2ನೇ ಟಿ20 ಪಂದ್ಯ ಆರಂಭ; ದೇವದತ್ ಪಡಿಕ್ಕಲ್ ಸೇರಿ ನಾಲ್ವರು ಪದಾರ್ಪಣೆ

2ನೇ ಟಿ20 ಪಂದ್ಯ ಆರಂಭ; ದೇವದತ್ ಪಡಿಕ್ಕಲ್ ಸೇರಿ ನಾಲ್ವರು ಪದಾರ್ಪಣೆ

ಟೀಮ್​​ ಇಂಡಿಯಾ ಎದುರಿನ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಟಾಸ್​​ ಗೆದ್ದು ಫೀಲ್ಡಿಂಗ್​​ ಆಯ್ದುಕೊಂಡಿದೆ. ಜುಲೈ 27ರಂದು ನಡೆಯಬೇಕಿದ್ದ ಈ ಪಂದ್ಯ ಆಟಗಾರರಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ, ಇಂದಿಗೆ ಮುಂದೂಡಿಕೆಯಾಗಿತ್ತು.

ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 8 ಆಟಗಾರರು ಕೂಡ ಐಸೋಲೇಷನ್​​ಗೆ ಒಳಗಾಗಿದ್ದು, ತಂಡದಲ್ಲಿ 4 ಬದಲಾವಣೆ ಕಂಡಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ದೇವದತ್​ ಪಡಿಕ್ಕಲ್, ಋತುರಾಜ್​ ಗಾಯಕ್ವಾಡ್​, ನಿತಿಶ್​ ರಾಣಾ, ಚೇತನ್​ ಸಕಾರಿಯಾ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ತಂಡವನ್ನು ಭುವನೇಶ್ವರ್​​ ಕುಮಾರ್​ ಮುನ್ನಡೆಸುತ್ತಾರೆ ಎಂಬ ಗೊಂದಲಕ್ಕೂ ತೆರೆ ಬಿದ್ದಿದೆ.

ಈ ಪಂದ್ಯ ಸೇರಿ ನಾಳೆ ನಡೆಯಲಿರುವ ಟಿ20 ಪಂದ್ಯಕ್ಕೂ ಶಿಖರ್​ ಧವನ್​ ನಾಯಕರಾಗಿಯೇ ಮುಂದುವರಿಯಲಿದ್ದಾರೆ. ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ, ಈ ಪಂದ್ಯವನ್ನ ಗೆದ್ದು ಸರಣಿ ಕೈ ವಶ ಮಾಡಿಕೊಳ್ಳಲು ಪ್ಲಾನ್​ ರೂಪಿಸಿಕೊಂಡಿದೆ. ಇನ್ನು ಶ್ರೀಲಂಕಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

The post 2ನೇ ಟಿ20 ಪಂದ್ಯ ಆರಂಭ; ದೇವದತ್ ಪಡಿಕ್ಕಲ್ ಸೇರಿ ನಾಲ್ವರು ಪದಾರ್ಪಣೆ appeared first on News First Kannada.

Source: newsfirstlive.com

Source link