ಶಿಲ್ಪಾ ಶೆಟ್ಟಿ ಪತಿಗೆ ಸಂಕಷ್ಟ; ‘ಫೋರ್ಸ್-ಬೆದರಿಕೆ-ರೇಪ್​’ ಕಂಟೆಂಟ್ ಮೇಕರ್​​​ ವಿರುದ್ಧ ಗಂಭೀರ ಆರೋಪ

ಶಿಲ್ಪಾ ಶೆಟ್ಟಿ ಪತಿಗೆ ಸಂಕಷ್ಟ; ‘ಫೋರ್ಸ್-ಬೆದರಿಕೆ-ರೇಪ್​’ ಕಂಟೆಂಟ್ ಮೇಕರ್​​​ ವಿರುದ್ಧ ಗಂಭೀರ ಆರೋಪ

ಮುಂಬೈ: ನೀಲಿ ಚಿತ್ರ ತಯಾರಿಸಿದ ಆರೋಪದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾಗೆ ಮತ್ತಷ್ಟು ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್​ ಕುಂದ್ರಾಗೆ ಪಾರ್ನ್​ ಫಿಲ್ಮ್ ಮಾರಾಟ ಮಾಡುತ್ತಿದ್ದರು ಎನ್ನಲಾದ ಕಂಟೆಂಟ್ ಮೇಕರ್ಸ್ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ‘ತಮ್ಮನ್ನ ಹೇಗೆ ಒತ್ತಾಯ ಮಾಡಿ ಶೂಟ್ ಮಾಡ್ತಿದ್ದರು’ ಅನ್ನೋದ್ರ ಬಗ್ಗೆ ಮುಂಬೈ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಯನ್ನ ಸಂತ್ರಸ್ತೆ ನೀಡಿದ್ದಾರೆ ಎನ್ನಲಾಗಿದೆ.

ನೀಲಿ ಚಿತ್ರ ತಯಾರಿಸುವ ವೇಳೆ ಇದ್ದಳು ಎನ್ನಲಾಗಿರುವ ಓರ್ವ ಸಂತ್ರಸ್ತೆಗೆ ತನಿಖಾಧಿಕಾರಿಗಳು ಪೋರ್ನ್​ ವಿಡಿಯೋ ಒಂದನ್ನ ತೋರಿಸಿ ವಿಚಾರಣೆ ನಡೆಸಿದ್ದಾರೆ. ಆ ವಿಡಿಯೋದಲ್ಲಿರುವ ಸಂತ್ರಸ್ತೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾಳೆ. ‘ಕಾರ್ಯಕ್ರಮ ಸಂಬಂಧ ಇನ್​ಸ್ಟಾಗ್ರಾಮ್​​ನಲ್ಲಿ ಅಡಿಷನ್​ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಈ ವಿಡಿಯೋದಲ್ಲಿರುವ ಸಂತ್ರಸ್ತೆ ಕೂಡ ಬಂದಿದ್ದಳು. ಆಕೆಗೆ ಮೊದಲಿಗೆ ವಿವಿಧ ಭಂಗಿಗಳಲ್ಲಿ ಪೋಸ್​ ನೀಡುವಂತೆ ಕೇಳಿದರು. ಕೊನೆಗೆ ಅಲ್ಲಿ ಅಶ್ಲೀಲತೆಗಳೇ ಹೆಚ್ಚಾಗಿತ್ತು. ಅದನ್ನ ನೋಡಿದ ನನಗೆ ಅದೊಂದು ನಕಲಿ ಅಡಿಷನ್ ಅನ್ನೋದು ಪಕ್ಕಾ ಆಯಿತು.

ಇದನ್ನೂ ಓದಿ:ಪಾರ್ನ್ ಸಿನಿಮಾ ನಿರ್ಮಾಣ; ವಿಚಾರಣೆಗೆ ಕರೆದ ಬೆನ್ನಲ್ಲೇ ಮಧ್ಯಂತರ ಜಾಮೀನಿನ ಮೊರೆ ಹೋದ ಶೆರ್ಲಿನ್

ಅದಕ್ಕೆಲ್ಲಾ ಆಕ್ಷೇಪ ವ್ಯಕ್ತಪಡಿಸಿದ ಆಕೆಗೆ ಆರೋಪಿಗಳು ಬೆದರಿಕೆ ಹಾಕಿದರು. ಕೋರ್ಟ್​​ನಲ್ಲಿ ಪ್ರಕರಣ ದಾಖಲಿಸೋದಾಗಿ ಹೆದರಿಸಿದರು. ಈ ಸಂದರ್ಭದಲ್ಲಿ ಆಕೆ ಅಲ್ಲಿಂದ ಹೊರ ಹೋಗೋದಾಗಿ ಹೇಳಿದಾಗ, ಅಡಿಷನ್​ಗೆ ತಗುಲಿರುವ ಎಲ್ಲಾ ವೆಚ್ಚಗಳನ್ನ ಭರಿಸಬೇಕು ಎಂದು ಬೆದರಿಸಿದ್ದಾರೆ ಎಂದು ವಿಚಾರಣೆಯಲ್ಲಿರುವ ಸಂತ್ರಸ್ತೆಯೊಬ್ಬಳು ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ:ಅಶ್ಲೀಲ ಚಿತ್ರ ನಿರ್ಮಾಣ ಕೇಸ್; ನಟಿ ಶಿಲ್ಪಾ ಶೆಟ್ಟಿ ಪತಿಗೆ 14 ದಿನಗಳ ನ್ಯಾಯಾಂಗ ಬಂಧನ

ಇನ್ನು ಆಕೆ ಅಡಿಷನ್​ಗೆ ಹೋದಾಗ ಮೊದಲು ಸ್ಕ್ರಿಪ್ಟ್​ ಕೊಟ್ಟರು. ಅಲ್ಲಿ ಅವಳಿಗೆ ರಾಣಿ ಪಾತ್ರವನ್ನ ನಿಭಾಯಿಸುವಂತೆ ಕೇಳಲಾಯಿತು. ಹೀಗಾಗಿ ಆಕೆ ಒಪ್ಪಿಕೊಂಡಿದ್ದಳು, ಆದರೆ ನಂತರ ಅವಳಿಗೆ ಅರ್ಥವಾಗಿದ್ದು ಅದು, ಸಾಮಾನ್ಯ ಆಡಿಷನಲ್ ಅನ್ನೋದು. ನಂತರ ಆಕೆ ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿದ್ದಳು.

ಆದರೆ ಆರೋಪಿಗಳು ಬೆದರಿಕೆ ಹಾಗೂ ಬ್ಲ್ಯಾಕ್​ಮೇಲ್​​ ತಂತ್ರವನ್ನ ಬಳಸಿದರು. ಅಲ್ಲದೇ ಅಲ್ಲಿಂದ ಆಕೆಯನ್ನ ಹೊರ ಬರಲು ಬಿಡಲಿಲ್ಲ. ನಂತರ ಅವಳು ಅಳಲು ಪ್ರಾರಂಭಿಸಿದಳು. ಜೋರಾಗಿ ಕಣ್ಣೀರಿಟ್ಟಿದ್ದಂತೆ, ಮುಖದಲ್ಲಿರುವ ಕಳೆ ಮತ್ತು ಕಣ್ಣುಗಳು ಕೆಂಪಾಗಿದ್ದರಿಂದ ಮತ್ತೆ ಮೇಕ್​ ಅಪ್​ ಮಾಡಿ ಶೂಟ್​ಗೆ ಬರುವಂತೆ ತಿಳಿಸಿದ್ದರು ಅಂತಾ ಆಕೆ ಹೇಳಿದ್ದಾಳಂತೆ.

ಇದನ್ನೂ ಓದಿ:ಗಂಡನ ಬ್ಲೂ ಫಿಲ್ಮ್​ ಕೇಸ್; ನಟಿ ಶಿಲ್ಪಾ ಶೆಟ್ಟಿಗೂ ಇದೆಯಾ ಬಂಧನದ ಭೀತಿ?

ಇತರೆ ನಟರು ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ, ಅದನ್ನ ಆರೋಪಿಗಳು ಚಿತ್ರೀಕರಿಸಿದ್ದಾರೆ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಚಿತ್ರೀಕರಣವನ್ನ ವಿರೋಧಿಸಿ ಆಕೆ ಪದೇ ಪದೇ ಕಣ್ಣೀರು ಇಡುತ್ತಿದ್ದಂರಿಂದ ಮತ್ತೆ ಮತ್ತೆ ಮೇಕಪ್ ಮಾಡುತ್ತಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾಳೆ. ಒಂದು ಸಲ ಚಿತ್ರೀಕರಣ ಮುಗಿದ ಮೇಲೆ ಆಕೆಗೆ 10 ಸಾವಿರ ಹಣವನ್ನ ನೀಡಿ, ಅಲ್ಲಿಂದ ಹೋಗಲು ಹೇಳಿದ್ದರು ಅಂತಾ ಸಂತ್ರಸ್ತೆ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಅಶ್ಲೀಲ ಸಿನಿಮಾ ನಿರ್ಮಾಣ; ಇಡಿ ಎಂಟ್ರಿಯಿಂದ ಕುಂದ್ರಾ ಕೋಟೆಯಲ್ಲಿ ಕಂಪನ

The post ಶಿಲ್ಪಾ ಶೆಟ್ಟಿ ಪತಿಗೆ ಸಂಕಷ್ಟ; ‘ಫೋರ್ಸ್-ಬೆದರಿಕೆ-ರೇಪ್​’ ಕಂಟೆಂಟ್ ಮೇಕರ್​​​ ವಿರುದ್ಧ ಗಂಭೀರ ಆರೋಪ appeared first on News First Kannada.

Source: newsfirstlive.com

Source link