ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ, ಈಗ ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ: ಬಸನಗೌಡ ಪಾಟೀಲ್​ ಯತ್ನಾಳ್

ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ, ಈಗ ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ: ಬಸನಗೌಡ ಪಾಟೀಲ್​ ಯತ್ನಾಳ್

ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ್​ ಬೊಮ್ಮಾಯಿಯವರಿಗೆ ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್ ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಗಡ್ಡ ತೆಗೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು ಗಡ್ಡ ಬಿಟ್ಟಾಗ ಶಿವಾಜಿಯಾಗಿದ್ದೆ, ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ ಎಂದಿದ್ದಾರೆ. ನೂತನ ಸಿಎಂ, ಬಿಎಸ್​ವೈ ಅವರ ನೆರಳಾಗಿ ಕೆಲಸ ಮಾಡ್ತಾರಾ ಎಂಬ ಪ್ರಶ್ನೆಗೆ, ಬಸವರಾಜ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿ ಅವರು ಬಿಎಸ್​ವೈ ಅವರ ನೆರಳಾಗಿ ಕೆಲಸ ಮಾಡಲ್ಲ, ಬಿಜೆಪಿ ಶಾಸಕರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.

ನನ್ನ ಪ್ರಾಮಾಣಿಕತೆ, ಸಾಮರ್ಥ್ಯ, ಸಂಘಟನೆ ನೋಡಿ ಅಟಲ್​ ಬಿಹಾರಿ ವಾಜಿಪೇಯಿ ಅವರು ನನಗೆ ಕೇಂದ್ರದಲ್ಲಿ ಸ್ಥಾನ ನೀಡಿದ್ದರು. ಹೈಕಮಾಂಡ್​ ಆದೇಶ ಮಾಡಿದರೆ ನಾನು ಕೂಡ ಸಚಿವನಾಗುತ್ತೇನೆ, ಹೈಕಮಾಂಡ್​ನ ಆದೇಶಗಳಿಗೆ ಬದ್ಧನಾಗಿರ್ತೇನೆ ಎಂದಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದಲ್ಲಿ ಮೊದಲ ಹಂತದ ಬದಲಾವಣೆ ಪ್ರಾರಂಭವಾಗಿದೆ. ನಾನು ಯಾವುದೇ ಹುದ್ದೆಗಳಿಗೆ ಲಾಬಿ ಮಾಡುವವನಲ್ಲ, ಮಂತ್ರಿಗಿರಿಗಾಗಿ ಯಾರ ಮನೆ ಬಾಗಿಲಿಗೂ ಹೋಗುವವನಲ್ಲ ಎಂದಿದ್ದಾರೆ

The post ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ, ಈಗ ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ: ಬಸನಗೌಡ ಪಾಟೀಲ್​ ಯತ್ನಾಳ್ appeared first on News First Kannada.

Source: newsfirstlive.com

Source link