ಸೆಕ್ಸ್ ಸಿನಿಮಾದಲ್ಲಿ ನಟಿಸೋದು ತಪ್ಪೇನಲ್ಲ; ಸಲ್ಮಾನ್​​ ಖಾನ್​​ ಮಾಜಿ ಲವರ್..

ಸೆಕ್ಸ್ ಸಿನಿಮಾದಲ್ಲಿ ನಟಿಸೋದು ತಪ್ಪೇನಲ್ಲ; ಸಲ್ಮಾನ್​​ ಖಾನ್​​ ಮಾಜಿ ಲವರ್..

ಸೆಕ್ಸ್​ ಸಿನಿಮಾ ನಿರ್ಮಾಣ ಮಾಡೋದು ತಪ್ಪೇನಲ್ಲ ಎಂದು ಹೇಳುವ ಮೂಲಕ ಸಲ್ಮಾನ್​​ ಖಾನ್​​ ಮಾಜಿ ಲವರ್​​ ನೀಲಿಚಿತ್ರ ಪ್ರಕರಣದಲ್ಲಿ ಬಂಧನವಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬೆನ್ನಿಗೆ ನಿಂತಿದ್ದಾರೆ.

ಈ ಸಂಬಂಧ ಮಾತಾಡಿರುವ ಸಲ್ಮಾನ್​ ಖಾನ್​​ ಮಾಜಿ ಲವರ್​​ ಸೋಮಿ ಅಲಿ, ಸೆಕ್ಸ್​ ಸಿನಿಮಾದಲ್ಲಿ ನಟಿಸೋದು ತಪ್ಪೇನಲ್ಲ. ಹಾಗೆಯೇ ಈ ಪೋರ್ನ್​​​ ಸಿನಿಮಾ ನಿರ್ಮಾಣ ಮಾಡುವುದು, ನಿರ್ದೇಶನ ಮಾಡುವುದು ತಪ್ಪಲ್ಲ ಎಂದಿದ್ದಾರೆ.

ಪೋರ್ನ್​​​​ ಸಿನಿಮಾ ನಿರ್ಮಾಣ ಒಂದು ಬ್ಯುಸಿನೆಸ್​​ ಇಂಡಸ್ಟ್ರೀ. ಎಲ್ಲಾ ಉದ್ಯಮಗಳಂತೆ ಇದು ಒಂದು ಉದ್ಯಮವೇ ಹೊರತು ಅಪರಾಧವಲ್ಲ. ಇದೊಂದು ವೃತ್ತಿ, ಯಾರೇ ಪೋರ್ನ್​​ ಸಿನಿಮಾದಲ್ಲಿ ನಟಿಸುವುದನ್ನು ಉದ್ಯೋಗದಂತೆ ಕಂಡರೆ ನಾನು ಜಡ್ಜ್​​​​​​ ಮಾಡೋದಿಲ್ಲ. ಎಂದೂ ಕೆಟ್ಟವರು ಎಂದು ಭಾವಿಸೋದಿಲ್ಲ ಎಂದು ಹೇಳಿದರು.

ಸೆಕ್ಸ್​ ಬಗ್ಗೆ ಮಾತಾಡದರೆ ಮುಚ್ಚಿಟ್ಟಷ್ಟು ಕುತೂಹಲ ಹೆಚ್ಚಾಗುತ್ತದೆ. ಬೋಲ್ಡ್​ ದೃಶ್ಯಗಳಲ್ಲಿ ನಟಿಸಿದಂತೆಯೇ ಪೋರ್ನ್​​ ಸಿನಿಮಾಗಳಲ್ಲೂ ನಟಿಸೋದು. ಆದರೆ, ಎಲ್ಲಿಯೂ ಯಾರ ಮೇಲೂ ಲೈಂಗಿಕ ದೌರ್ಜನ್ಯ ಆಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಸೆಕ್ಸ್ ಒಂದು ಸಹಜ ಕ್ರಿಯೆ. ಹಾಗಾಗಿ ಪೋರ್ನ್‌ ಮೇಲೆ ನಿಷೇಧ ಹೇರಬಾರದು. ಪೋರ್ನ್ ಹೆಸರಲ್ಲಿ ಯಾರ ಮೇಲೂ ದೌರ್ಜನ್ಯವೂ ನಡೆಯಬಾರದು ಎಂದಿದ್ದಾರೆ. ಈ ಮೂಲಕ ಅಶ್ಲೀಲ ವಿಡಿಯೋ ನಿರ್ಮಿಸಿ ಪ್ರಸಾರ ಮಾಡಿ ಜೈಲು ಸೇರಿರುವ ರಾಜ್ ಕುಂದ್ರಾರನ್ನು ಸಮರ್ಥಿಸಿಕೊಂಡಿದ್ದಾರೆ.

The post ಸೆಕ್ಸ್ ಸಿನಿಮಾದಲ್ಲಿ ನಟಿಸೋದು ತಪ್ಪೇನಲ್ಲ; ಸಲ್ಮಾನ್​​ ಖಾನ್​​ ಮಾಜಿ ಲವರ್.. appeared first on News First Kannada.

Source: newsfirstlive.com

Source link