ಆರ್ಚರಿ- ಪ್ರೀ ಕ್ವಾರ್ಟರ್​ ಫೈನಲ್ಸ್​ ಪ್ರವೇಶಿಸಿದ ದೀಪಿಕಾ ಕುಮಾರಿ

ಆರ್ಚರಿ- ಪ್ರೀ ಕ್ವಾರ್ಟರ್​ ಫೈನಲ್ಸ್​ ಪ್ರವೇಶಿಸಿದ ದೀಪಿಕಾ ಕುಮಾರಿ

ಟೋಕಿಯೋ ಒಲಿಂಪಿಕ್​​ ಆರ್ಚರಿ ಪುರುಷರ ವಿಭಾಗದಲ್ಲಿ ಸತತ ಸೋಲುಗಳ ನಡುವೆಯೂ, ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ದೀಪಿಕಾ ಕುಮಾರಿ ಪದಕದ ಭರವಸೆ ಮೂಡಿಸಿದ್ದಾರೆ. ಆರ್ಚರಿ ಮಹಿಳಾ ಸಿಂಗಲ್ಸ್​ ವಿಭಾಗದ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ, ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆದ ಎಲಿಮಿನೇಷನ್​​ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಗೆಲುವು ಸಾಧಿಸಿದ್ದು, ಭೂತಾನ್​ನ ಕರ್ಮಾ ಅವರ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಟದ ಪ್ರಾರಂಭದಿಂದಲೇ ಅದ್ಭುತ ಪ್ರದರ್ಶನ ತೋರಿದ ದೀಪಿಕಾ, 6-0 ನೇರ ಸೆಟ್​​ಗಳಿಂದ ಎದುರಾಳಿಯನ್ನ ಮಣಿಸಿದ್ದಾರೆ.

ಇನ್ನು ಮಹಿಳಾ ವಿಭಾಗದಲ್ಲಿ ದೀಪಿಕಾ ಆಶಾಭಾವನೆ ಮೂಡಿಸಿದ್ರೆ, ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಪ್ರವೀಣ್​ ಜಾಧವ್​​ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ. ಅಂತಿಮ-16ರ ಸುತ್ತಿನ ಸ್ಪರ್ಧೆಯಲ್ಲಿ ಅಮೆರಿಕದ ಬ್ರಾಡಿ ಎಲ್ಲಿಸನ್​​​ಗೆ, ಪ್ರವೀಣ್ ಜಾಧವ್ ಶರಣಾಗಿದ್ದಾರೆ. ಹಾಗೆಯೇ ಮತ್ತೋರ್ವ ಆರ್ಚರಿ ಪಟು ತರುಣ್​​ ದೀಪ್​​​​ ರಾಯ್ 16ರ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ.

The post ಆರ್ಚರಿ- ಪ್ರೀ ಕ್ವಾರ್ಟರ್​ ಫೈನಲ್ಸ್​ ಪ್ರವೇಶಿಸಿದ ದೀಪಿಕಾ ಕುಮಾರಿ appeared first on News First Kannada.

Source: newsfirstlive.com

Source link