ಬುದ್ಧನ ಮೂರ್ತಿ ಒಡೆದ ತಾಲಿಬಾನಿಗಳ ಒಲೈಕೆಗೆ ಮುಂದಾದ ಚೀನಾ

ಬುದ್ಧನ ಮೂರ್ತಿ ಒಡೆದ ತಾಲಿಬಾನಿಗಳ ಒಲೈಕೆಗೆ ಮುಂದಾದ ಚೀನಾ

ನವದೆಹಲಿ: ನಿಮಗೆ ನೆನಪಿದೆಯಾ? ಅದು 2001ರ ಸಮಯ.. ಅಫ್ಘಾನಿಸ್ತಾನದ ಬಾಮಿಯಾನಿನ ಐತಿಹಾಸಿಕ ಬುದ್ಧನ ಮೂರ್ತಿಗಳನ್ನು ಆರ್ಟಿಲ್ಲರಿ ಗನ್ ಬಳಸಿ ತಾಲಿಬಾನಿಗಳು ಒಡೆದು ಹಾಕಿದ್ದರು. ಆಗ ಇಡೀ ಜಗತ್ತೇ ಮಮ್ಮಲ ಮರುಗಿತ್ತು. ಇಂದು ಅಂಥ ರಕ್ತ ಪಿಪಾಸು ತಾಲಿಬಾನಿಗಳ ಓಲೈಕೆಗೆ ಬೌದ್ಧ ಧರ್ಮೀಯರೇ ಹೆಚ್ಚಿರೋ ಚೀನಾ ಮುಂದಾಗಿದ್ದು.. ಹಲವು ಪ್ರಶ್ನೆ ಹುಟ್ಟು ಹಾಕಿದೆ.

ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ಉಗ್ರರ ನಡುವೆ ಸಂಘರ್ಷ ಮುಂದುವರಿದಿದೆ. ಪಾಕಿಸ್ತಾನದ ಬೆಂಬಲದೊಂದಿಗೆ ತನ್ನ ದೇಶದ ಮೇಲೆ ಸದಾ ದಾಳಿ ನಡೆಸುತ್ತಿದ್ದ ತಾಲಿಬಾನ್​​​​ಗೆ ಇತ್ತೀಚೆಗೆ ಅಫ್ಘಾನ್ ಭದ್ರತಾ ಪಡೆ ಬುದ್ದಿ ಕಲಿಸಿತ್ತು. ಯಾವುದೇ ಕಾರಣಕ್ಕೂ ತಾಲಿಬಾನ್ ಭಯೋತ್ಪಾದಕರು ತಮ್ಮ ದೇಶದೊಳಗೆ ನುಗ್ಗಬಾರದು ಎಂದು ಅಮೆರಿಕಾ ಸೇನೆ ಬೆಂಬಲದೊಂದಿಗೆ ಅಫ್ಘಾನ್​​​​ ಸೇನೆ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಈ ರಹಸ್ಯ ಕಾರ್ಯಾಚರಣೆಯಲ್ಲಿ ಕೇವಲ 24 ಗಂಟೆಗಳಲ್ಲಿ 262 ತಾಲಿಬಾನ್ ಉಗ್ರರನ್ನು ಅಫ್ಘಾನ್ ಭದ್ರತಾ ಪಡೆ ಹೊಡೆದುರುಳಿಸಿತ್ತು. ಈ ಬಗ್ಗೆ ಖುದ್ದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವೇ ಸ್ಪಷ್ಟಪಡಿಸಿತ್ತು. ಇಂಥ ಹೊತ್ತಲ್ಲೇ ಚೀನಾಕ್ಕೆ ತಾಲಿಬಾನ್ ನಿಯೋಗ ಭೇಟಿ ನೀಡಿದ್ದು, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲಸು ತಾಲಿಬಾನ್ ಮುಖ್ಯ ಪಾತ್ರವಹಿಸಬೇಕು ಅಂತಾ ಚೀನಾ ಹೇಳಿದೆ.

blank

ಇನ್ನು, ಅಫ್ಘಾನಿಸ್ತಾನದಿಂದ ಅಮೆರಿಕಾ ತನ್ನ ಸೇನಾಪಡೆಯನ್ನು ವಾಪಸ್ಸು ಕರೆಸಿಕೊಂಡ ಬೆನ್ನಲ್ಲೇ ತಾಲಿಬಾನ್​​​ ಉಗ್ರರು ಮತ್ತೆ ತಮ್ಮ ಚಾಳಿ ಮುಂದುವರಿಸಿದರು. ಅಫ್ಘಾನ್​​​​ ದೇಶದ ಅರ್ಧದಷ್ಟು ಪ್ರದೇಶಗಳು ತಮ್ಮ ಹಿಡಿತದಲ್ಲಿವೆ ಎಂದು ಘೋಷಿಸಿಕೊಂಡರು. ಆದರೆ, ಅಫ್ಘಾನ್ ಸರ್ಕಾರ ಮಾತ್ರ ಈ ಹೇಳಿಕೆಯನ್ನು ತಳ್ಳಿ ಹಾಕಿ ತಾಲಿಬಾನ್​​ ಉಗ್ರರಿಗೆ ಪ್ರತ್ಯುತ್ತರ ನೀಡಿತ್ತು. ಈ ಬೆನ್ನಲ್ಲೇ ಹೇಗಾದರೂ ಮತ್ತೆ ನಗರಗಳಿಗೆ ನುಗ್ಗಬೇಕು, ತಮ್ಮ ಅಧಿಪತ್ಯ ಸಾಧಿಸಬೇಕು ಎಂದು ಈಗ ತಾಲಿಬಾನ್​​ ಮುಂದಾಗಿದೆ. ಹೀಗಾಗಿ ಚೀನಾ ಮತ್ತು ಪಾಕಿಸ್ತಾನದ ಸಂಪೂರ್ಣ ಬೆಂಬಲಕ್ಕೆ ತೆಗೆದುಕೊಳ್ಳಲು ಚಿಂತಿಸಿದೆ. ಹೀಗಾಗಿಯೇ ತಾಲಿಬಾನ್​​ ಸಹ ಸಂಸ್ಥಾಪಕ ಮತ್ತು ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ನೇತೃತ್ವದ ನಿಯೋಗ ಇಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದೆ.

blank

ತಾಲಿಬಾನ್​​ ಮತ್ತು ಚೀನಾ ಸರ್ಕಾರ ಇದುವರೆಗೂ ಇವರ ಭೇಟಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಹೇಗಾದರೂ ಅಫ್ಘಾನ್​​ ಮೇಲೆ ಮತ್ತೆ ದಾಳಿ ನಡೆಸಬೇಕು ಎಂಬ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆಯಂತೆ. ಅಮೆರಿಕ ಸೇನಾ ಪಡೆಯೂ ವಾಪಸಾತಿ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಕಾಲೂರಲು ಚೀನಾ ಮುಂದಾಗಿದೆ. ಇಲ್ಲಿಯೂ ತಮ್ಮ ಅಧಿಪತ್ಯ ಸ್ಥಾಪಿಸಲು ಚೀನಾ ಸರ್ಕಸ್​ ನಡೆಸುತ್ತಿದೆ. ಇದೇ ವೇಳೆ ಅಫ್ಘಾನ್​​ ಶತ್ರುಗಳಾದ ತಾಲಿಬಾನ್​​ ಚೀನಾಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಪಾಕಿಸ್ತಾನ, ಚೀನಾ ಮತ್ತು ತಾಲಿಬಾನ್​​ ಉಗ್ರರು ಈಗ ಅಫ್ಘಾನ್​​​ ದೇಶವನ್ನು ಟಾರ್ಗೆಟ್​​ ಮಾಡಿದ್ದಾರೆ.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಮುಲ್ಲಾ ಅಬ್ದುಲ್ ಘನಿ ಬರಾದರ್ ನೇತೃತ್ವದ ನಿಯೋಗ ಭೇಟಿ ಮಾಡಿರುವ ಫೋಟೋಗಳು ಮಾತ್ರ ಭಾರೀ ವೈರಲ್​​ ಆಗಿವೆ. ತಾಲಿಬಾನ್​​​ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದರ್ ಇದೇ ಮೊದಲ ಬಾರಿ ಚೀನಾಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅಮೆರಿಕಾ ಸಹಾಯದೊಂದಿಗೆ ಆಫ್ಘನ್ ವಾಯುಪಡೆಯು ಇತ್ತೀಚೆಗೆ ಎರಡು ಪ್ರಾಂತ್ಯಗಳಲ್ಲಿ ವೈಮಾನಿಕ ದಾಳಿ ನಡೆಸಿ ನೂರಾರು ತಾಲಿಬಾನ್ ಭಯೋತ್ಪಾದಕರು ಹತ್ಯೆಗೈದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮುಲ್ಲಾ ಅಬ್ದುಲ್ ಘನಿ ಬರಾದರ್ ಚೀನಾಗೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇನ್ನೊಂದೆಡೆ ಕ್ಸಿನ್‌ ಜಿಯಾಂಗ್​​ನಲ್ಲಿ ಉಗ್ರವಾದವನ್ನು ಬಿತ್ತುತ್ತಿರುವ ಈಸ್ಟ್‌ ತುರ್ಕಿಸ್ತಾನ್‌ ಇಸ್ಲಾಮಿಕ್‌ ಮೂವ್‌ ಮೆಂಟ್‌ (ಇಟಿಐಎಂ) ಉಗ್ರ ಸಂಘಟನೆ ಬಗ್ಗೆಯೂ ತಾಲಿಬಾನ್​​ ಮತ್ತು ಚೀನಾ ಪ್ರಮುಖ ಚರ್ಚೆ ನಡೆಸಿದೆ. ಆದಷ್ಟು ಬೇಗ ಅಫ್ಘಾನ್​​ನಲ್ಲಿ ತನ್ನೆಲ್ಲಾ ಕಾರ್ಯಗಳನ್ನು ಪುನರ್‌ ನಿರ್ಮಾಣ ಮಾಡಲು ತಾಲಿಬಾನ್​ ಮತ್ತು ಚೀನಾ ರಹಸ್ಯ ಮಾತುಕತೆ ನಡೆಸಿದ್ದಾರಂತೆ.

ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಅಫ್ಗಾನಿಸ್ತಾನದ ಯುದ್ಧ; 24 ಗಂಟೆಗಳಲ್ಲಿ 262 ಉಗ್ರರು ಬಲಿ

 

The post ಬುದ್ಧನ ಮೂರ್ತಿ ಒಡೆದ ತಾಲಿಬಾನಿಗಳ ಒಲೈಕೆಗೆ ಮುಂದಾದ ಚೀನಾ appeared first on News First Kannada.

Source: newsfirstlive.com

Source link