ಕಾಶ್ಮೀರದ ಶಾಲೆಗೆ ಅಕ್ಷಯ್ ಕುಮಾರ್ ₹1 ಕೋಟಿ ದಾನ; ಇಂದು ಅಡಿಗಲ್ಲು ಸಮಾರಂಭದಲ್ಲಿ ಭಾಗಿ

ಕಾಶ್ಮೀರದ ಶಾಲೆಗೆ ಅಕ್ಷಯ್ ಕುಮಾರ್ ₹1 ಕೋಟಿ ದಾನ; ಇಂದು ಅಡಿಗಲ್ಲು ಸಮಾರಂಭದಲ್ಲಿ ಭಾಗಿ

ಬಾಲಿವುಡ್ ಸ್ಟಾರ್​ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ತುಲೈಲ್ ಗ್ರಾಮದಲ್ಲಿರುವ ಸ್ಕೂಲ್ ಒಂದರ ಜೀರ್ಣೋದ್ದಾರಕ್ಕೆ ಅಂತಾ ಒಂದು ಕೋಟಿ ಹಣವನ್ನ ಕಾಣಿಕೆಯಾಗಿ ನೀಡಿದ್ದರು. ಜೂನ್ 17 ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅಕ್ಷಯ್ ಕುಮಾರ್​, ಬಿಎಸ್​ಎಫ್ ಯೋಧರ ಜೊತೆ ಕೆಲವು ಸಮಯ ಕಳೆದು, ಗಡಿಭಾಗದಲ್ಲಿ ಶಿಥಿಲಾವಸ್ಥೆಗೆ ಜಾರಿದ್ದ 53 ವರ್ಷಗಳ ಶಾಲೆಯ ಅಭಿವೃದ್ಧಿಗೆ ಅಂತಾ ಅಕ್ಷಯ್ ಕುಮಾರ್, ಒಂದು ಕೋಟಿಯನ್ನ ನೀಡಿದ್ದರು. ಇದೀಗ ಶಾಲೆಯ ಅಭಿವೃದ್ಧಿಕಾರ್ಯಗಳಿಗೆ ಅಡಿಗಲ್ಲಿ ಹಾಕುವ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಭಾಗಿಯಾಗಿದ್ದಾರೆ.

ಈ ಬಗ್ಗೆ ಬಿಎಸ್​ಎಫ್ ತನ್ನ ಟ್ವಿಟರ್​​ನಲ್ಲಿ ಮಾಹಿತಿಯನ್ನ ಹಂಚಿಕೊಂಡಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್​ ಅವರು ನೇರವಾಗಿ ಭಾಗಿಯಾಗಿರಲಿಲ್ಲ. ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಭಾಗಿಯಾಗಿದ್ದರು. ಇನ್ನು ಈ ಶಾಲೆಗೆ ಅಕ್ಷಯ್ ಕುಮಾರ್​ ಅವರ ತಂದೆ ಹೆಸರು ‘ಹರಿ ಓಂ’ ಅಂತಾ ಇಡಲಾಗಿದೆ.

ಇದನ್ನೂ ಓದಿ: ಗಡಿಭಾಗದಲ್ಲಿ ಶಾಲೆ ನಿರ್ಮಾಣಕ್ಕೆ ₹1 ಕೋಟಿ ನೆರವು ನೀಡಿದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್

 

The post ಕಾಶ್ಮೀರದ ಶಾಲೆಗೆ ಅಕ್ಷಯ್ ಕುಮಾರ್ ₹1 ಕೋಟಿ ದಾನ; ಇಂದು ಅಡಿಗಲ್ಲು ಸಮಾರಂಭದಲ್ಲಿ ಭಾಗಿ appeared first on News First Kannada.

Source: newsfirstlive.com

Source link