ಶಶಿಕಲಾ ಜೊಲ್ಲೆಗೆ ಮತ್ತೊಂದು ಶಾಕ್; ಮೊಟ್ಟೆ ಡೀಲ್​ ಬಗ್ಗೆ ವರದಿ ಕೇಳಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಶಶಿಕಲಾ ಜೊಲ್ಲೆಗೆ ಮತ್ತೊಂದು ಶಾಕ್; ಮೊಟ್ಟೆ ಡೀಲ್​ ಬಗ್ಗೆ ವರದಿ ಕೇಳಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್​ ಕುರಿತಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ವರದಿ ಕೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನವದೆಹಲಿಯಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಸಚಿವೆ ಸ್ಮೃತಿ ಇರಾನಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಕೇಂದ್ರದ ನಾಯಕರ ನಡುವೆ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಜೊಲ್ಲೆ ಮೊಟ್ಟೆ ಡೀಲ್​​​; ಕೇಂದ್ರ ಸಚಿವೆ ಸ್ಮೃತಿ ಇರಾನಿ ನವ ದೆಹಲಿ ನಿವಾಸಕ್ಕೆ ಯುವ ಕಾಂಗ್ರೆಸ್ ಮುತ್ತಿಗೆ

blank

ಪರಿಣಾಮ ನ್ಯೂಸ್​ಫಸ್ಟ್​ ನಡೆಸಿದ ಕುಟುಕು ಕಾರ್ಯಚರಣೆಯ ಬಗ್ಗೆ ಕೇಂದ್ರ ಸಚಿವೆ ವರದಿ ಕೇಳಿದ್ದಾರೆ. ರಾಜ್ಯ ಸಚಿವೆಯ ಕರ್ಮಕಾಂಡದ ಬಿಸಿ ದೆಹಲಿಗೆ ತಟ್ಟಿದ ಬೆನ್ನಲ್ಲೆ ಪ್ರತಿಭಟನೆಗೆ ಕಾರಣ ಏನು ಎಂಬ ಬಗ್ಗೆ ಸ್ಮೃತಿ ಇರಾನಿ ವರದಿ ಕೇಳಿದ್ದಾರೆ. ಕುಟುಕು ಕಾರ್ಯಾಚರಣೆಯಲ್ಲಿ ಯಾವೆಲ್ಲ ವಿಚಾರ ಇದೆ ಅನ್ನೋ ಬಗ್ಗೆ ಮಾಹಿತಿ ಕೇಳಿದ ಅವರು, ತಮ್ಮ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ನ್ಯೂಸ್​ಫಸ್ಟ್​ಗೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜೊಲ್ಲೆ ವಿರುದ್ಧ ಲೋಕಾಯುಕ್ತಕ್ಕೆ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷರಿಂದ ದೂರು

The post ಶಶಿಕಲಾ ಜೊಲ್ಲೆಗೆ ಮತ್ತೊಂದು ಶಾಕ್; ಮೊಟ್ಟೆ ಡೀಲ್​ ಬಗ್ಗೆ ವರದಿ ಕೇಳಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ appeared first on News First Kannada.

Source: newsfirstlive.com

Source link