‘ಮಠಾಧೀಶರ‌ ಧ್ವನಿಗೆ ಪೂರಕ‌ ಪ್ರತಿಕ್ರಿಯೆ ದೊರೆತಿದೆ, ರಾಜಕೀಯ ಅಸ್ಥಿರತೆ ನಿವಾರಣೆ ಆಗಿದೆ’

‘ಮಠಾಧೀಶರ‌ ಧ್ವನಿಗೆ ಪೂರಕ‌ ಪ್ರತಿಕ್ರಿಯೆ ದೊರೆತಿದೆ, ರಾಜಕೀಯ ಅಸ್ಥಿರತೆ ನಿವಾರಣೆ ಆಗಿದೆ’

ಚಿತ್ರದುರ್ಗ: ರಾಜ್ಯ ರಾಜಕೀಯದಲ್ಲಿ ಉಂಟಾಗಿದ್ದ ಅಸ್ಥಿರತೆ ನಿವಾರಣೆ ಆಗಿದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.  

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಮರುಘಾ ಶ್ರೀ.. ರಾಜಕೀಯ ಅಸ್ಥಿರತೆ ಬಗ್ಗೆ ನಾವು ಧ್ವನಿ ಎತ್ತಿದ್ದೆವು. ಇದೀಗ ಮಠಾಧೀಶರ‌ ಧ್ವನಿಗೆ ಪೂರಕ‌ ಪ್ರತಿಕ್ರಿಯೆ ದೊರೆತಿದೆ. ಬೊಮ್ಮಾಯಿ ಸಿಎಂ ಆಗಿದ್ದು ರಾಜಕೀಯ ಅಸ್ಥಿರತೆಗೆ ಪೂರ್ಣವಿರಾಮ ಸಿಕ್ಕಿದೆ ಎಂದರು.

ಬೊಮ್ಮಾಯಿ ಸರ್ವ ಜನಾಂಗದ ಭಾವನೆಗೆ ಸ್ಪಂದಿಸುವ ವಿಶ್ವಾಸವಿದೆ. ಬಿಎಸ್ ಯಡಿಯೂರಪ್ಪ ಗರಡಿಯಲ್ಲಿ ಬೊಮ್ಮಾಯಿ ಪಳಗಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ಸಾಂತ್ವನ ಹೇಳುವುದು ಸಂತರ ಕರ್ತವ್ಯ. ಮುಖ್ಯಮಂತ್ರಿ ಸ್ಥಾನ ನಮ್ಮ ಮಠದ್ದೂ ಅಲ್ಲ, ಮತ್ತೊಂದು ಮಠದ್ದೂ ಅಲ್ಲ. ರಾಜ್ಯದ ಪ್ರಜೆಗಳು ನೀಡುವ ಅವಕಾಶದಿಂದ ಸಿಎಂ ಸ್ಥಾನ ನಿರ್ಧಾರವಾಗಲಿದೆ. ಸಿಎಂ ಆಯ್ಕೆಯಲ್ಲಿ ಹೈಕಮಾಂಡ್ ಜಾಣ್ಮೆ, ಪ್ರಬುದ್ಧ ನಡೆ ತೋರಿಸಿದೆ. ಮಠಾಧೀಶರ ಸಮಾವೇಶವೂ ಬೊಮ್ಮಾಯಿ ಆಯ್ಕೆಗೆ ಒಂದು ಕಾರಣ ಆಗಿರಬಹುದು. 350-400 ಜನ ಮಠಾಧೀಶರು ಧ್ವನಿ ಎತ್ತಿದ್ದು ಹೈಕಮಾಂಡ್ ಗಮನಿಸಿರಬಹುದು ಎಂದರು.

The post ‘ಮಠಾಧೀಶರ‌ ಧ್ವನಿಗೆ ಪೂರಕ‌ ಪ್ರತಿಕ್ರಿಯೆ ದೊರೆತಿದೆ, ರಾಜಕೀಯ ಅಸ್ಥಿರತೆ ನಿವಾರಣೆ ಆಗಿದೆ’ appeared first on News First Kannada.

Source: newsfirstlive.com

Source link