ಒಂದು ಸುತ್ತು ಉರುಳಿದ ಕಾಲಚಕ್ರ; ಸ್ಥಾನಪಲ್ಲಟಗೊಂಡ ಬಿಎಸ್​ವೈ-ಬೊಮ್ಮಾಯಿ ಸಂಬಂಧ

ಒಂದು ಸುತ್ತು ಉರುಳಿದ ಕಾಲಚಕ್ರ; ಸ್ಥಾನಪಲ್ಲಟಗೊಂಡ ಬಿಎಸ್​ವೈ-ಬೊಮ್ಮಾಯಿ ಸಂಬಂಧ

ಬೆಂಗಳೂರು: ರಾಜಕೀಯ ನಿಂತ ನೀರಲ್ಲ ಎನ್ನವುದು ಸಾರ್ವಕಾಲಿಕ ಸತ್ಯ.. ಅಂತೆಯೇ ಕಾಲಚಕ್ರವೂ ಕೂಡ ತಿರುಗುತ್ತಲೇ ಇರುತ್ತದೆ.. ಮೇಲಿದ್ದವರು ಕೆಳಗೆ ಬರ್ತಾರೆ, ಕೆಳಗಿದ್ದವರು ಮೇಲೆ ಹೋಗ್ತಾರೆ. ಇಂಥ ಅದೆಷ್ಟೋ ಉದಾಹರಣೆಗಳು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಿಗುತ್ತವೆ. ಇಂಥದ್ದೇ ಸನ್ನಿವೇಶಕ್ಕೆ ಇಂದಿನ ರಾಜ್ಯ ರಾಜಕಾರಣವೂ ಕೂಡ ಸಾಕ್ಷಿಯಾಗಿದೆ.

ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಕಲ ತಯಾರಿಗಳನ್ನ ಮಾಡಿಕೊಂಡಿದ್ದಾರೆ. ಅತ್ತ ನಿರ್ಗಮಿತ ಸಿಎಂ ಬಿ.ಎಸ್. ಯಡಿಯೂರಪ್ಪ ಇನ್ನು ಮುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ 2 ವರ್ಷಗಳ ಕಾಲೂ ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿ ಕೆಲಸ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಜೊತೆಯಲ್ಲೇ ಇದ್ದುಕೊಂಡು ಸಲಹೆ ಸೂಚನೆಗಳನ್ನೂ ನೀಡಿದ್ದಾರೆ. ಸುದ್ದಿಗೋಷ್ಠಿಗಳಲ್ಲಿ ಬಿಎಸ್​ವೈ ತೊದಲಿದಾಗ ಬಸವರಾಜ ಬೊಮ್ಮಾಯಿ ಪಕ್ಕದಲ್ಲೇ ನಿಂತುಕೊಂಡು ಬಿಎಸ್​ವೈ ತೊದಲಿದ್ದನ್ನ ಸರಿಪಡಿಸಿದ್ದಾರೆ. ಮರೆತ ಅಂಶಗಳನ್ನ ನೆನಪಿಸಿಕೊಟ್ಟಿದ್ದಾರೆ.

ನಿನ್ನೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಈ ಹಿಂದೆ ಬೊಮ್ಮಾಯಿ ನಿಲ್ಲುತ್ತಿದ್ದ ಜಾಗದಲ್ಲಿ ಬಿಎಸ್​ವೈ ಕಾಣಿಸಿಕೊಂಡರು.. ಇನ್ನೊಂದೆಡೆ ಬಿಎಸ್​ವೈ ಅಧಿಕಾರ ಕಳೆದುಕೊಂಡಿದ್ದರೂ ಹಿರಿಯ ನಾಯಕರಾಗಿ ಬಿಎಸ್​ವೈ ಅವರಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.. ಹೀಗಾಗಿ ಅಕ್ಕಪಕ್ಕದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕಾಲಚಕ್ರ ಒಂದು ಸುತ್ತು ಉರುಳಿದೆ. ರಾಜ್ಯ ರಾಜಕಾರಣದ ಚಿತ್ರಣ ಬದಲಾಗಿದ್ದು ಅಂದು ಬಸವರಾಜ ಬೊಮ್ಮಾಯಿ ಇದ್ದ ಜಾಗದಲ್ಲಿ ಈಗ ಬಿ.ಎಸ್. ಯಡಿಯೂರಪ್ಪ ಇದ್ದಾರೆ. ಬಿ.ಎಸ್. ಯಡಿಯೂರಪ್ಪ ಇದ್ದ ಜಾಗದಲ್ಲಿ ಬೊಮ್ಮಾಯಿ ಇದ್ದಾರೆ.

The post ಒಂದು ಸುತ್ತು ಉರುಳಿದ ಕಾಲಚಕ್ರ; ಸ್ಥಾನಪಲ್ಲಟಗೊಂಡ ಬಿಎಸ್​ವೈ-ಬೊಮ್ಮಾಯಿ ಸಂಬಂಧ appeared first on News First Kannada.

Source: newsfirstlive.com

Source link