DCM ಹುದ್ದೆಗಾಗಿ ಅಶೋಕ್ vs ಡಾ.ಅಶ್ವಥ್ ನಾರಾಯಣ್; ಹೈಕಮಾಂಡ್ ಮಣೆ ಯಾರಿಗೆ..?

DCM ಹುದ್ದೆಗಾಗಿ ಅಶೋಕ್ vs ಡಾ.ಅಶ್ವಥ್ ನಾರಾಯಣ್; ಹೈಕಮಾಂಡ್ ಮಣೆ ಯಾರಿಗೆ..?

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಹೊಸ ಹುಮ್ಮಸ್ಸಿನಲ್ಲಿರುವ ಬೊಮ್ಮಾಯಿ ಮುಂದೆ ಅಭಿವೃದ್ಧಿಯ ಕಾರ್ಯಗಳ ಜೊತೆಗೆ ತಮ್ಮ ಜೊತೆಗಿರೋರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗೋದು ದೊಡ್ಡ ಚಾಲೆಂಜ್ ಆಗಿದೆ. ಅದರ ಮುಂದುವರಿದ ಭಾಗವಾಗಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಡಿಸಿಎಂ ಪಟ್ಟದ ವಿಚಾರದಲ್ಲಿ ಮಾಜಿ ಸಚಿವರಾದ ಆರ್​.ಅಶೋಕ್ ಹಾಗೂ ಡಾ.ಅಶ್ವಥ್ ನಾರಾಯಣ್ ಮಧ್ಯೆ ದೊಡ್ಡ ಫೈಟ್ ನಡೆದಿದೆ ಎನ್ನಲಾಗಿದೆ.

ನಿನ್ನೆ ನೂತನ ಮುಖ್ಯಮಂತ್ರಿ ಘೋಷಣೆ ಬೆನ್ನಲ್ಲೇ ಮೂವರು ಡಿಸಿಎಂಗಳ ಹೆಸರು ಕೂಡ ಬಿಜೆಪಿ ಪ್ರಸ್ತಾಪಿಸಿದೆ. ಆದರೆ ಬಿಜೆಪಿ ಹೈಕಮಾಂಡ್​ ಅದನ್ನೂ ಇನ್ನೂ ಅಧಿಕೃತಗೊಳಿಸಿಲ್ಲ. ಮಾಜಿ ಸಚಿವರಾದ ಶ್ರೀರಾಮುಲು, ಆರ್​.ಅಶೋಕ್ ಹಾಗೂ ಗೋವಿಂದ ಕಾರಜೋಳ ಅವರನ್ನ ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಆದರೆ ಕೆಲವು ಮಾಹಿತಿಗಳ ಪ್ರಕಾರ ಡಿಸಿಎಂ ಸ್ಥಾನವನ್ನ ಉಳಿಸಿಕೊಳ್ಳಲು ಡಾ.ಅಶ್ವಥ್ ನಾರಾಯಣ್ ತೀವ್ರ ಫೈಟ್ ನೀಡಿದ್ದಾರೆ. ಅದರಂತೆ ಹೊಸದಾಗಿ ಡಿಸಿಎಂ ಪಟ್ಟವನ್ನ ಅಲಂಕರಿಸಲು ಆರ್​.ಅಶೋಕ್ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೂವರು ಸಂಭಾವ್ಯ DCM ಗಳಾದ ಆರ್​.ಅಶೋಕ್, ಗೋವಿಂದ್ ಕಾರಜೋಳ ಮತ್ತು ಶ್ರೀರಾಮುಲು ಅವರು ಆತಂಕದಲ್ಲಿದ್ದಾರೆ ಎನ್ನಲಾಗಿದೆ.

ಯಾಕೆ ಆತಂಕ..?
ಸಿಎಂ ಆಯ್ಕೆ ಸಂಬಂಧ ಬಿಜೆಪಿ ಹೈಕಮಾಂಡ್ ನಿನ್ನೆ ರಾಜ್ಯಕ್ಕೆ ವೀಕ್ಷಕರನ್ನ ಕಳುಹಿಸಿತ್ತು. ಈ ವೇಳೆ ಕೇಂದ್ರದ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಅವರನ್ನ ಆರ್ ಅಶೋಕ್ ಭೇಟಿಯಾಗಿದ್ದರು. ಈ ವೇಳೆ ಮೂವರು DCMಗಳ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡುವಂತೆ ಅಶೋಕ್ ಮನವಿ ಮಾಡಿಕೊಂಡಿದ್ದರು.
ಅಶೋಕ್ ಮನವಿಗೆ ಧರ್ಮೇಂದ್ರ ಪ್ರಧಾನ್ ಸ್ಪಂದಿಸಿಲ್ಲ. ಅದನ್ನ ಹೈಕಮಾಂಡ್ ದೆಹಲಿಯಲ್ಲಿ ನಿರ್ಧರಿಸುತ್ತದೆ ಎಂದ ಧರ್ಮೇಂದ್ರ ಪ್ರಧಾನ್ ಅಶೋಕ್ ಅವರಿಗೆ ತಿಳಿಸಿದ್ದಾರೆ. ಇದರಿಂದ ಅಶೋಕ್​ಗೆ ಆತಂಕ ಶುರುವಾಗಿದೆ. ಇದೇ ವೇಳೆ ಮಾಜಿ DCM ಅಶ್ವಥ್ ನಾರಾಯಣ್ ಸಹ DCM ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಅದರಂತೆ ಇತರೆ ರಾಜ್ಯಗಳ ಪ್ರಭಾವಿ ನಾಯಕರ ಬಳಿ ಅಶ್ವಥ್ ನಾರಾಯಣ್ ಲಾಬಿ ಶುರು ಮಾಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಅಶ್ವಥ್ ನಾರಾಯಣ್ ಅವರನ್ನ ಬದಲಾಯಿಸಿದರೆ ಮಾತ್ರ ಆ ಸ್ಥಾನಕ್ಕೆ ಅಶೋಕ್ ಹೆಸರು ನೇಮಕವಾಗಲಿದೆ. ಈ ಹಿನ್ನಲೆ DCM ಸ್ಥಾನಕ್ಕಾಗಿ ಅಶೋಕ್ ಹಾಗೂ ಅಶ್ವಥ್ ನಾರಾಯಣ ಮಧ್ಯೆ ಬಹು ದೊಡ್ಡ ಪೈಪೋಟಿ ಶುರುವಾಗಿದೆ. ಇಬ್ಬರ ಮಧ್ಯೆ ಯಾರು ಗೆಲ್ತಾರೆ ಅನ್ನೋದು ಕೂಡ ಅಷ್ಟೇ ದೊಡ್ಡ ಕುತೂಹಲ ಮೂಡಿಸಿದೆ.

The post DCM ಹುದ್ದೆಗಾಗಿ ಅಶೋಕ್ vs ಡಾ.ಅಶ್ವಥ್ ನಾರಾಯಣ್; ಹೈಕಮಾಂಡ್ ಮಣೆ ಯಾರಿಗೆ..? appeared first on News First Kannada.

Source: newsfirstlive.com

Source link