನೂತನ ಸಿಎಂಗೆ ಸಂಪುಟ ರಚನೆ ಸವಾಲು; ಶೀಘ್ರವೇ ದೆಹಲಿಗೆ ತೆರಳಲಿದ್ದಾರಂತೆ ಬೊಮ್ಮಾಯಿ appeared first on News First Kannada.

Source: newsfirstlive.com

Source link