ಮೈಸೂರು ಝೂನಲ್ಲಿ ಗಂಡು ಮರಿಗೆ ಜನ್ಮ ನೀಡಿದ ಜಿರಾಫೆ

ಮೈಸೂರು: ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜಿರಾಫೆ ಲಕ್ಷ್ಮಿಗೆ ಅಮ್ಮನಾದ ಸಂಭ್ರಮ. ಈ ಮೂಲಕ ಜಿರಾಫೆ ಮರಿಗಳ ವಿಷಯದಲ್ಲಿ ಮೈಸೂರು ಮೃಗಾಲಯ ದಾಖಲೆ ನಿರ್ಮಿಸಿದೆ.

ಲಕ್ಷ್ಮಿ ಮತ್ತು ಭರತ್ ಜೋಡಿ ಜಿರಾಫೆಗೆ ಜುಲೈ 12ರಂದು ಒಂದು ಗಂಡು ಮರಿ ಜಿರಾಫೆ ಜನನವಾಗಿದೆ. ಲಕ್ಷ್ಮಿಗೆ ಇದು ನಾಲ್ಕನೇ ಮರಿಯಾಗಿದೆ. ಮೈಸೂರು ಮೃಗಾಲಯದಲ್ಲಿ ಇಲ್ಲಿಯವರೆಗೆ 22 ಜಿರಾಫೆ ಮರಿಗಳ (17 ಗಂಡು ಮತ್ತು 5 ಹೆಣ್ಣು) ಜನನದ ದಾಖಲೆಯನ್ನು ಹೊಂದಿದೆ. ಇದನ್ನೂ ಓದಿ: ಶುಭಾಶಯಗಳು ಮಾಮ- ನೂತನ ಸಿಎಂ ಬೊಮ್ಮಾಯಿಗೆ ಕಿಚ್ಚ ಅಭಿನಂದನೆ

ಲಕ್ಷ್ಮಿ ತನ್ನ ಮರಿಯ ಲಾಲನೆ ಮತ್ತು ಪಾಲನೆಯನ್ನು ಮಾಡುತ್ತಿದ್ದು, ಮರಿಯು ಆರೋಗ್ಯವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನೂತನ ಸಿಎಂಗೆ ಸಿದ್ದಗಂಗಾ ಶ್ರೀ ಅಭಿನಂದನೆ

blank

The post ಮೈಸೂರು ಝೂನಲ್ಲಿ ಗಂಡು ಮರಿಗೆ ಜನ್ಮ ನೀಡಿದ ಜಿರಾಫೆ appeared first on Public TV.

Source: publictv.in

Source link