ಬೊಮ್ಮಾಯಿ CM ಬೆನ್ನಲ್ಲೇ ಶುರುವಾಯ್ತು ಸಚಿವ ಸ್ಥಾನಕ್ಕೆ ಲಾಬಿ; ರೇಣುಕಾಚಾರ್ಯರ ಆಗ್ರಹ ಏನು..?

ಬೊಮ್ಮಾಯಿ CM ಬೆನ್ನಲ್ಲೇ ಶುರುವಾಯ್ತು ಸಚಿವ ಸ್ಥಾನಕ್ಕೆ ಲಾಬಿ; ರೇಣುಕಾಚಾರ್ಯರ ಆಗ್ರಹ ಏನು..?

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಶುರುವಾಗಿದ್ದ ನಾಯಕತ್ವ ಬದಲಾವಣೆ ಗೊಂದಲಕ್ಕೆ ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತೆರೆ ಬಿದ್ದಿತ್ತು. ಅದರ ಬೆನ್ನಲ್ಲೇ ಯಾರಾಗ್ತಾರೆ ರಾಜ್ಯದ ನೂತನ ಸಾರಥಿ ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಇದೀಗ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಪ್ರಮಾಣವಚನ ಕೂಡ ಸ್ವೀಕಾರ ಮಾಡಿದ್ದಾರೆ. ಈ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿಯಲ್ಲಿ ಸಚಿವ ಸಂಪುಟದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಜೊತೆಗೆ ಸಚಿವಾಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಬಹಳ ದೊಡ್ಡ ಮಟ್ಟದಲ್ಲಿಯೇ ಲಾಬಿಗಳು ಶುರುವಾಗಿವೆ. ಅವರಲ್ಲಿ ಹೊನ್ನಾಳಿ ಕ್ಷೇತ್ರದ ಶಾಸಕ ಹಾಗೂ ಬಿಎಸ್​ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂಪಿ ರೇಣುಕಾಚಾರ್ಯ ಕೂಡ ಹೌದು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಬಿಎಸ್​ವೈ.. ಅರುಣ್ ಸಿಂಗ್, ನಳೀನ್ ಕುಮಾರ್ ಕಟೀಲ್ ಅವ್ರನ್ನು ಭೇಟಿ ಮಾಡಿದ್ದೇವೆ. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಅಂತಾ ಮನವಿ ಮಾಡಿದ್ದೇವೆ. ಆರು ಜನ ಸಚಿವ ಆಕಾಂಕ್ಷಿಗಳು ಇದ್ದಾರೆ. ರೇಣುಕಾಚಾರ್ಯ ಮಾತ್ರವಲ್ಲ, ಆರು ಜನರ ಪೈಕಿ ಯಾರಿಗಾದರೂ ಒಬ್ಬರಿಗೆ ಕೊಡಬೇಕು. ಒಟ್ಟಾರೆ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೊಡಲಿ ಅಂತಾ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

The post ಬೊಮ್ಮಾಯಿ CM ಬೆನ್ನಲ್ಲೇ ಶುರುವಾಯ್ತು ಸಚಿವ ಸ್ಥಾನಕ್ಕೆ ಲಾಬಿ; ರೇಣುಕಾಚಾರ್ಯರ ಆಗ್ರಹ ಏನು..? appeared first on News First Kannada.

Source: newsfirstlive.com

Source link