1,561.31 ಎಕರೆ ಆಸ್ತಿ ರಾಜ ವಂಶಸ್ಥರಿಗೇ ಸೇರಬೇಕು.. ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

1,561.31 ಎಕರೆ ಆಸ್ತಿ ರಾಜ ವಂಶಸ್ಥರಿಗೇ ಸೇರಬೇಕು.. ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ & ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ಹಿನ್ನಡೆಯಾಗಿದೆ.

1561.31 ಎಕರೆ ಆಸ್ತಿ ರಾಜ ವಂಶಸ್ಥರಿಗೆ ಸೇರಬೇಕು ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪನ್ನ ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ.
ಮೈಸೂರು ಜಿಲ್ಲೆಯಲ್ಲಿರುವ ಚಾಮುಂಡಿ ಬೆಟ್ಟದ ತಪ್ಪಲು ಕುರಬಾರಹಳ್ಳಿ, ಆಲನಹಳ್ಳಿ ಹಾಗೂ ಚೌಡಿಹಳ್ಳಿ 1561.31 ಎಕರೆ ಆಸ್ತಿಯ ಬಗ್ಗೆ 3 ಸರ್ವೇ ನಂಬರ್‌ಗಳಿಗೆ ಸೇರಿದ ಭೂಮಿ ಖಾಸಗಿ ಆಸ್ತಿ ಎಂದು ಹೈಕೋರ್ಟ್ ಹೇಳಿತ್ತು. ಕಳೆದ ವರ್ಷ ಹೈಕೋರ್ಟ್‌ ವಿಭಾಗೀಯ ಪೀಠ ತೀರ್ಪು ನೀಡಿತ್ತು. ಆದರೆ ಈ ಆದೇಶವನ್ನ ರಾಜ್ಯ ಸರ್ಕಾರ ಪಾಲಿಸಲಿಲ್ಲ ಎನ್ನಲಾಗಿತ್ತು.

blank

ಇದನ್ನೂ ಓದಿ: ನಾವು ಯಾರಿಗೂ ತೊಂದರೆ ಕೊಡಲ್ಲ.. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ- ಪ್ರಮೋದಾ ದೇವಿ

ಈ ಬಗ್ಗೆ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿತ್ತು.. ಮಹಾರಾಜರ ಖಾಸಗಿ ಆಸ್ತಿ ಎನ್ನಲಾಗಿದ್ದ ಭೂಮಿಯನ್ನು ಸರ್ಕಾರಿ ಆಸ್ತಿ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು. ಆ ಡಿಸಿ ಆದೇಶವನ್ನು ರದ್ದು ಮಾಡಿ ರಾಜರ ಆಸ್ತಿ ಎಂದು ಹೈಕೋರ್ಟ್‌ ಹೇಳಿತ್ತು.
ಇನ್ನು ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು, ಮೈಸೂರು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸರ್ಕಾರ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ಹಿಂದಿನ ರಾಜಕಾರಣಿಯ ದ್ವೇಷಕ್ಕೆ ಅರಮನೆ ಆಸ್ತಿ ಗುರಿಯಾಯಿತು- ಪ್ರಮೋದಾದೇವಿ ಒಡೆಯರ್

ಆ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಇರುವ ಪ್ರದೇಶ (ಖರಾಬು ಜಮೀನು) ಎಂಬುದು ಬ್ರಿಟಿಷ್‌ ಸರ್ಕಾರದ ಘೋಷಣೆಯಾಗಿದೆ.. ಅದಕ್ಕೆ ವಿರುದ್ಧವಾಗಿ ಹೈಕೋರ್ಟ್‌ ತೀರ್ಪು ಎಂದು ಸರ್ಕಾರ ಸುಪ್ರೀಂ ಕೋರ್ಟ್​​ಗೆ ಹೇಳಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶ ಎತ್ತಿಹಿಡಿದಿದೆ. ಈಗಾಗಲೇ ಖಾಸಗಿ ಆಸ್ತಿಯನ್ನು ಜನ ಖರೀದಿಸಿದ್ದು ದಶಕಗಳಾಗಿದೆ. ಈಗ ಸರ್ಕಾರ ಎಚ್ಚೆತ್ತುಕೊಂಡರೆ ಏನೂ ಮಾಡಲಾಗದು. 1950ರ ಬಳಿಕ ಜಮೀನನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡಿತ್ತು ಎಂದಾದರೆ ಆ ಭೂಮಿ ಮಹಾರಾಜರಿಗೆ ಸೇರಿದ್ದೆಂದೇ ಅರ್ಥ.. ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಅರ್ಜಿ ವಜಾ ಮಾಡಿದೆ. ನ್ಯಾ.ಯು ಯು ಲಲಿತ್‌ ಮತ್ತು ಅಜಯ್‌ ರಾಸ್ತೋಗಿ ಅವರಿದ್ದ ಪೀಠ ಆದೇಶ ಹೊರಡಿಸಿದೆ.

The post 1,561.31 ಎಕರೆ ಆಸ್ತಿ ರಾಜ ವಂಶಸ್ಥರಿಗೇ ಸೇರಬೇಕು.. ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ appeared first on News First Kannada.

Source: newsfirstlive.com

Source link