ಲ್ಯಾಂಬೋರ್ಗಿನಿ ಕಾರಿನಲ್ಲಿ ಸಿಲುಕಿಕೊಂಡ ಸೂಪರ್ ಹಾಟ್ ಊರ್ವಶಿ; ಕಾರಿಗೂ ಈ ಬ್ಯೂಟಿ ಮೇಲೆ ಲವ್?

ಲ್ಯಾಂಬೋರ್ಗಿನಿ ಕಾರಿನಲ್ಲಿ ಸಿಲುಕಿಕೊಂಡ ಸೂಪರ್ ಹಾಟ್ ಊರ್ವಶಿ; ಕಾರಿಗೂ ಈ ಬ್ಯೂಟಿ ಮೇಲೆ ಲವ್?

ಬಾಲಿವುಡ್​​ ನಟಿ ಊರ್ವಶಿ ರೌಟೇಲಾ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ವಿಭಿನ್ನ ಬಿಕಿನಿ ಫೋಟೋವೊಂದು ಧರಿಸಿ ಭಾರೀ ಸುದ್ದಿಯಲ್ಲಿದ್ದರು. ಈಗ ತಮಿಳು ಸಿನಿಮಾವೊಂದರ ಶೂಟಿಂಗ್​​ ವೇಳೆ ಲ್ಯಾಂಬೋರ್ಗಿನಿ ಹುರಕಾನ್​ ಕಾರಿ​ನಿಂದ ಕೆಳಗಿಳಿಯಲು ಆಗದೇ ಸುದ್ದಿಯಾಗಿದ್ದಾರೆ.
blank
ಹೌದು, ಚನ್ನೈನಲ್ಲಿ ತಮಿಳು ಸಿನಿಮಾವೊಂದರ ಶೂಟಿಂಗ್​​ಗಾಗಿ ಊರ್ವಶಿ ರೌಟೇಲಾ ಲ್ಯಾಂಬೋರ್ಗಿನಿ ಹುರಕಾನ್​​ ಕಾರಿನಲ್ಲಿ ತೆರಳಿದ್ದರು. ಶೂಟಿಂಗ್​​ ಸ್ಥಳಕ್ಕಾಗಮಿಸಿದ ಕೂಡಲೇ ಊರ್ವಶಿ ರೌಟೇಲಾ ಲ್ಯಾಂಬೋರ್ಗಿನಿ ಕಾರಿ​ನಿಂದ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಆದ್ರೆ ಮಿರ ಮಿರ ಮಿಂಚುವಂಥ ಲೆಗ್​ ಶೋ ಮಾಡುವಂಥ ಸೂಪರ್ ಶಾರ್ಟ್ಸ್​ ತೊಟ್ಟಿದ್ದ ಊರ್ವಶಿ ಮತ್ತಷ್ಟು ಮಾದಕವಾಗಿ ಕಾಣ್ತಿದ್ದರು. ಮೊದಲೇ ಸೂಪರ್ ಹಾಟ್ ಬ್ಯೂಟಿ ಆಗಿರೋ ಊರ್ವಶಿ ಕಾರಿನಿಂದ ಇಳಿಯೋಕೆ ಹೋದ್ರೆ ಪರದಾಡುವಂತೆ ಆಗಿತ್ತು.. ಸೂಪರ್ ಕಾರ್​ನಿಂದ ಇಳಿಯೋಕೆ ಈ ಬ್ಯೂಟಿಗೆ ಬೇಗನೇ ಸಾಧ್ಯವಾಗಲೇ ಇಲ್ಲ.. ಇದಕ್ಕೆ ಊರ್ವಶಿನೇ ಒಂದು ಕಾರಣ ಕೂಡ ಕೊಟ್ರು.

blank

ತಾವೇನೋ 5 ಅಡಿ 10 ಇಂಚು ಎತ್ತರ ಇರೋದ್ರಿಂದಾಗಿ ಕಾರ್​ನಿಂದ ಇಳಿಯೋಕೆ ಸಾಧ್ಯವಾಗಲಿಲ್ಲ.. ಅದ್ರಲ್ಲಿ ಸಿಲುಕಿಕೊಳ್ಳುವಂತೆ ಆಗಿತ್ತು ಅಂತ ಕಾರಣ ಕೊಟ್ರು ಊರ್ವಶಿ. ಆದ್ರೆ, 6 ಅಡಿ ಎತ್ತರ ಇರೋ ನಟರೂ ಇದೇ ಕಾರನ್ನ ಹೊಂದಿದ್ದಾರೆ.. ಅವರು ಅದು ಸಹಜವಾಗಿ ಇಳಿತಾರೆ.. ಆದ್ರೆ ಊರ್ವಶಿಗೆ ಇಳಿಯೋಕೆ ಆಗಲಿಲ್ಲ ಅಂದ್ರೆ ಅದಕ್ಕೆ ಕಾರಣವೇ ಬೇರೆ ಅಂದ್ರು ಅಭಿಮಾನಿಗಳು.

blank

ಹೌದು.. ಸೂಪರ್ ಹಾಟ್ ಬ್ಯೂಟಿ ಊರ್ವಶಿ ರೌಟೇಲಾ ಮೇಲೆ ಆ ಕಾರಿಗೂ ಲವ್ ಆಗಿರ್ಬೇಕು.. ಅದಕ್ಕೇ ಇಳಿಯೋಕೆ ಬಿಡಲಿಲ್ಲ ಬಡ್ಡಿ ಮಗಂದು ಅಂತ ಅಭಿಮಾನಿಗಳು ತಮ್ಮದೇ ಕಾರಣ ಕೊಟ್ಟು ಖುಷಿ ಪಟ್ರು.. ಒಟ್ಟಿನಲ್ಲಿ ಲ್ಯಾಂಬೋರ್ಗಿನಿ ಕಾರಿನ ಮೇಲೆ ಅವರಿಗೆ ಲವ್ವೋ..ಕಾರಿಗೇ ಊರ್ವಶಿ ಮೇಲೆ ಲವ್ವೋ ಅದಂತೂ ಫೈನಲ್ ಆಗಿ ಗೊತ್ತಾಗಲಿಲ್ಲ.. ಆದ್ರೆ ಊರ್ವಶಿಯಂತೂ ಲ್ಯಾಂಬೋರ್ಗಿನಿ ಕಾರ್ ಹಾರ್ಟ್​ ಬ್ರೇಕ್ ಮಾಡಿ ಹೊರ ಬಂದ್ರು..

blank

 

The post ಲ್ಯಾಂಬೋರ್ಗಿನಿ ಕಾರಿನಲ್ಲಿ ಸಿಲುಕಿಕೊಂಡ ಸೂಪರ್ ಹಾಟ್ ಊರ್ವಶಿ; ಕಾರಿಗೂ ಈ ಬ್ಯೂಟಿ ಮೇಲೆ ಲವ್? appeared first on News First Kannada.

Source: newsfirstlive.com

Source link