ಪ್ರೀತಿಸಿ ಮದ್ವೆಯಾದ ಒಂದೇ ತಿಂಗಳಲ್ಲಿ ಮಹಿಳಾ ಕಾನ್ಸ್​​ಟೇಬಲ್ ಆತ್ಯಹತ್ಯೆ; ಹಲವು ಅನುಮಾನ

ಪ್ರೀತಿಸಿ ಮದ್ವೆಯಾದ ಒಂದೇ ತಿಂಗಳಲ್ಲಿ ಮಹಿಳಾ ಕಾನ್ಸ್​​ಟೇಬಲ್ ಆತ್ಯಹತ್ಯೆ; ಹಲವು ಅನುಮಾನ

ಬೆಂಗಳೂರು: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ನೇತ್ರಾ ಮೃತ ಮಹಿಳಾ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್.

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಆಗಿದ್ದ ನೇತ್ರಾ, ಕಳೆದ ತಿಂಗಳು ಪ್ರೀತಿಸಿ ಎರಡೂ ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದರು. ಆದ್ರೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಪ್ರೀತಿಸಿ ಮದ್ವೆಯಾದ ಒಂದೇ ತಿಂಗಳಲ್ಲಿ ಮಹಿಳಾ ಕಾನ್ಸ್​​ಟೇಬಲ್ ಆತ್ಯಹತ್ಯೆ; ಹಲವು ಅನುಮಾನ appeared first on News First Kannada.

Source: newsfirstlive.com

Source link