‘ದ್ವಿತ್ವ’ ಸಿನಿಮಾದಲ್ಲಿ ಮತ್ತೊಮ್ಮೆ ಮೋಡಿ ಮಾಡುತ್ತಾ ‘ಪವರ್’ ಜೋಡಿ?

‘ದ್ವಿತ್ವ’ ಸಿನಿಮಾದಲ್ಲಿ ಮತ್ತೊಮ್ಮೆ ಮೋಡಿ ಮಾಡುತ್ತಾ ‘ಪವರ್’ ಜೋಡಿ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್​. ಈ ಇಬ್ಬರು ‘ದ್ವಿತ್ವ’ ಅನ್ನೋ ಸಿನಿಮಾ ಮಾಡಲು ಹೊರಟಿರೋದು ನಿಮಗೆಲ್ಲ ಗೊತ್ತೇ ಇದೆ. ಆದ್ರೆ ಈ ಸಿನಿಮಾದ ಹೀರೋಯಿನ್ ಯಾರಾಗ್ತಾರೆ ಅನ್ನೋದು ಗೊತ್ತಾಗದ ವಿಷಯವಾಗಿತ್ತು. ಆದ್ರೆ ಈಗ ಇಡೀ ಸೌಥ್ ಸಿನಿ ದುನಿಯಾದಲ್ಲಿ ಅಪ್ಪು ಜೊತೆ ಆ ನಯನ ಮನೋಹರಿ ದ್ವಿತ್ವದಲ್ಲಿ ನಟಿಸುತ್ತಾರೆ ಅನ್ನೋ ಚಿಟ್ಟೆ ಸಿಕ್ಕಾಪಟ್ಟೆ ಹಾರಾಡ್ತಿದೆ.

ಹೊಂಬಾಳೆ ಫಿಲಂಸ್ ಜೊತೆ ನಾಲ್ಕನೇ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಂತಿದ್ದಾರೆ. ಈ ಬಾರಿ ಪವರ್​​​ಗೆ ಪವನ್ ಸಾರಥಿಯಾಗಿದ್ದಾರೆ. ಸಿನಿಮಾ ಮಾಡ್ತಾರೆ, ಆ ಸಿನಿಮಾದ ಹೆಸರು ‘ದ್ವಿತ್ವ’ ಅಂತೆಲ್ಲ ಸದ್ದು ಗದ್ದಲವಾದ್ಮೇಲೆ ಈಗ ಹೀರೋಯಿನ್ ಯಾರು ಅನ್ನೋ ಛಾಯ್​​​​​ ಪೇ ಚರ್ಚೆ ಶುರುವಾಗಿದೆ.

blank

ಲೂಸಿಯ ಪವನ್ ಕುಮಾರ್ ಅವರ ಸಿನಿಮಾದ ಹೀರೋಯಿನ್ ಹೈಲೈಟ್ ಆಗೇ ಆಗ್ತಾರೆ. ಗ್ಲಾಮರ್ ಗ್ರಾಮರ್ ಅಂತ ಲೆಕ್ಕ ಹಾಕದೆ ಒಳ್ಳೆ ಫರ್ಫಾರ್ಮರ್ ಪಾರಿವಾಳವನ್ನೇ ತನ್ನ ಸಿನಿಮಾದಲ್ಲಿ ನಿಲ್ಲಿಸಿ ಗೆಲ್ತಾರೆ. ಹಾಗಾದ್ರೆ ಪುನೀತ್-ಪವನ್ ಕಾಂಬಿನೇಷನ್​​ ಸಿನಿಮಾದ ನಟಿಮಣಿ ಯಾರು ಅನ್ನೋದಕ್ಕೆ ಈಗ ಸಿಕ್ತಿರೋ ಸಖತ್​​ ಸಮಾಚಾರ್​ ತ್ರಿಶಾ ಕೃಷ್ಣನ್.

ತ್ರಿಶಾ ಕೃಷ್ಣನ್.. ಈ ಕೆಲ ಹೀರೋಯಿನ್​ಗಳಿಗೆ ವಯಸ್ಸು ಬರ್ತಾ ಬರ್ತಾ ಕಡಿಮೆ ಆಗುತ್ತೆ ಅಂತಾರಲ್ಲ ಆ ಕ್ಯಾಟಗರಿ ಕ್ಯೂಟ್ ಹೀರೋಯಿನ್ ತ್ರಿಶಾ. ಮೂವತ್ತೆಂಟು ಆಗಿದ್ದರೂ ಹದಿನೆಂಟೋ ಹತ್ತೊಂಭತ್ತೋ ಅನ್ನೊಂಗೆ ಕಂಗೊಳಿಸುತ್ತಾರೆ ತ್ರಿಶಾ. ಈ ಮೊದಲು ಪವರ್ ಸ್ಟಾರ್ ಅಪ್ಪು ಜೊತೆಗೆ ಪವರ್ ಸಿನಿಮಾದಲ್ಲಿ ಮಿನುಗಿದ್ದರು ಮಾಜಿ ಮಿಸ್ ಚೆನ್ನೈ.

ತ್ರಿಶಾ ಕೃಷ್ಣನ್ ಜೊತೆ ದ್ವಿತ್ವ ಫಿಲ್ಮ್ ಟೀಮ್ ಕಥೆ ಹೇಳಿ ಅಪ್ರೌಚ್ ಮಾಡಿದೆ ಇನೇನು ತ್ರಿಶಾ ಕಡೆಯಿಂದ ಗ್ರೀನ್ ಸಿಗ್ನಲ್ ಬರೋದೊಂದು ಬಾಕಿ ಎನ್ನುತ್ತಿದೆ ಸುದ್ದಿ ಮೂಲ. ಆಗಸ್ಟ್ ಮಧ್ಯಭಾಗದಿಂದ ದ್ವಿತ್ವ ಸಿನಿಮಾದ ಶೂಟಿಂಗ್ ಶುರುವಾಗೋ ಸಾಧ್ಯತೆ ಇದ್ದು ಅಷ್ಟರಲ್ಲಿ ಹೀರೋಯಿನ್ ಯಾರು ಅನ್ನೋದು ಕನ್ಫರ್ಮ್ ಆಗಲಿದೆ.

The post ‘ದ್ವಿತ್ವ’ ಸಿನಿಮಾದಲ್ಲಿ ಮತ್ತೊಮ್ಮೆ ಮೋಡಿ ಮಾಡುತ್ತಾ ‘ಪವರ್’ ಜೋಡಿ? appeared first on News First Kannada.

Source: newsfirstlive.com

Source link